ಈ ಹೂವನ್ನು ಅರೆದು ಹಚ್ಚಿದರೆ.. ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುವುದು, ದಟ್ಟವಾಗಿ ಸೊಂಟದಾಟಿ ಬೆಳೆಯುವುದು!

Tue, 17 Dec 2024-6:44 pm,

Coconut oil For White Hair:  ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬಿಳಿಯಾಗಿದ್ದರೆ ಈ ಎಣ್ಣೆಯನ್ನು ಹಚ್ಚಬಹುದು. ಈ ಎಣ್ಣೆಯನ್ನು ತಯಾರಿಸುವ ವಿಧಾನ ಮತ್ತು ಅದರ ಪ್ರಯೋಜನಗಳನ್ನು ತಿಳಿಯೋಣ.

ಬಿಳಿ ಕೂದಲಿನ ಸಮಸ್ಯೆಯಿಂದ ಬಳಲುತ್ತಿರುವವರು ಈ ಹೂವಿನಿಂದ ತಯಾರಿಸಿದ ಎಣ್ಣೆಯನ್ನು ಪ್ರತಿದಿನ ಬಳಸಬೇಕು. ಇದರಲ್ಲಿರುವ ಆಯುರ್ವೇದ ಗುಣಗಳಿಂದ ಬಿಳಿ ಕೂದಲು ಸುಲಭವಾಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. 

ದಾಸವಾಳದ ಗಿಡವು ಹೆಚ್ಚಿನವರ ಮನೆಯ ಅಂಗಳದಲ್ಲಿ ಕಂಡುಬರುತ್ತದೆ. ಈ ಹೂವಿನಲ್ಲಿ ಹಲವಾರು ಔಷಧೀಯ ಅಂಶಗಳಿವೆ. ದಾಸವಾಳವನ್ನು ಅನೇಕ ರೋಗಗಳಿಗೆ ನೈಸರ್ಗಿಕ ಔಷಧಿಯಾಗಿ ಬಳಸಲಾಗುತ್ತದೆ.  ಹಲವಾರು ಕೂದಲಿನ ಸಮಸ್ಯೆಗಳಿಗೂ ತುಂಬಾ ಉಪಯುಕ್ತವಾಗಿದೆ. 

ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿ ಬಣ್ಣಕ್ಕೆ ತಿರುಗಿದ್ದರೆ, ತಲೆಹೊಟ್ಟು, ಕೂದಲು ಉದುರುವಿಕೆ ಅಥವಾ ಶುಷ್ಕತೆಯಂತಹ ಸಮಸ್ಯೆಗಳಿದ್ದರೆದಾಸವಾಳದ ಹೂವುಗಳನ್ನು ಬಳಸಿ ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 

ಒಂದು ಚಮಚ ಆಮ್ಲಾ ರಸವನ್ನು ಒಂದು ಚಮಚ ದಾಸವಾಳದ ಹೂವಿನ ಪುಡಿಯೊಂದಿಗೆ ತೆಗೆದುಕೊಂಡು, ಅರ್ಧ ಕಪ್ ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ. ಈ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚಿ. ರಾತ್ರಿಯಿಡೀ ಹಾಗೆ ಬಿಟ್ಟು ಬೆಳಿಗ್ಗೆ ಕೂದಲನ್ನು ತೊಳೆಯಿರಿ. ಕೂದಲು ಬಿಳಿಯಾಗುವುದು ನಿಲ್ಲುತ್ತದೆ

ದಾಸವಾಳದ ಪುಡಿ ಮತ್ತು ಆಮ್ಲಾ ಪುಡಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ನೀರು ಸೇರಿಸಿ ದಪ್ಪನೆಯ ಪೇಸ್ಟ್ ಮಾಡಿ ಕೂದಲಿಗೆ ಹಚ್ಚಿ. ದಾಸವಾಳದ ಹೂವುಗಳು ಅಮೈನೋ ಆಮ್ಲಗಳನ್ನು ಹೊಂದಿರುತ್ತವೆ, ಇದು ಕೂದಲನ್ನು ಪೋಷಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ.

ಕೂದಲು ಒಣಗಿದ್ದರೆ ದಾಸವಾಳದ ಹೂವಿನ ಪುಡಿಯನ್ನು ಅಲೋವೆರಾ ಜೆಲ್ ಬೆರೆಸಿ ಹಚ್ಚಿಕೊಳ್ಳಿ. ನಿಮ್ಮ ಕೂದಲು ತುಂಬಾ ಮೃದು ಮತ್ತು ದಪ್ಪವಾಗುತ್ತದೆ. ಹೊಳಪು ಕೂಡ ಇರುತ್ತದೆ.  

ದಾಸವಾಳದ ಪುಡಿಯನ್ನು ಗೋರಂಟಿಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಉತ್ತಮ ಕಂಡೀಷನರ್ ಆಗಿಯೂ ಕೆಲಸ ಮಾಡುತ್ತದೆ. ನೀವು ಇದಕ್ಕೆ ನಿಂಬೆಯನ್ನೂ ಸೇರಿಸಬಹುದು, ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ತಾಜಾ ದಾಸವಾಳದ ಹೂವುಗಳನ್ನು ಅರೆದು ಮೊಟ್ಟೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲಿಗೆ ಉತ್ತಮ ಕಂಡೀಷನಿಂಗ್ ಸಿಗುತ್ತದೆ. ಕೂದಲು ಉದುರುವುದನ್ನು ತಡೆಯಲು ಮತ್ತು ಬೆಳವಣಿಗೆಯನ್ನು ಸುಧಾರಿಸುತ್ತದೆ.

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link