ರಚಿತಾ ರಾಮ್ ಸಹೋದರಿ ತೆಲುಗಿನ ಪ್ರಸಿದ್ಧ ನಟಿ.. ಕನ್ನಡ ಕಿರುತೆರೆಯಲ್ಲೂ ಫುಲ್‌ ಫೇಮಸ್‌.. ತಂಗಿಯನ್ನೂ ಮೀರಿಸುವ ಅಂದಗಾತಿ ಯಾರು ಗೊತ್ತೇ?

Mon, 23 Sep 2024-7:36 pm,
Rachita Ram sister Nithya Ram

ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್ ಸಹೋದರಿ ಹೆಸರು ನಿತ್ಯಾ ರಾಮ್.

Rachita Ram sister Nithya Ram

ನಿತ್ಯಾ ರಾಮ್ ಸಹ ಪ್ರಸಿದ್ಧ ನಟಿ. ತೆಲುಗಿನಲ್ಲಿ ನಿತ್ಯಾ ರಾಮ್ ಸಿಕ್ಕಾಪಟ್ಟೆ ಕ್ರೇಜ್‌ ಕ್ರಿಯೇಟ್‌ ಮಾಡಿದವರು.

Rachita Ram sister Nithya Ram

ರಚಿತಾ ರಾಮ್ ಅಕ್ಕ ನಿತ್ಯಾ ರಾಮ್ ತೆಲುಗು ಮತ್ತು ತಮಿಳಿನಲ್ಲಿ ನಟಿಸಿ ಟಾಪ್‌ ಹಿರೋಯಿನ್‌ ಎನಿಸಿಕೊಂಡಿದ್ದಾರೆ. 

ನಿತ್ಯಾ ರಾಮ್ ಕನ್ನಡ, ತೆಲಗು ಮತ್ತು ತಮಿಳು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಜನಪ್ರಿಯ ನಟಿ ಆಗಿದ್ದಾರೆ.

ನಿತ್ಯಾ ರಾಮ್ ಕಿರುತೆರೆಯ ಮೂಲಕವೇ ಫೇಮಸ್‌ ಆದವರು. ಸೀರಿಯಲ್‌ ಲೋಕದಲ್ಲಿ ಮಿಂಚುವ ತಾರೆ. ನಂದಿನಿ ಪಾತ್ರದ ಮೂಲಕ ಖ್ಯಾತಿ ಪಡೆದರು. 

ಮದುವೆ ಆದ್ಮೇಲೆ ನಟನೆಯಿಂದ ದೂರ ಸರಿದಿದ್ದ ನಿತ್ಯಾ ರಾಮ್, ಐದು ವರ್ಷಗಳ ಬಳಿಕ ಶಾಂತಿ ನಿವಾಸ ಎಂಬ ಕನ್ನಡ ಸೀರಿಯಲ್‌ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಬಂದಿದ್ದಾರೆ.

ಗೌತಮ್‌ ಎಂಬುವವರ ಜೊತೆ ನಿತ್ಯಾ ರಾಮ್‌ ಮದುವೆಯಾಗಿದ್ದಾರೆ. ಬೆಂಕಿಯಲ್ಲಿ ಅರಳಿದ ಹೂವು ಎಂಬ ಕನ್ನಡ ಧಾರಾವಾಹಿಯ ಮೂಲಕ ನಿತ್ಯಾ ರಾಮ್ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. 

ಕರ್ಪೂರದ ಗೊಂಬೆ, ರಾಜಕುಮಾರಿ, ಎರಡು ಕನಸು, ಗಿರಿಜಾ ಕಲ್ಯಾಣ, ನಂದಿನಿ, ಹೀಗೆ ಹಲವಾರು ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸಿ ಜನರ ಹೃದಯ ಗೆದ್ದಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link