ಎಲ್ಲಕ್ಕಿಂತ ಹೆಚ್ಚು ಈ ಕಂಪನಿಯ ಬೈಕ್ ಖರೀದಿಸುತ್ತಿದ್ದಾರೆ ಜನ, Royal Enfield ಎಷ್ಟನೆ ಸ್ಥಾನದಲ್ಲಿದೆ?

Fri, 04 Aug 2023-4:28 pm,

Hero MotoCorp ನಂಬರ್ ಒನ್ ಸ್ಥಾನದಲ್ಲಿದೆ, ಇದು ಜುಲೈ 2023 ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 3,71,204 ಯುನಿಟ್‌ಗಳನ್ನು ಮಾರಾಟ ಮಾಡಿದೆ, ಮಾರಾಟದಲ್ಲಿ ಶೇ. 13.8 ಮತ್ತು MoM ನಲ್ಲಿ ಶೇಕಡಾ ಶೇ.12.1 ರಷ್ಟು ಕುಸಿತವನ್ನು ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದರ ಮಾರಾಟ 4,30,684 ಯುನಿಟ್ ಆಗಿತ್ತು.  

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಎರಡನೇ ಸ್ಥಾನದಲ್ಲಿದೆ, ಅದರ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ. 12.5 ರಷ್ಟು ಕಡಿಮೆಯಾಗಿದೆ, ಜುಲೈ 2023 ರಲ್ಲಿ 3,10,867 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದರ ದೇಶೀಯ ಮಾರಾಟ 3,55,560 ಯುನಿಟ್‌ಗಳಾಗಿತ್ತು. ಆದಾಗ್ಯೂ, MoM ಆಧಾರದ ಮೇಲೆ ಇದು ಶೇ. 2.6 ಬೆಳವಣಿಗೆಯನ್ನು ದಾಖಲಿಸಿದೆ.  

ಟಿವಿಎಸ್ ಮೋಟಾರ್ ಕಂಪನಿಯು ಈ ವರ್ಷದ ಜುಲೈನಲ್ಲಿ 2,35,230 ಯುನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದು, ವಾರ್ಷಿಕ ಆಧಾರದ ಮೇಲೆ ಶೇ. 16.4 ಬೆಳವಣಿಗೆಯನ್ನು ದಾಖಲಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ, ಅದರ ದೇಶೀಯ ಮಾರಾಟವು 2,01,942 ಯುನಿಟ್‌ಗಳಷ್ಟಿತ್ತು. ಆದಾಗ್ಯೂ, MoM ಆಧಾರದ ಮೇಲೆ, ಅದರ ಮಾರಾಟವು ಸ್ವಲ್ಪ ಕುಸಿತವನ್ನು ದಾಖಲಿಸಿದೆ.  

ಬಜಾಜ್ ಆಟೋ ನಾಲ್ಕನೇ ಸ್ಥಾನದಲ್ಲಿದೆ, ಜುಲೈ 2023 ರಲ್ಲಿ 1,41,990 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರ ದೇಶೀಯ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ.13.6 ಮತ್ತು MoM ಆಧಾರದ ಮೇಲೆ ಶೇ. 14.6 ರಷ್ಟು ಕಡಿಮೆಯಾಗಿದೆ.  

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಐದನೇ ಸ್ಥಾನದಲ್ಲಿದೆ, ಜುಲೈ 2023 ರಲ್ಲಿ ಇದು ತನ್ನ ಅತ್ಯಧಿಕ ಮಾಸಿಕ ಮಾರಾಟವನ್ನು ದಾಖಲಿಸಿದೆ. ಕಂಪನಿಯು ಕಳೆದ ತಿಂಗಳು 80,309 ಯುನಿಟ್‌ಗಳನ್ನು ಮಾರಾಟ ಮಾಡಿತು, ಅದರ ಮಾರಾಟದಲ್ಲಿ ಶೇ. 31.8 ಶೇಕಡಾ (YoY) ಮತ್ತು ಶೇ. 27.3 ರಷ್ಟು (MoM) ಬೆಳವಣಿಗೆಯನ್ನು ದಾಖಲಿಸಿದೆ.  

ಆರನೇ ಸ್ಥಾನದಲ್ಲಿ ರಾಯಲ್ ಎನ್‌ಫೀಲ್ಡ್ ಇದೆ, ಇದು ದೇಶೀಯ ಮಾರಾಟದಲ್ಲಿ ದೊಡ್ಡ ಏರಿಕೆ ಕಂಡಿದೆ. ಕಳೆದ ತಿಂಗಳಲ್ಲಿ ಕಂಪನಿಯು 66,062 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಇದರ ಮಾರಾಟವು ವಾರ್ಷಿಕ ಆಧಾರದ ಮೇಲೆ ಶೇ. 41.9 ಶೇಕಡಾ ಹೆಚ್ಚಾಗಿದೆ ಆದರೆ MoM ಆಧಾರದ ಮೇಲೆ ಶೇ.2.1 ರಷ್ಟು ಕುಸಿತವನ್ನು ದಾಖಲಿಸಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link