ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯೋದು ಟೀಂ ಇಂಡಿಯಾದ ಈ ಪ್ರಮುಖ: ವಿರಾಟ್, ರೋಹಿತ್’ಗೂ ಸಿಗಲ್ಲ ಇಷ್ಟು ಸಂಬಳ!
ನಾವಿಂದು ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಟೀಂ ಇಂಡಿಯಾದ ಪ್ರಮುಖರೊಬ್ಬರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಭಾರತೀಯ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ರಾಹುಲ್ ದ್ರಾವಿಡ್ ಮುಂದುವರೆದಿದ್ದಾರೆ. ಅಂದಹಾಗೆ ಈ ಅಧಿಕಾರ ಅವಧಿ ಮುಂದಿನ ಟಿ20 ವಿಶ್ವಕಪ್’ವರೆಗೆ ಮಾತ್ರ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಇನ್ನು ಭಾರತದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟ್ ಕೋಚ್ ಎಂದರೆ ಅದು ರಾಹುಲ್ ದ್ರಾವಿಡ್. ಅವರ ಸಂಭಾವನೆಯು ಅನೇಕ ಕ್ರಿಕೆಟ್ ಆಟಗಾರರಿಗಿಂತ ಹೆಚ್ಚು.
ಅಧಿಕೃತ ವೇತನ ಶ್ರೇಣಿಯ ಪ್ರಕಾರ, ರಾಹುಲ್ ದ್ರಾವಿಡ್ ಎಲ್ಲಾ ಅಂತರರಾಷ್ಟ್ರೀಯ ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಸ್ಥಾನದಲ್ಲಿ ವಾರ್ಷಿಕವಾಗಿ 12 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ.
ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ವಾರ್ಷಿಕ ಆದಾಯವು ಅನುಭವಿ ಕೋಚ್’ಗಳಾದ ರವಿಶಾಸ್ತ್ರಿ ಮತ್ತು ಅನಿಲ್ ಕುಂಬ್ಳೆ ಸೇರಿದಂತೆ ತಂಡದ ಇತರ ಮಾಜಿ ಕೋಚ್’ಗಿಂತ ಹೆಚ್ಚು. ರವಿಶಾಸ್ತ್ರಿ ಅವರು ಮುಖ್ಯ ಕೋಚ್ ಆಗಿದ್ದ ಅವಧಿಯಲ್ಲಿ ವಾರ್ಷಿಕ 9.5 ಕೋಟಿ ರೂ.ಗಳ ಸಂಭಾವನೆ ಪಡೆದಿದ್ದರು.
ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿ ನಂತರ, ಮಾಜಿ ಟೀಮ್ ಆಸ್ಟ್ರೇಲಿಯ ಕ್ರಿಕೆಟ್ ಕೋಚ್ ಜಸ್ಟಿನ್ ಲ್ಯಾಂಗರ್ ಸಾರ್ವಕಾಲಿಕ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟ್ ತರಬೇತುದಾರರಲ್ಲಿ ಒಬ್ಬರಾಗಿದ್ದರು. ಇವರು 4.5 ಕೋಟಿ ರೂ. ಸಂಭಾವನೆ ಪಡೆದಿದ್ದರು.
ಇಷ್ಟು ಮಾತ್ರವಲ್ಲದೆ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ಸಂಭಾವನೆಯು ತಂಡದ ಕೆಲವು ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯರಿಗಿಂತ ಹೆಚ್ಚಾಗಿದೆ. ರಾಹುಲ್ ದ್ರಾವಿಡ್ ವರ್ಷಕ್ಕೆ 12 ಕೋಟಿ ಗಳಿಸಿದರೆ, ಬಿಸಿಸಿಐ 2022-23ರ ಒಪ್ಪಂದದ ಪ್ರಕಾರ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ವರ್ಷಕ್ಕೆ 7 ಕೋಟಿ ರೂ. ನೀಡುತ್ತದೆ.