ವಿಶ್ವ ಅಥ್ಲೆಟಿಕ್ಸ್ ಕಿರಿಯರ ವಿಭಾಗದಲ್ಲಿ ಐತಿಹಾಸಿಕ ದಾಖಲೆ ಬರೆದ ಹಿಮಾ ದಾಸ್-In Pics
ಫಿನ್ ಲ್ಯಾಂಡ್'ನಲ್ಲಿ ನಡೆಯುತ್ತಿರುವ ಐಎಎಎಫ್ ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್'ನ ಮಹಿಳೆಯರ 400ಮೀ. ಓಟದಲ್ಲಿ ಭಾರತದ ಯುವ ಓಟಗಾರ್ತಿ ಹಿಮಾ ದಾಸ್ ಚಿನ್ನದ ಪದಕ ಗೆದ್ದಿದ್ದಾರೆ. ಇದರೊಂದಿಗೆ ಈ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಹಿಮಾ ಪಾತ್ರರಾಗಿದ್ದಾರೆ. ಆ ಅದ್ಭುತ ಕ್ಷಣದ ಛಾಯಾಚಿತ್ರಗಳು ನಿಮಗಾಗಿ... (All photos credit: Facebook/ Athletics Federation of India
ಚಿನ್ನದ ಸಾಧನೆಯ ಹಾದಿಯಲ್ಲಿ ಹಿಮಾ ದಾಸ್.
ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್'ನ ಮಹಿಳೆಯರ 400ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಹಿಮಾ ದಾಸ್ ಸಂಭ್ರಮಿಸಿದ ಕ್ಷಣ.
ಅಂಡರ್ 20 ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್'ನ ಮಹಿಳೆಯರ 400ಮೀ. ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಹಿಮಾ, ಭಾರತದ ಬಾವುಟ ಹಿಡಿದು ಟ್ರ್ಯಾಕ್ ಮೇಲೆ ಓಡಿ ವಿಜಯವನ್ನು ಸಂಭ್ರಮಿಸಿದರು.
ಚಿನ್ನ ಗೆದ್ದ ಸಂದರ್ಭದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಹಿಮಾ ದಾಸ್ ಚಿನ್ನ ಗೆದ್ದಿರುವುದು ಖುಷಿಯಾಗಿದೆ. ನನಗೆ ಪ್ರೋತ್ಸಾಹ ನೀಡಿದ ದೇಶದ ಜನತೆ ಹಾಗೂ ಕೋಚ್'ಗೆ ಧನ್ಯವಾದ ಅರ್ಪಿಸುತ್ತೇನೆ ಎಂದ ಹಿಮಾ ಕಣ್ಣಲ್ಲಿ ಆನಂದಭಾಷ್ಪ ತುಂಬಿತ್ತು.
ಅಸ್ಸಾಂ ರಾಜ್ಯದ ನಾಗೊನ್ ಜಿಲ್ಲೆಯ ದಿಂಗ್ ಗ್ರಾಮದ ರೈತರೊಬ್ಬರ ಪುತ್ರಿಯಾದ ಹಿಮಾ ಏಪ್ರಿಲ್ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದ 400 ಮೀ. ಓಟದ ಫೈನಲ್ ಸ್ಪರ್ಧೆಯಲ್ಲಿ 51.32 ಸೆಕೆಂಡುಗಳಲ್ಲಿ ಕ್ರಮಿಸಿ 6 ನೇ ಸ್ಥಾನ ಗಳಿಸಿದ್ದರು. ಅಲ್ಲದೆ, ಗುವಾಹಟಿಯಲ್ಲಿ ನಡೆದ ರಾಷ್ಟ್ರೀಯ ಅಂತರರಾಜ್ಯ ಚಾಂಪಿಯನ್ಶಿಪ್ನಲ್ಲಿ 400 ಮೀ. ಓಟವನ್ನು ಕೇವಲ 51.13 ಸೆಕೆಂಡುಗಳಲ್ಲಿ ಕ್ರಮಿಸಿದ್ದ ಹಿಮಾ ಅಲ್ಲಿಯೂ ಕೂಡ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು.