Hero MotoCorp Price Hike: ಹಿರೋ ಬೈಕ್ ಮತ್ತು ಸ್ಕೂಟರ್ ಬೆಲೆಯಲ್ಲಿ ಹೆಚ್ಚಳ, ಯಾವ ವಾಹನಕ್ಕೆ ಎಷ್ಟು ಬೆಲೆ ತಿಳಿಯಿರಿ

Wed, 23 Jun 2021-9:52 am,

ಹೀರೋ ಮೊಟೊಕಾರ್ಪ್ ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಜುಲೈ 1, 2021 ರಿಂದ ಜಾರಿಗೆ ತರುವುದಾಗಿ ಘೋಷಿಸಿದೆ. ವಾಹನದ ಮೇಲಿನ ಬೆಲೆಯನ್ನು 3,000 ರೂ ವರೆಗೆ ಹೆಚ್ಚಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಈ ಬೆಲೆ ಏರಿಕೆ ಮಾದರಿ ಮತ್ತು ಮಾರುಕಟ್ಟೆಯನ್ನು ಅವಲಂಬಿಸಿರಲಿದೆ. ಏಪ್ರಿಲ್ 2021 ರಲ್ಲಿ ಕಂಪನಿಯು ತನ್ನ ವಾಹನಗಳ ಬೆಲೆಯನ್ನು, 2,500 ವರೆಗೆ ಹೆಚ್ಚಿಸಿತ್ತು.

 ಮೇ 2021 ರಲ್ಲಿ, ಕಂಪನಿಯ ಮಾಸಿಕ ಮಾರಾಟವು 50.83 ಪ್ರತಿಶತದಷ್ಟು ಕುಸಿದಿದೆ. ಕಂಪನಿಯು ಲಾಕ್‌ಡೌನ್ ಪರಿಣಾಮವನ್ನು ಕೂಡಾ ಎದುರಿಸುತ್ತಿದೆ. ಇದೀಗ ಬೆಲೆ ಹೆಚ್ಚಳ ಕೂಡಾ ಮಾರಾಟದ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ. ಉತ್ತಮ ಮಾನ್ಸೂನ್ ಮುನ್ಸೂಚನೆಯೊಂದಿಗೆ, ಜುಲೈ ಮತ್ತು ಆಗಸ್ಟ್ 2021 ರಲ್ಲಿ ವಾಹನಗಳ ಬೇಡಿಕೆ ಹೆಚ್ಚಾಗಬಹುದು ಎನ್ನಲಾಗಿದೆ.

ಕಚ್ಚಾ ವಸ್ತುಗಳು ಮತ್ತು ಸರಕುಗಳ ಬೆಲೆಯಲ್ಲಿ ನಿರಂತರ ಹೆಚ್ಚಳದಿಂದಾಗಿ ಕಂಪನಿಯ ಮೇಲಾಗುವ ಪರಿಣಾಮವನ್ನು ಸರಿದೂಗಿಸಲು ಬೆಲೆ ಏರಿಕೆ ಅಗತ್ಯವಾಗಿದೆ ಎಂದು ಕಂಪನಿ ಹೇಳಿದೆ. ತನ್ನ ಗ್ರಾಹಕರ ಮೇಲಿನ ಪರಿಣಾಮವನ್ನು ಕಡಿಮೆ ಮಾಡಲು ಕೆಲ ಕಾರ್ಯಕ್ರಮವನ್ನು ಮುಂದುವರಿಸುವುದಾಗಿಯೂ ಕಂಪನಿ ಹೇಳಿದೆ. ಇದಕ್ಕೂ ಮುಂಚೆಯೇ, ಕಂಪನಿಯು ತನ್ನ ದ್ವಿಚಕ್ರ ವಾಹನಗಳ ಬೆಲೆಯನ್ನು ಏಪ್ರಿಲ್ 2021 ರಲ್ಲಿ, 2,500 ವರೆಗೆ ಹೆಚ್ಚಿಸಿತ್ತು.  

 ಮೇ 2021 ರಲ್ಲಿ ದೇಶದಲ್ಲಿ ಕೊರೊನಾವೈರಸ್ ಹರಡುವುದನ್ನು ಗಮನದಲ್ಲಿಟ್ಟುಕೊಂಡು ಪ್ಲಾಂಟ್ ನಲ್ಲಿ ಕೆಲಸ ಸ್ಥಗಿತಗೊಳಿಸಿದ್ದರಿಂದ ಮಾರಾಟದಲ್ಲೂ ಬಹಳ ಕೆಟ್ಟ ಪರಿಣಾಮ ಬೀರಿದೆ. ಹೀರೋ ಮೊಟೊಕಾರ್ಪ್ ಇತ್ತೀಚೆಗೆ ಹೀರೋ ಕೋಲ್ಯಾಬ್ಸ್ ಡಿಸೈನ್ ಚಾಲೆಂಜ್‌ನ ನಾಲ್ಕನೇ ಆವೃತ್ತಿಯನ್ನು ಪ್ರಕಟಿಸಿದೆ. ಕಂಪನಿಯ ಪ್ರಕಾರ, ಹೊಸ ಹೀರೋ CoLabs  ಚಾಲೆಂಜ್ ಅನ್ನುಆರ್ಕಿಟೆಕ್ಟ್ , ಇಂಟಿರಿಯರ್  ಇಂಜಿನಿಯರ್ ಮತ್ತು ಉತ್ಸಾಹಿಗಳಿಗೆ ತಮ್ಮ ತಾಂತ್ರಿಕ ಕೌಶಲ್ಯ, ಮತ್ತು ವಿನ್ಯಾಸ ಸಾಮರ್ಥ್ಯಗಳನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link