ಕಾಂತಿಯುತ ತ್ವಚೆ ನಿಮ್ಮದಾಗಿಸಲು ಮಾವಿನ ಹಣ್ಣನ್ನು ಈ ರೀತಿ ಬಳಸಿ
ತಿನ್ನಲು ರುಚಿಕರವಾದ ಮಾವಿನ ಹಣ್ಣನ್ನು ಚರ್ಮದ ಆರೋಗ್ಯಕ್ಕೂ ಕೂಡ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮಾವು ಸ್ಕಿನ್ ಟ್ಯಾನಿಂಗ್, ಸುಕ್ಕುಗಳಿಂದ ಪರಿಹಾರ ನೀಡುವುದರ ಜೊತೆಗೆ ಕಾಂತಿಯುತ ತ್ವಚೆಯನ್ನು ಪಡೆಯಲು ಸಹ ತುಂಬಾ ಪ್ರಯೋಜನಕಾರಿ ಆಗಿದೆ. ಹೊಳೆಯುವ ತ್ವಚೆಯನ್ನು ಪಡೆಯಲು ಮಾವಿನ ಹಣ್ಣನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...
ಯಾವುದೇ ರೀತಿಯ ಫೇಸ್ ಪ್ಯಾಕ್ ಬಳಕೆಯಿಂದ ಡೆಡ್ ಸ್ಕಿನ್ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು. ಮಾವು ಮತ್ತು ಓಟ್ ಮೀಲ್ ನಿಂದ ತಯಾರಿಸಿದ ಫೇಸ್ ಪ್ಯಾಕ್ ಬಳಕೆಯಿಂದ ಚರ್ಮದ ಹಲವು ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಇದಕ್ಕಾಗಿ ಮೊದಲು 1 ಮಾವಿನ ಹಣ್ಣನ್ನು ತೆಗೆದುಕೊಂಡು ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ. ಇದಕ್ಕೆ 3 ಚಮಚ ಓಟ್ಸ್ ಪುಡಿಯನ್ನು ಸೇರಿಸಿ ಮತ್ತು 7-8 ನೆನೆಸಿದ ಬಾದಾಮಿ ಅನ್ನು ಸೇರಿಸಿ ರುಬ್ಬಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿದರೆ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.
ಈ ಫೇಸ್ ಪ್ಯಾಕ್‌ಗಾಗಿ, ಒಂದು ಬೌಲ್‌ನಲ್ಲಿ 4 ಚಮಚ ಹಸಿ ಮಾವಿನಕಾಯಿ ಪೇಸ್ಟ್, 2 ಚಮಚ ಬೇಳೆ, 1 ಚಮಚ ಜೇನುತುಪ್ಪ, 1 ಟೀಸ್ಪೂನ್ ಮೊಸರು, 1/4 ಟೀಸ್ಪೂನ್ ಅರಿಶಿನ ಪುಡಿಯನ್ನು ತೆಗೆದುಕೊಂಡು, ಅದನ್ನು ನಯವಾಗಿ ರುಬ್ಬಿಕೊಳ್ಳಿ. ಬಳಿಕ ಈ ಫೇಸ್ ಪ್ಯಾಕ್ ಅನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ, ಪೂರ್ತಿಯಾಗಿ ಒಣಗಿದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ಇದು ಸ್ಕಿನ್ ಟ್ಯಾನ್ ಮತ್ತು ಕಲೆಗಳನ್ನು ಹೋಗಲಾಗಿಸಲು ತ್ಂಬಾ ಪ್ರಯೋಜನಕಾರಿ ಆಗಿದೆ.
ಮಾವು ಮತ್ತು ಪಪ್ಪಾಯಿಯಿಂದ ತಯಾರಿಸಿದ ಫೇಸ್ ಪ್ಯಾಕ್‌ನ ನಿಯಮಿತ ಬಳಕೆಯು ನಿಮಗೆ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಸುಲಭ ಪರಿಹಾರ ನೀಡುತ್ತದೆ.
ಮಾವು ಮತ್ತು ರೋಸ್ ವಾಟರ್ ಫೇಸ್ ಪ್ಯಾಕ್ ಅನ್ನು ನಿಯಮಿತವಾಗಿ ತ್ವಚೆಗೆ ಬಳಸುವುದರಿಂದ ತ್ವಚೆ ಹೈಡ್ರೇಟ್ ಆಗುವುದರ ಜೊತೆಗೆ ತುಂಬಾ ಆಕರ್ಷಕವಾಗಿಯೂ ಕಾಣುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.