ಯುರಿಕ್ ಆಸಿಡ್ ಹೆಚ್ಚಾದರೆ ಕರಿಬೇವಿನ ಎಲೆ ಈ ರೀತಿ ಬಳಸಿ, ಮೊಣಕಾಲುಗಳು ನೋವಿನಿಂದಲೂ ಸಿಗುತ್ತೆ ಪರಿಹಾರ!
ಯುರಿಕ್ ಆಸಿಡ್ ಹೆಚ್ಚಾದಾಗ ಅದು ಕೀಲುಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ಯುರಿಕ್ ಆಸಿಡ್ ಹೆಚ್ಚಳದಿಂದಾಗಿ ಸಂಧಿವಾತ ಮತ್ತು ಮೂತ್ರಪಿಂಡದ ಸಂಬಂಧಿತ ಕಾಯಿಲೆಗಳಿಗೆ ಬಲಿಯಾಗಬಹುದು.
ಕರಿಬೇವಿನ ಎಲೆಯಲ್ಲಿ ಉರಿಯೂತ ನಿವಾರಕ ಗುಣವಿದ್ದು, ಕೀಲುಗಳಲ್ಲಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳಲ್ಲಿರುವ ಗುಣಲಕ್ಷಣಗಳು ಪ್ಯೂರಿನ್ ಅನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದ ಯುರಿಕ್ ಆಸಿಡ್ ಕಡಿಮೆ ಆಗುತ್ತದೆ.
ಕರಿಬೇವಿನ ಎಲೆಗಳು ಆಂಟಿ-ಆಕ್ಸಿಡೆಂಟ್‌ಗಳಲ್ಲಿ ಸಮೃದ್ಧವಾಗಿವೆ. ಇದು ದೇಹದಲ್ಲಿ ಯೂರಿಯಾ ಮತ್ತು ಕ್ರಿಯೇಟಿನೈನ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕರಿಬೇವಿನ ಎಲೆಗಳನ್ನು ಹಲವು ವಿಧಗಳಲ್ಲಿ ಸೇವಿಸಬಹುದು. ಬೇಳೆಕಾಳುಗಳಿಂದ ದಾಲ್ ಮಾಡುವಾಗ ಅದರಲ್ಲಿ ಕರಿಬೇವನ್ನು ಹಾಕಿ ಸೇವಿಸಿ. ಕರಿಬೇವಿನ ಎಲೆಗಳನ್ನು ಬೇಳೆಕಾಳುಗಳೊಂದಿಗೆ ಬೆರೆಸಿ ತಿನ್ನುವುದರಿಂದ ಯುರಿಕ್ ಆಸಿಡ್ ಮಟ್ಟ ಕಡಿಮೆ ಆಗಲು ಸಹಾಯ ಮಾಡುತ್ತದೆ.
ಕರಿಬೇವಿನ ಪುಡಿಯನ್ನು ನೀರಿನಲ್ಲಿ ಹಾಕಿ ಕುಡಿದರೆ ಯುರಿಕ್ ಆಸಿಡ್ ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಒಂದು ಕರಿಬೇವಿನ ಎಲೆ ತಿನ್ನುವುದರಿಂದಲೂ ಯುರಿಕ್ ಆಸಿಡ್ ನಿಯಂತ್ರಣಕ್ಕೆ ಬರುವುದು.
ಸೂಚನೆ: ಪ್ರಿಯ ಓದುಗರೇ ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.