High Mileage Cars In India: ಮಧ್ಯಮ Price ರೇಂಜ್ ನಲ್ಲಿ ಲೀಟರ್ ಗೆ 25 ಕಿ.ಮೀಗೂ ಹೆಚ್ಚು ಮೈಲೇಜ್ ನೀಡುವ ಕಾರುಗಳು ಇಲ್ಲಿವೆ

Mon, 17 May 2021-10:35 pm,

10 ಲಕ್ಷ ರೂ.ಗಳಿಗೂ ಕಮ್ಮಿ ಬೆಲೆಗೆ ಅಧಿಕ ಮೈಲೇಜ್ ನೀಡುವ ಕಾರುಗಳು:  1.Hyundai i20 - ಪೆಟ್ರೋಲ್-ಡೀಸೆಲ್ ಕಾರಿನ ಬಗ್ಗೆ ಹೇಳುವುದಾದರೆ, ಹ್ಯುಂಡೈ ಐ 20 ಒಂದು ಉತ್ತಮ ಆಯ್ಕೆಯಾಗಿದೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ (ದೆಹಲಿ) 6.85 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ ಮತ್ತು ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ಗಳಲ್ಲಿ ಲಭ್ಯವಿದೆ. ಈ ಕಾರು ಲೀಟರ್‌ ಗೆ 25 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

2. Hyundai Verna 25 - ಹ್ಯುಂಡೈ ಕಂಪನಿಯ ಮತ್ತೊಂದು ಕಾರು 25 ಕಿ.ಮೀ ಮೈಲೇಜ್ ನೀಡುತ್ತಿದೆ. ವರ್ನಾ 25 ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ ಮತ್ತು ಇದರ ಬೆಲೆ  9.19 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಈ ಕಾರು ಲೀಟರ್‌ ಗೆ 25 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

3. Tata Altroz - ಟಾಟಾ ಕಂಪನಿಯ ಈ ಕಾರು ಸಹ ಗ್ರಾಹಕರಿಗೆ ಉತ್ತಮ ಮೈಲೇಜ್ ಆಯ್ಕೆ ನೀಡುತ್ತಿದೆ. ಟಾಟಾದ ಆಲ್ಟ್ರೋಸ್ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಲಭ್ಯವಿದೆ ಮತ್ತು ಇದರ ಎಕ್ಸ್ ಶೋ ರೂಂ ಬೆಲೆ (ದೆಹಲಿ) 5.69 ಲಕ್ಷ ರೂ.ಗಳಿಂದ  ಪ್ರಾರಂಭವಾಗುತ್ತದೆ. ಈ ಕಾರು ಲೀಟರ್‌ ಗೆ ಗರಿಷ್ಠ 25 ಕಿ.ಮೀ. ಮೈಲೇಜ್ ನೀಡುತ್ತದೆ.

4.Kia Sonet - ಕಿಯಾ ಕಂಪನಿಯ ಸಾನೆಟ್ ಕಾರು ಡೀಸೆಲ್ ಮತ್ತು ಪೆಟ್ರೋಲ್ ರೂಪಾಂತರಗಳಲ್ಲಿ ಲಭ್ಯವಿದೆ ಮತ್ತು ಈ ಕಾರ್ ನ ಎಕ್ಸ್ ಶೋ ರೂಂ ಬೆಲೆ 6.79 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಈ ಕಾರು ಲೀಟರ್‌ನಲ್ಲಿ 24 ಕಿ.ಮೀ.ವರೆಗೆ ಓಡುತ್ತದೆ.

5.Maruti Baleno - ಮಾರುತಿಯ ಬಲೆನೊ ಪೆಟ್ರೋಲ್ ರೂಪಾಂತರದಲ್ಲಿ ಮಾತ್ರ ಲಭ್ಯವಿದೆ ಮತ್ತು ಇದರ ಎಕ್ಸ್ ಶೋ ರೂಂ ಬೆಲೆ 5.98 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಕಂಪನಿಯ ಹೇಳಿಕೆಯ ಪ್ರಕಾರ, ಈ ಕಾರು ಪ್ರತಿ ಲೀಟರ್‌ಗೆ 23 ಕಿ.ಮೀ ಮೈಲೇಜ್ ನೀಡುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link