ಫೋನ್‌ನಲ್ಲಿ ಇಂಟರ್ನೆಟ್ ಸರಿಯಾಗಿ ಕೆಲಸ ಮಾಡ್ತೀಲ್ವಾ? ಜಸ್ಟ್ ಈ ಟಿಪ್ಸ್ ಅನುಸರಿಸಿ
ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್‌ನೆಟ್ ಅತ್ಯಗತ್ಯ. ಈಗಂತೂ ಪ್ರಸಿದ್ದ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್ ಮತ್ತು ಜಿಯೋ ತನ್ನ ಗ್ರಾಹಕರಿಗಾಗಿ 5ಜಿ ಇಂಟರ್ನೆಟ್ ಸೇವೆಯನ್ನು ಆರಂಭಿಸಿವೆ. ಆದಾಗ್ಯೂ, ಫೋನ್‌ನಲ್ಲಿ ಇಂಟರ್ನೆಟ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ 4ಜಿ, 5ಜಿ ಯಾವುದೇ ಇಂಟರ್‌ನೆಟ್ ಇದ್ದರೂ ವ್ಯರ್ಥ. ನೀವೂ ಕೂಡ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್‌ನೆಟ್ ವೇಗವನ್ನು ಹೆಚ್ಚಿಸಲು ಕೆಲವು ಸಿಂಪಲ್ ಹಂತಗಳನ್ನು ಅನುಸರಿಸಿದರೆ ಅಷ್ಟೇ ಸಾಕು.
ನಿಮ್ಮ ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಮಾಡಬೇಕಾದ ಮೊದಲ ಕೆಲಸ ನಿಮ್ಮ ಮೊಬೈಲ್ ಡೇಟಾವನ್ನು ಆಫ್ ಮಾಡಿ ನಂತರ ಮತ್ತೆ ಆನ್ ಮಾಡಿ.ಲ ಇದು ನಿಮ್ಮ ಫೋನ್‌ನಲ್ಲಿ ನೆಟ್‌ವರ್ಕ್ ಸಂಪರ್ಕವನ್ನು ಮರುಹೊಂದಿಸಲು ಸಹಾಯ ಮಾಡುತ್ತದೆ.
ಇದಲ್ಲದೆ, ನಿಮ್ಮ ಫೋನ್ ಅನ್ನು ಏರೋಪ್ಲೇನ್ ಮೂಡ್ ಗೆ ಹಾಕಿ ಮತ್ತೆ ಅದನ್ನು ಆನ್ ಮಾಡುವ ಮೂಲಕವೂ ನಿಮ್ಮ ಇಂಟರ್ನೆಟ್ ಅನ್ನು ವೇಗಗೊಳಿಸಬಹುದು.
ನಿಮ್ಮ ಫೋನ್ ಇಂಟರ್ನೆಟ್ ವೇಗಗೊಳಿಸಲು ಇರುವ ಮತ್ತೊಂದು ಸುಲಭ ಮಾರ್ಗವೆಂದರೆ ಫೋನ್ ರೀಸ್ಟಾರ್ಟ್ ಮಾಡುವುದು. ಈ ರೀತಿ ಮಾಡುವುದರಿಂದಲೂ ಕೂಡ ನೆಟ್‌ವರ್ಕ್ ಸಮಸ್ಯೆಯನ್ನು ಸರಿಪಡಿಸಬಹುದು.
ನಿಮ್ಮ ಫೋನ್ ನಲ್ಲಿ ನೆಟ್‌ವರ್ಕ್ ಸ್ಲೊ ಇದ್ದಾಗ ಮೊದಲು ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ. ನಿಮ್ಮ ನೆಟ್‌ವರ್ಕ್‌ಗೆ ಸಂಬಂಧಿಸಿದ ಎಲ್ಲಾ ಸೆಟ್ಟಿಂಗ್‌ಗಳನ್ನು ಸರಿಯಾಗಿ ಕಾನ್ಫಿಗರ್ ಮಾಡಿ ಫೋನ್ ಅನ್ನು ಮತ್ತೆ ಆಫ್ ಮಾಡಿ ಆನ್ ಮಾಡಿ.
ಕೆಲವೊಮ್ಮೆ ಸಿಮ್ ಕಾರ್ಡ್ ನಲ್ಲಿ ಸಣ್ಣ ಪುಟ್ಟ ಸಮಸ್ಯೆಯಿದ್ದರೂ ಕೂಡ ಇದು ನೆಟ್‌ವರ್ಕ್ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ, ಮೇಲಿನ ಎಲ್ಲಾ ಉಪಾಯಗಳನ್ನು ಅನುಸರಿಸಿದ ಬಳಿಕವೂ ನಿಮ್ಮ ನೆಟ್‌ವರ್ಕ್ ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಒಮ್ಮೆ ನಿಮ್ಮ ಸಿಮ್ ಕಾರ್ಡ್ ಪರಿಶೀಲಿಸಿ.