ಉತ್ತಮ ಸೌಂದರ್ಯವರ್ಧಕ ತೆಂಗಿನೆಣ್ಣೆಯ ಬ್ಯೂಟಿ ಹ್ಯಾಕ್ಸ್
ಸೋಂಕುಗಳಿಗೆ ಚಿಕಿತ್ಸೆ, ರೋಗನಿರೋಧಕ ಶಕ್ತಿ ವರ್ಧಕ ತೆಂಗಿನ ಎಣ್ಣೆ ಚರ್ಮ ಹಾಗೂ ಕೂದಲಿನ ಆರೋಗ್ಯಕ್ಕೂ ಪ್ರಯೋಜನಕಾರಿ. ತೆಂಗಿನೆಣ್ಣೆಯ ಕೆಲವು ಬ್ಯೂಟಿ ಹ್ಯಾಕ್ಸ್ ಬಗ್ಗೆ ತಿಳಿಯೋಣ...
ತೆಂಗಿನೆಣ್ಣೆ ಚರ್ಮ ಆರ್ಧ್ರಕೀಕರಣಕ್ಕಾಗಿ ಅತ್ಯುತ್ತಮ ಪರಿಹಾರ.
ತೆಂಗಿನೆಣ್ಣೆಯನ್ನು ಬುಡದಿಂದ ತುದಿಯವರೆಗೂ ಕೂದಲಿಗೆ ಹಚ್ಚಿ, ರಾತ್ರಿಯಿಡೀ ಹಾಗೆ ಬಿಡುವುದರಿಂದ ಇದು ಕೂದಲಿಗೆ ಉತ್ತಮ ಕಂಡಿಷನರ್ ಆಗಿ ಕಾರ್ಯನಿರ್ವಹಿಸುತ್ತದೆ.
ಕೂದಲು ಒಡೆಯುವಿಕೆ ಅಥವಾ ಸ್ಪ್ಲಿಟ್ ಹೇರ್ ಸಮಸ್ಯೆಗೆ ತೆಂಗಿನೆಣ್ಣೆ ಬೆಸ್ಟ್ ಮನೆಮದ್ದು. ಇದಕ್ಕಾಗಿ ಕೂದಲಿನ ತುದಿಯವರೆಗೂ ಎಣ್ಣೆ ಹಚ್ಚಿ 10 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿ.
ಪುದೀನಾ ಎಣ್ಣೆಯೊಂದಿಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಬೆರೆಸಿ ನೋಯುತ್ತಿರುವ ಸ್ನಾಯುಗಳ ಮೇಲೆ ಅನ್ವಯಿಸುವುದರಿಂದ ನೋವು ನಿವಾರಣೆಯಾಗುತ್ತದೆ.
ಸಾಕಷ್ಟು ನೀರು ಕೂಡಿದರೂ ತುಟಿ ಒಡೆಯುತ್ತಿದೆಯೇ? ಇದನ್ನು ತಡೆಯಲು ಒಂದೇ ಒಂದು ಹನಿ ತೆಂಗಿನೆಣ್ಣೆಯನ್ನು ತುಟಿಗೆ ಲೇಪಿಸಿ.
ತೆಂಗಿನೆಣ್ಣೆ ಚರ್ಮಕ್ಕೆ ಅತ್ಯುತ್ತಮ ಮಾಯ್ಶ್ಚರೈಸರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಚರ್ಮಕ್ಕೆ ತೆಂಗಿನೆಣ್ಣೆ ಬಳಕೆಯಿಂದ ಡ್ರೈ ನೆಸ್, ತುರಿಕೆ ಸಮಸ್ಯೆಯನ್ನು ನಿವಾರಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.