ಒಂದು ಬಾರಿ ಈ ಚಟ್ನಿ ತಿಂದರೆ ಸಾಕು ಹೈ ಬ್ಲಡ್ ಶುಗರ್ ಕೂಡ ತಕ್ಷಣ ನಾರ್ಮಲ್ ಆಗಿಬಿಡುತ್ತದೆ! ಒಂದು ತಿಂಗಳವರೆಗೆ ಹೆಚ್ಚಾಗಲ್ಲ ಮಧುಮೇಹ
ಮಧುಮೇಹ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಕಂಡುಬರುತ್ತದೆ. ಇದನ್ನು ನಿಯಂತ್ರಣದಲ್ಲಿಡಬಹುದೇ ಹೊರತು, ಸಂಪೂರ್ಣವಾಗಿ ಗುಣಪಡಿಸುವುದು ಸಾಧ್ಯವಿಲ್ಲ. ಹೀಗಾಗಿ ನಾವಿಂದು ಮನೆಮದ್ದುವಿನ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದು ಮಧುಮೇಹ ನಿಯಂತ್ರಣಕ್ಕೆ ಹೇಳಿ ಮಾಡಿಸಿದ ಪರಿಹಾರ.
ದೋಸೆ, ಇಡ್ಲಿ ಜೊತೆ ಚಟ್ನಿ ಹೆಚ್ಚಾಗಿ ಸೇವಿಸುತ್ತೇವೆ. ಆದರೆ ಅದೇ ಚಟ್ನಿಗೆ ಒಂದು ಎಲೆಯನ್ನು ಬೆರೆಸಿ ಸೇವಿಸಿದರೆ ಅದುವೇ ಮಧುಮೇಹಕ್ಕೆ ಮದ್ದಾಗುತ್ತದೆ. ಆ ಚಟ್ನಿ ಯಾವುದು ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.
ಅಂದಹಾಗೆ ಇದು ಕೊತ್ತಂಬರಿ-ಪುದೀನಾ ಚಟ್ನಿ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಇರುತ್ತದೆ. ಇದೇ ಕಾರಣದಿಂದ ಈ ಚಟ್ನಿಯನ್ನು ನಿಯಮಿತವಾಗಿ ಸೇವಿಸಿದರೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ಇದರಲ್ಲಿ ಕೊತ್ತಂಬರಿ ಸೊಪ್ಪು, 15 ಪುದೀನ ಎಲೆ, ಕರಿಬೇವಿನ ಎಲೆ, ಅರ್ಧ ಕಪ್ ಹಸಿರು ಮಾವಿನ ಹೋಳು, 2 ಹಸಿರು ಮೆಣಸಿನಕಾಯಿ,1 ಸಣ್ಣ ತುಂಡು ಶುಂಠಿ, ಬೆಳ್ಳುಳ್ಳಿ, ಉಪ್ಪು ಅರ್ಧ ಟೀಚಮಚ, ಜೀರಿಗೆ ಪುಡಿ ಕಾಲು ಚಮಚ, 1/2 ಕಪ್ ಹುರಿದ ಕಡಲೆ, ಸ್ವಲ್ಪ ನಿಂಬೆ ಮರ. ಇವೆಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಂಡು ದೋಸೆ, ಇಡ್ಲಿ ಅಥವಾ ಅನ್ನದ ಜೊತೆಯೂ ಸೇವಿಸಬಹುದು,
ಈ ಚಟ್ನಿ ತಿನ್ನುವುದರಿಂದ ಅನೇಕ ಲಾಭಗಗಳಿವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಳ, ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಣ, ಮಾನಸಿಕ ಸಮಸ್ಯೆಗಳು ದೂರ,ನಿದ್ರಾಹೀನತೆಯಿಂದ ದೂರ, ಥೈರಾಯ್ಡ್ ಮತ್ತು ಹಸಿವು ನಿಯಂತ್ರಣ, ಪಿಸಿಓಎಸ್, ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡವನ್ನು ಕಡಿಮೆ, ಆಯಾಸ ಕಡಿಮೆ, ಕೂದಲು ಉದುರುವಿಕೆ ನಿಯಂತ್ರಣ ಹೀಗೆ ಹತ್ತು ಹಲವಾರು ಪ್ರಯೋಜನಗಳನ್ನು ಪಡೆಯಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.