ಬಿಳಿ ಕೂದಲು ಗಾಢ ಕಪ್ಪಾಗಿ ರೇಷ್ಮೆಯ ಹಾಗೆ ಮಿಂಚಲು ಈ ಹೂವನ್ನು ಅರೆದು ತಲೆಗೆ ಹಚ್ಚಿ ಸಾಕು! ಒಮ್ಮೆ ಟ್ರೈ ಮಾಡಿ ರಿಸಲ್ಟ್ ಪಕ್ಕಾ
Natural hair color: ಕೂದಲು ಬಿಳಿಯಾಗಲು ಧೂಳು, ಸೂರ್ಯನ ಬೆಳಕು ಮತ್ತು ಮಾಲಿನ್ಯ, ಆಧುನಿಕ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಬಹು ಮುಖ್ಯ ಕಾರಣವಾಗಿವೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಅನೇಕರು ರಾಸಾಯನಿಕ ಆಧಾರಿತ ಹೇರ್ ಕಲರ್ ಬಳಸುತ್ತಾರೆ. ಇದರಿಂದ ಪ್ರಯೋಜನಕ್ಕೆ ಬದಲಾಗಿ ಹಾನಿಯೇ ಹೆಚ್ಚು.
ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಗೋರಂಟಿ ಎಲೆಗಳು ಮತ್ತು ದಾಸವಾಳ ಹೂವಿನ ಪೇಸ್ಟ್ ಅನ್ನು ಬಳಸಬಹುದು.
ಗೋರಂಟಿ ನೈಸರ್ಗಿಕ ಬಣ್ಣ ಮತ್ತು ಕಂಡಿಷನರ್ ಆಗಿದ್ದರೂ, ದಾಸವಾಳ ಹೂವು ಕೂದಲಿನ ಹೊಳಪಿಗೆ ಕಾರಣವಾಗುತ್ತದೆ.
ಗೋರಂಟಿ ಎಲೆಗಳು ಮತ್ತು ದಾಸವಾಳ ಹೂವಿನ ಪೇಸ್ಟ್ ಹಚ್ಚುವುದರಿಂದ ಕೂದಲಿನ ಬಣ್ಣ ನೈಸರ್ಗಿಕವಾಗಿ ಕಪ್ಪಾಗುತ್ತದೆ. ಒಣ ನಿರ್ಜೀವ ಕೂದಲು ರೇಷ್ಮೆಯಂತೆ ಮಿಂಚಲು ಆರಂಭಿಸುತ್ತದೆ.
ಮೊದಲು ಒಂದಷ್ಟು ಗೋರಂಟಿ ಎಲೆಗಳನ್ನು ಸಂಗ್ರಹಿಸಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. ಮಾರುಕಟ್ಟೆಯಲ್ಲಿನ ಗೋರಂಟಿ ಪುಡಿ ತಂದರೆ ಅದರಲ್ಲಿ ರಾಸಾಯನಿಕ ಇಲ್ಲವೆಂಬುದನ್ನು ಖಚಿತ ಪಡಿಸಿಕೊಳ್ಳಿ.
ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಮತ್ತು ಅದಕ್ಕೆ 10 ದಾಸವಾಳ ಹೂವುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಈಗ ಅದನ್ನು ತಣ್ಣಗಾಗಲು ಬಿಡಿ.
ತಣ್ಣಗಾದ ನಂತರ ನೀರಿನಲ್ಲಿ ಗೋರಂಟಿ ಪುಡಿಯನ್ನು ಮಿಶ್ರಣ ಮಾಡಿ. ಈಗ ಸುಮಾರು ಒಂದು ಗಂಟೆ ಬಿಡಿ.
ಗೋರಂಟಿ ಪುಡಿ ಮತ್ತು ದಾಸವಾಳದ ಪೇಸ್ಟ್‌ಗೆ ತೆಂಗಿನೆಣ್ಣೆ ಸೇರಿಸಿ ತಲೆಗೆ ಹಚ್ಚಿಕೊಳ್ಳಿ. ಸುಮಾರು ಒಂದು ಗಂಟೆ ನಂತರ ಕೂದಲನ್ನು ತೊಳೆಯಿರಿ. (ಸೂಚನೆ: ಈ ಲೇಖನದಲ್ಲಿನ ಮಾಹಿತಿಯು ಮನೆಮದ್ದುಗಳನ್ನು ಆಧರಿಸಿದೆ. ವೈದ್ಯರ ಸಲಹೆ ಬಳಿಕ ಅನುಸರಿಸುವುದು ಸೂಕ್ತ. ಜೀ ಕನ್ನಡ ನ್ಯೂಸ್‌ಇದಕ್ಕೆ ಹೊಣೆಯಲ್ಲ.)