ಮನೆಯಲ್ಲೇ ಕುಳಿತು ಡೀಸೆಲ್ ಖರೀದಿಸಲು ಇಲ್ಲಿ ಮಾತ್ರ ಅವಕಾಶ

Thu, 12 Apr 2018-4:53 pm,

ಈಗ ನೀವು ಮನೆಯಲ್ಲೇ ಕುಳಿತು ಪೆಟ್ರೋಲ್-ಡೀಸೆಲ್ ಖರೀದಿಸಬಹುದು. ಐಓಸಿ(ಇಂಡಿಯನ್ ಆಯಿಲ್ ಕಾರ್ಪೊರೇಷನ್) ಪುಣೆನಲ್ಲಿ ಡೀಸೆಲ್ ಅನ್ನು ಹೋಂ ಡೆಲಿವರಿ ನೀಡುತ್ತಿದೆ. ಆರಂಭದಲ್ಲಿ, ಕಂಪನಿಯು ಡೀಸೆಲ್ ಅನ್ನು ಮಾತ್ರ ಮನೆಗೆ ವಿತರಿಸುತ್ತಿದೆ. ನಂತರ, ಅವರು ಪೆಟ್ರೋಲ್ ಸೇವೆಯನ್ನು ಕೂಡ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಹೊಂದಿದ್ದಾರೆ. ವಾಸ್ತವವಾಗಿ, ದೇಶದ ಅತಿದೊಡ್ಡ ತೈಲ ಮಾರ್ಕೆಟಿಂಗ್ ಕಂಪೆನಿ, ಐಓಸಿ ಹೊಸ ಸೇವೆ ಪ್ರಾರಂಭಿಸಿದೆ. ಕಂಪನಿಯು ಈಗ ಡೀಸೆಲ್ ಅನ್ನು ಮನೆ ಬಾಗಿಲಿಗೆ ವಿತರಿಸುವ ಸೇವೆಯನ್ನು ಪ್ರಾರಂಭಿಸಿದೆ.

 

ಐಓಸಿ ಅಧ್ಯಕ್ಷ ಸಂಜೀವ್ ಸಿಂಗ್ ಕಂಪೆನಿಯು ಪುಣೆಯಲ್ಲಿ ಡೀಸೆಲ್ ಅನ್ನು ಮನೆಗೆ ತಲುಪಿಸುವ ಸೇವೆಯನ್ನು ಪರಿಚಯಿಸಿದೆ. ಶೀಘ್ರದಲ್ಲೇ ದೇಶದಾದ್ಯಂತ ಅದನ್ನು ಅನ್ವಯಿಸುವುದು ಕಂಪನಿಯ ಗುರಿ ಎಂದು ತಿಳಿಸಿದರು. ಮಾರ್ಚ್ 20, 2018 ರಂದು ಕಂಪನಿಯು ಈ ಸೇವೆಯನ್ನು ಪ್ರಾರಂಭಿಸಿದೆ. ಕಂಪನಿಯು ಟ್ರಕ್ನಲ್ಲಿ ಡೀಸೆಲ್ ತುಂಬುವ ಯಂತ್ರವನ್ನು ಸ್ಥಾಪಿಸಿದೆ. ಈ ಯಂತ್ರವು ಪೆಟ್ರೋಲ್ ಪಂಪ್ಗಳಂತೆಯೇ ಇದೆ. ಒಂದು ಟ್ಯಾಂಕ್ ಸಹ ಟ್ರಕ್ಗೆ ಲಗತ್ತಿಸಲಾಗಿದೆ. ಇದರ ಮೂಲಕ, ನಗರದ ಜನರಿಗೆ ಡೀಸೆಲ್ ಮನೆಯ ಬಾಗಲನ್ನು ತಲುಪಲಿದೆ. ಇದಕ್ಕಾಗಿ ನೀವು ಯಾವುದೇ ಇತರ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

ಪೆಟ್ರೋಲ್ ಹೋಂ ಡೆಲಿವೆರಿ ಸೌಲಭ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಐಓಸಿ, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಎಚ್ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಇತರ ಕಂಪೆನಿಗಳು ಹೋಂ ಡೆಲಿವೆರಿ ಸೌಲಭ್ಯದ ಬಗ್ಗೆ ಅನುಮೋದನೆಯನ್ನು ಪಡೆದಿವೆ. ಈ ಕಂಪನಿಗಳು ದೇಶದ ಇತರ ಭಾಗಗಳಲ್ಲಿ ಪೈಲಟ್ ಯೋಜನೆಗಳನ್ನು ನಡೆಸುತ್ತವೆ. ಮೊದಲ ಡೀಸೆಲ್ ಮತ್ತು ಅದರ ಯಶಸ್ವಿ ಪರೀಕ್ಷೆಯ ನಂತರ, ಪೆಟ್ರೋಲ್ನ ವಿತರಣೆಯನ್ನು ಪ್ರಾರಂಭಿಸಲಾಗುವುದು.

ಪೆಟ್ರೋಲಿಯಂ ಮತ್ತು ಸ್ಫೋಟಕ ಪ್ರೊಟೆಕ್ಷನ್ ಆರ್ಗನೈಸೇಶನ್ (ಪಿಇಎಸ್ಓ) ಯಿಂದ ಅನುಮೋದನೆ ಪಡೆದ ನಂತರ ಐಒಸಿ ಇಂತಹ ಸೇವೆ ಪ್ರಾರಂಭಿಸುವ ಮೊದಲ ಕಂಪನಿ ಎಂದು ಐಓಸಿ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ. ಇದೀಗ, ಪ್ರಾಯೋಗಿಕ ಆಧಾರದ ಮೇಲೆ ಇದನ್ನು ಪ್ರಾರಂಭಿಸಲಾಗಿದೆ. ಮೂರು ತಿಂಗಳ ಪ್ರಾಯೋಗಿಕ ಅವಧಿಯಲ್ಲಿ ಪಡೆದಿರುವ ಅನುಭವಗಳ ಆಧಾರದ ಮೇಲೆ ಇತರ ನಗರಗಳಲ್ಲಿ ಇದನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.

ಕೆಲವು ದಿನಗಳ ಹಿಂದೆಯೇ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಈಗಾಗಲೇ ಈ ಮಾಹಿತಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಐಓಸಿ ಪ್ರಕಾರ, ಡೀಸೆಲ್ ಅನ್ನು ಮನೆ ಬಾಗಿಲಿಗೆ ಸಾಗಿಸಲು ಮೊಬೈಲ್ ಡಿಸ್ಪೆನ್ಸರ್ ಪ್ರಥಮ ಯಂತ್ರವಾಗಿದೆ. ಗ್ರಾಹಕರ ಸಮಸ್ಯೆಯನ್ನು ಪರಿಗಣಿಸಿ, ಈ ಹಂತವನ್ನು ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಇದನ್ನು ಘೋಷಿಸಿದ್ದರು. ಪೆಟ್ರೋಲಿಯಂ ವಲಯದಲ್ಲಿ ಐಟಿ ಮತ್ತು ಟೆಲಿಕಾಂನಂತಹ ತಂತ್ರಜ್ಞಾನವನ್ನು ಸಹ ಬಳಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಶೀಘ್ರದಲ್ಲೇ, ಪೆಟ್ರೋಲ್ ಮತ್ತು ಡೀಸೆಲ್ ಮನೆಯ ವಿತರಣೆಯನ್ನು ಪ್ರಾರಂಭಿಸಲಾಗುವುದು.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link