ಬಿಳಿ ಕೂದಲಿಗೆ ಬೆಸ್ಟ್ ಮನೆಮದ್ದು ಈ ಹೂವಿನ ಎಣ್ಣೆ.. ಗಂಟೆಯಲ್ಲಿ ಕೂದಲು ಕಡು ಕಪ್ಪಾಗಿ ರೇಷ್ಮೆಯ ನೂಲಿನಂತಾಗುವುದು!
ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಬಿಳಿ ಕೂದಲನ್ನು ಕಪ್ಪಾಗಿಸಲು ಕೆಮಿಕಲ್‌ಯುಕ್ತ ಉತ್ಪನ್ನಗಳನ್ನು ಬಳಸುವ ಬದಲು ಕೆಲವು ಸುಲಭ ಮನೆಮದ್ದುಗಳನ್ನು ಬಳಸಿ.
ಬಿಳಿ ಕೂದಲನ್ನು ಹೊಂದಿರುವವರು ಪ್ರತಿದಿನ ದಾಸವಾಳದ ಹೂವಿನ ಎಣ್ಣೆಯನ್ನು ಬಳಸುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
ಈ ಎಣ್ಣೆಯನ್ನು ನೀವು ಮನೆಯಲ್ಲಿಯೇ ತಯಾರಿಸಬಹುದು. ಇದಕ್ಕಾಗಿ 5 ದಾಸವಾಳದ ಹೂವುಗಳನ್ನು ತೆಗೆದುಕೊಳ್ಳಬೇಕು. ದಾಸವಾಳದ ಹೂವುಗಳನ್ನು ಚೆನ್ನಾಗಿ ತೊಳೆದು
ಒಂದು ಕಪ್ ತೆಂಗಿನ ಎಣ್ಣೆಯನ್ನು ತೆಗೆದುಕೊಂಡು ಬಾಣಲೆಗೆ ಹಾಕಿ, ಒಲೆಯ ಮೇಲಿಟ್ಟು ಬಿಸಿ ಮಾಡಿ.
ಬಿಸಿಯಾದ ತೆಂಗಿನ ಎಣ್ಣೆಗೆ ದಾಸವಾಳದ ಹೂವುಗಳನ್ನು ಸೇರಿಸಿ ಕಡಿಮೆ ಉರಿಯಲ್ಲಿ 15 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ ಮತ್ತು ಫಿಲ್ಟರ್ ಮಾಡಿ.
ದಾಸವಾಳ ಹೂವಿನ ಎಣ್ಣೆಯನ್ನು ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ. ಪ್ರತಿನಿತ್ಯ ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಬೇಕು.
ದಾಸವಾಳ ಎಣ್ಣೆಯನ್ನು ಪ್ರತಿದಿನ ಹಚ್ಚಿಕೊಂಡು ಮಸಾಜ್ ಮಾಡಬೇಕು ಇದರಿಂದ ಬಿಳಿ ಕೂದಲು ಕಪ್ಪಾಗುವುದು. ಜೊತೆಗೆ ಉದ್ದ ದಪ್ಪ ಕೂದಲು ಪಡೆಯುವಿರಿ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.