ಸರ್ಕಾರಿ ನೌಕರರಿಗೆ ಬಿಗ್ ಅಪ್ಡೇಟ್ ! ಜುಲೈ ನಲ್ಲಿ ಮೂಲ ವೇತನದಲ್ಲಿಯೇ ಆಗಲಿದೆ ಭಾರೀ ಹೆಚ್ಚಳ
ಮುಂದಿನ ಕೆಲವು ತಿಂಗಳು ಕೇಂದ್ರ ಸರ್ಕಾರಿ ನೌಕರರಿಗೆ ನಿರ್ಣಾಯಕ.ಜನವರಿ 2024ರಲ್ಲಿ ತುಟ್ಟಿಭತ್ಯೆಯನ್ನು 4% ಹೆಚ್ಚಿಸಲಾಯಿತು. ಈ ಮೂಲಕ ಒಟ್ಟು ತುಟ್ಟಿ ಭತ್ಯೆ 50%ಕ್ಕೆ ಏರಿದೆ. ಜುಲೈನಲ್ಲಿ ಮೂಲ ವೇತನದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ.
ತುಟ್ಟಿಭತ್ಯೆ 50%ಕ್ಕೆ ತಲುಪಿದ ನಂತರ ಕೇಂದ್ರ ಸರ್ಕಾರಿ ನೌಕರರ ಹಲವಾರು ಭತ್ಯೆಗಳಲ್ಲಿಯೂ ಹೆಚ್ಚಳ ಕಂಡು ಬಂದಿದೆ. ಇದರಿಂದಾಗಿ ಕೇಂದ್ರ ಸರ್ಕಾರಿ ನೌಕರರ ಮಾಸಿಕ ವೇತನದಲ್ಲಿ ಗಣನೀಯ ಏರಿಕೆಯಾಗಿದೆ.
ಈ ಮಧ್ಯೆ, ಮುಂದಿನ ಡಿಎ ಹೆಚ್ಚಳದ ಬಗ್ಗೆ ಈಗಾಗಲೇ ಮಾತುಕತೆ ಪ್ರಾರಂಭವಾಗಿದೆ. ಇದೀಗ ತುಟ್ಟಿಭತ್ಯೆಯನ್ನು ಸೊನ್ನೆಗೆ ಇಳಿಸಲಾಗುತ್ತದೆಯೇ ಅಥವಾ 50ಶೇ. ಕ್ಕೂ ಹೆಚ್ಚು ಹೆಚ್ಚಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಅನೇಕರಲ್ಲಿದೆ.
7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ತುಟ್ಟಿಭತ್ಯೆ 50% ತಲುಪಿದ ನಂತರ, ಅದನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಮತ್ತೆ 1%, 2% ರಷ್ಟು ಹೆಚ್ಚಾಗುತ್ತಾ ಹೋಗಬಹುದು. ಆದರೆ, ಹಾಗೆ ಮಾಡುವುದು ಕಡ್ಡಾಯವಲ್ಲ ಎಂದು ಕೂಡಾ ಹೇಳಲಾಗುತ್ತದೆ. ಹೀಗಾಗಿ ಈ ಬಗೆಗಿನ ನಿರ್ಧಾರ ಕೇಂದ್ರ ಸರ್ಕಾರದ ಕೈಯಲ್ಲಿದೆ ಎನ್ನಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಹೊಸ ಸರ್ಕಾರ ರಚನೆಯಾಗಲಿದೆ.ನಂತರ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಆದರೆ, ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆಯಾಗಲಿದೆ ಎನ್ನಲಾಗಿದೆ.
DA ಮತ್ತು DR 50% ಮಿತಿಯನ್ನು ಮುಟ್ಟುತ್ತಿದ್ದಂತೆ, DA ಮತ್ತು DR ಅನ್ನು ಮೂಲ ವೇತನದಲ್ಲಿ ಸ್ವಯಂಚಾಲಿತವಾಗಿ ಅಳವಡಿಸಲಾಗುವುದು. ಇದರಿಂದ ಸಾವಿರಾರು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಮೂಲ ವೇತನ ಹೆಚ್ಚಳವಾಗಲಿದೆ. ಜುಲೈ 2024 ರಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಮೂಲ ವೇತನ ಹೆಚ್ಚಾಗಬಹುದು ಎಂಬ ಊಹಾಪೋಹಗಳಿವೆ.
ಹಣದುಬ್ಬರ ಏರಿಕೆಯನ್ನು ನಿರ್ಧರಿಸುವ ಎಐಸಿಪಿಐ ಅಂಕಿಅಂಶಗಳು ಇನ್ನೂ ಬಿಡುಗಡೆಯಾಗಬೇಕಿದೆ.ಇದುವರೆಗೆ ಜನವರಿ ಡೇಟಾ ಮಾತ್ರ ಲಭ್ಯವಿದೆ.ಮೇ ತಿಂಗಳಲ್ಲಾದರೂ ಇವು ಬಿಡುಗಡೆಯಾಗಬಹುದು ಎಂದು ಹಲವರು ನಿರೀಕ್ಷಿಸಿದ್ದರೂ,ಮೇ 31 ರಂದು ಬಿಡುಗಡೆಯಾಗಬೇಕಿದ್ದ ಸಂಖ್ಯೆಗಳನ್ನು ಸಹ ತಡೆಹಿಡಿಯಲಾಗಿದೆ.
ಈ ಕಾರಣದಿಂದಾಗಿ, ಜುಲೈ 2024ರಲ್ಲಿ ತುಟ್ಟಿಭತ್ಯೆ ಎಷ್ಟು ಹೆಚ್ಚಾಗುತ್ತದೆ ಎಂದು ಅಂದಾಜು ಮಾಡುವುದು ಕಷ್ಟಕರವಾಗಿದೆ. ಈ ಅಂಕಿ ಅಂಶ ಜೂನ್ ಅಂತ್ಯದಲ್ಲಿ ಒಟ್ಟಿಗೆ ಬಿಡುಗಡೆಯಾಗಲಿವೆ ಎನ್ನಲಾಗಿದೆ.
ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ವೇತನ ಅಥವಾ ಭತ್ಯೆ ಹೆಚ್ಚಳದ ಯಾವುದೇ ಗ್ಯಾರಂಟಿ ಇದ ಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.