ಹಿತ್ತಲಲ್ಲಿರುವ ಈ ಹೂವೊಂದೇ ಸಾಕು ಬಿಳಿ ಕೂದಲನ್ನು ಕಪ್ಪಾಗಿಸಿ ರೇಷ್ಮೆಯಂತೆ ಹೊಳೆಯುವಂತೆ ಮಾಡುತ್ತೆ!
ದಾಸವಾಳದ ಎಲೆಗಳು ಮತ್ತು ಹೂವುಗಳು ಕೂದಲಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಇದು ಬುಡದಿಂದಲೂ ಕೂದಲನ್ನು ಗಟ್ಟಿಗೊಳಿಸುತ್ತದೆ.
ಕೂದಲಿಗೆ ದಾಸವಾಳದ ಹೂವುಗಳನ್ನು ಬಳಸುವುದರಿಂದ ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸುವ ಮೂಲಕ ಬೇರುಗಳಿಂದ ಕೂದಲನ್ನು ಬಲಪಡಿಸಿ ಕೂದಲ ಬೆಳವಣಿಗೆಗೂ ಕೂಡ ಪ್ರಯೋಜನಕಾರಿ ಆಗಿದೆ.
ದಾಸವಾಳದ ಹೂವು ಅದರಲ್ಲೂ ಕೆಂಪು ದಾಸವಾಳದ ಹೂವು, ಅದರ ಎಲೆಗಳನ್ನು ಬಳಸುವುದರಿಂದ ಬಿಳಿ ಕೂದಲು ಸುಲಭವಾಗಿ ಕಪ್ಪಗಾಗುತ್ತದೆ. ಇದಕ್ಕಾಗಿ ದಾಸವಾಳದ ಹೂವಿನ ಹೇರ್ ಪ್ಯಾಕ್ ಬಳಸಬೇಕು.
ಮೊದಲಿಗೆ ಆರರಿಂದ ಏಳು ದಾಸವಾಳದ ಹೂವು ಅದರೊಂದಿಗೆ ಸ್ವಲ್ಪ ಅದರ ಎಲೆಗಳನ್ನು ಹಾಕಿ. ಅದನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ.
ಈ ರೀತಿ ತಯಾರಿಸಿಟ್ಟ ದಾಸವಾಳದ ಹೇರ್ ಪ್ಯಾಕ್ ಅನ್ನು ಕೂದಲಿಗೆ ಅನ್ವಯಿಸಿ ಅರ್ಧಗಂಟೆ ಹಾಗೆ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ಕೂದಲನ್ನು ವಾಶ್ ಮಾಡಿ.
ದಾಸವಳವು ಕೂದಲಿನ ಕಿರುಚೀಲಗಳಿಗೆ ಅಗತ್ಯ ಪೋಷಕಾಂಶಗಳನ್ನು ಪೂರೈಸುವ ಮೂಲಕ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಿ ಕೂದಲಿನ ಬೆಳವಣಿಗೆಯನ್ನು ಸಹ ಉತ್ತೇಜಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.