High Cholesterol ನಿಂದ ಮುಕ್ತಿ ಪಡೆಯಬೇಕೆ, ಈ 5 ಬೇಳೆಕಾಳುಗಳು ನಿಮ್ಮ ಆಹಾರದಲ್ಲಿರಲಿ

Fri, 28 Oct 2022-1:59 pm,

1. ಹೆಸರು ಬೇಳೆಯನ್ನು ನೀವು ಒಂದು ಬೆಲೆಯ ರೂಪದಲ್ಲಿ ಅಥವಾ ಮೊಳಕೆಯೊಡೆದ ಬೇಳೆಯ ರೂಪದಲ್ಲಿ ಸೇವಿಸಬಹುದು. ಹೆಸರು ಬೇಳೆಯಲ್ಲಿ ಪೋಷಕಾಂಶಗಳ ಕೊರತೆಯಿಲ್ಲ, ಜೊತೆಗೆ ಇದರಲ್ಲಿ ಕಡಿಮೆ ಪ್ರಮಾಣದ ಕೊಬ್ಬು ಮತ್ತು ಕ್ಯಾಲೋರಿಗಳು ಕಂಡುಬರುತ್ತವೆ, ಇದು ಕೊಲೆಸ್ಟ್ರಾಲ್ ಮತ್ತು ತೂಕವನ್ನು ಇಳಿಕೆ ಮಾಡುತ್ತದೆ. ಹೀಗಾಗಿ ಇದನ್ನು ನಿಯಮಿತ ಆಹಾರದಲ್ಲಿ ಸೇರಿಸಬೇಕು.  

2. ಚನ್ನಂಗಿ ಬೇಳೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ, ಭಾರತದಲ್ಲಿ ಜನರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲು ಇಷ್ಟಪಡುತ್ತಾರೆ. ಇದರಲ್ಲಿರುವ ಪ್ರೋಟೀನ್ ಮತ್ತು ಡಯೆಟರಿ ಫೈಬರ್, ಕೊಲೆಸ್ಟ್ರಾಲ್ ಮತ್ತು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತವೆ. ಇದರೊಂದಿಗೆ ಇದರಲ್ಲಿರುವ ಕ್ಯಾಲ್ಸಿಯಂನಿಂದಲೂ ಮೂಳೆಗಳು ಗಟ್ಟಿಯಾಗುತ್ತವೆ.  

3. ಮಡಿಕೆ ಕಾಳುಗಳನ್ನು ನೀವು ಸಾಮಾನ್ಯ ರೂಪದಲ್ಲಿ ಕೂಡ ಸೇವಿಸಬಹುದು, ಆದರೆ ಭಾರತದಲ್ಲಿ ಇದನ್ನು ಕಚೋರಿಗಳೊಂದಿಗೆ ಬೆರೆಸಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಲಾಗುತ್ತದೆ, ಏಕೆಂದರೆ ಇದರ ರುಚಿ ಅತ್ಯುತ್ತಮವಾಗಿರುತ್ತದೆ. ಫೈಬರ್ ಜೊತೆಗೆ ಸತು ಮತ್ತು ವಿಟಮಿನ್ ಬಿ ಈ ಮೊಥ್ ಬೀನ್ ನಲ್ಲಿ ಕಂಡುಬರುತ್ತದೆ.  

4. ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೇವಿಸಲ್ಪಡುವ ಬೇಳೆಕಾಳುಗಳ ಪಟ್ಟಿಯಲ್ಲಿ ಉದ್ದಿನ ಬೇಳೆ ಕೂಡ ಒಂದು, ಇದು ಕೊಲೆಸ್ಟ್ರಾಲ್ ಮತ್ತು ತೂಕ ಇಳಿಕೆಗೆ ಸಹಾಯ ಮಾಡುತ್ತದೆ, ಆದರೆ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರಿಗೆ ಇದು ಪ್ರಯೋಜನಕಾರಿಯಾಗಿದೆ.  

5. ಕಾಬೂಲಿ ಕಡಲೆ - ಬೇಳೆಯ ರೂಪದಲ್ಲಿ ಇದು ಕಡಿಮೆ ಸೇವನೆಯಾದರೂ ಕೂಡ ಉಸುಳಿಯನ್ನು ತಯಾರಿಸಲು ಈ ಕಾಬೂಲಿ ಕಡಲೆ ಭಾರತದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಆದರೆ, ಕಡಲೆ ಬೇಯಿಸುವಾಗ ಕನಿಷ್ಠ ಅಡುಗೆ ಎಣ್ಣೆಯನ್ನು ಬಳಸಿ, ಇಲ್ಲದಿದ್ದರೆ ಕೊಲೆಸ್ಟ್ರಾಲ್ ಕಡಿಮೆಯಾಗುವ ಬದಲು ಹೆಚ್ಚಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link