ಚರ್ಮದಿಂದ ಪಾದದವರೆಗೆ ಕಂಡುಬರುವ ಈ ಚಿಹ್ನೆಗಳು ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತವೂ ಆಗಿರಬಹುದು, ಎಚ್ಚರ!
ಸೊಂಟದ ಸುತ್ತಲಿನ ಬೊಜ್ಜು: ಪ್ರಸ್ತುತ ಬಹುತೇಕ ಮಂದಿಯ ಸಾಮಾನ್ಯ ಸಮಸ್ಯೆ ಎಂದರೆ ಸೊಂಟದ ಸುತ್ತ ಶೇಖರಣೆ ಆಗುವ ಬೊಜ್ಜು. ನಿಮಗೂ ಹೊಟ್ಟೆ ಮತ್ತು ಸೊಂಟದ ಸುತ್ತಲೂ ಬೊಜ್ಜು ಅತಿಯಾಗಿದ್ದರೆ ಅದು ಕೊಲೆಸ್ಟ್ರಾಲ್ ಹೆಚ್ಚಳದ ಸಂಕೇತ ಎಂಬುದನ್ನು ಅರ್ಥ ಮಾಡಿಕೊಳ್ಳಿ.
ಪದೇ ಪದೇ ಕಾಣಿಸಿಕೊಳ್ಳುವ ಎದೆನೋವು: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಅದು ಹೃದಯದ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತದೆ. ಪದೇ ಪದೇ ಕಾಣಿಸಿಕೊಳ್ಳುವ ಎದೆ ನೋವು ಕೂಡ ಅಧಿಕ ಕೊಲೆಸ್ಟ್ರಾಲ್ ಚಿಹ್ನೆಯಾಗಿರಬಹುದು, ಎಚ್ಚರ!
ಕಾಲುಗಳಲ್ಲಿ ನೋವು: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವಾದಾಗ ರಕ್ತನಾಳಗಳಲ್ಲಿ ಪ್ಲೇಕ್ ಸಂಗ್ರಹವಾಗಲು ಪ್ರಾರಂಭವಾಗುತ್ತದೆ. ಇದರಿಂದಾಗಿ ರಕ್ತನಾಳಗಳಲ್ಲಿ ಅಡಚಣೆಯಿಂದಾಗಿ ರಕ್ತ ಮತ್ತು ಆಮ್ಲಜನಕವು ಪಾದಗಳಿಗೆ ಸರಿಯಾಗಿ ತಲುಪುವುದಿಲ್ಲ. ಇದರಿಂದ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ವಿಪರೀತ ಬೆವರುವಿಕೆ: ಬಿಸಿಲು ಹೆಚ್ಚಿದ್ದಾಗ ಅಥವಾ ದೈಹಿಕ ಚಟುವಟಿಕೆಗಳು ಹೆಚ್ಚಾದಾಗ ಬೆವರುವಾದ ಸಾಮಾನ್ಯವಾಗಿದೆ. ಆದರೆ, ಯಾವುದೇ ಕಾರಣವಿಲ್ಲದೆ ನೀವು ವಿಪರೀತ ಬೆವರುತ್ತಿದ್ದರೆ ಇದು ಅಪಾಯದ ಎಚ್ಚರಿಕೆಯ ಗಂಟೆ ಎಂಬುದನ್ನು ನೆನಪಿಡಿ.
ಚರ್ಮದ ಬಣ್ಣ ಬದಲಾವಣೆ: ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ದೇಹದ ಅನೇಕ ಭಾಗಗಳಲ್ಲಿ ರಕ್ತದ ಹರಿವಿನ ಮೇಲೂ ಸಾಕಷ್ಟು ಪರಿಣಾಮ ಬೀರುತ್ತದೆ. ಇದರಿಂದ ಚರ್ಮವು ಹಳದಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಲಕ್ಷಣಗಳು ಕಂಡು ಬಂದಾಗ ತಪ್ಪದೇ ತಡಮಾಡದೆಯೇ ವೈದ್ಯರನ್ನು ಸಂಪರ್ಕಿಸಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.