Photos : ಮುಸ್ಲಿಮರ ಪವಿತ್ರ ದೇಶದಲ್ಲಿ ಶಿವನ ಆರಾಧನೆಗೆ ದೇಗುಲ, ನಾಳೆಯಿಂದ ಭಕ್ತರ ಪ್ರವೇಶಕ್ಕೆ ಮುಕ್ತ

Tue, 04 Oct 2022-1:18 pm,

ದುಬೈನ ಜೆಬೆಲ್ ಅಲಿಯಲ್ಲಿ ನಿರ್ಮಿಸಲಾದ ಹೊಸ ಹಿಂದೂ ದೇವಾಲಯಕ್ಕೆ ಇಂದಿನಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ದೇವಾಲಯದ ಅಡಿಪಾಯವನ್ನು ಫೆಬ್ರವರಿ 2020 ರಲ್ಲಿ ಹಾಕಲಾಯಿತು. ಇಂದು ದಸರಾ ಪ್ರಯುಕ್ತ ಈ ದೇವಾಲಯವನ್ನು ಉದ್ಘಾಟಿಸಲಾಗಿದೆ.

ಈ ಪ್ರದೇಶದಲ್ಲಿ ಪೂಜಾ ಸ್ಥಳವನ್ನು ಹೊಂದುವ ದಶಕಗಳ ಭಾರತೀಯರ ಕನಸು ಈ ಮೂಲಕ ಈಡೇರಿದೆ. 

ದಸರಾ ಹಬ್ಬದ ದಿನವಾದ ಅಕ್ಟೋಬರ್ 5 ರಿಂದ ಸಾರ್ವಜನಿಕರಿಗೆ ಅಧಿಕೃತವಾಗಿ ದೇವಾಲಯವು ತೆರೆಯಲಿದೆ. ಎಲ್ಲಾ ಧರ್ಮದ ಜನರೆ ಪ್ರವೇಶಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗುವುದು. ಮುಸ್ಲಿಂ ರಾಷ್ಟ್ರ ದುಬೈನಲ್ಲಿ ಭವ್ಯ ಹಿಂದೂ ದೇಗುಲ ಇದೀಗ ಉದ್ಘಾಟನೆಯಾಗಿದೆ.   

ಒಂಬತ್ತು ಎತ್ತರದ ಬಿಳಿ ಅಮೃತಶಿಲೆಯ ಶಿಖರಗಳು, ಅಲಂಕೃತ ಕಂಬಗಳು ಸೇರಿದಂತೆ ದೇವಾಲಯದ ಗೋಡೆಗಳ ಮೇಲೆ ಸಂಸ್ಕೃತ ಶ್ಲೋಕಗಳನ್ನ ಕೆತ್ತಲಾಗಿದ್ದು ಅನೇಕ ವಿಶೇಷತೆಗಳಿಂದ ಕೂಡಿದೆ. 

ಹತ್ತಾರು ಆನೆಗಳು ಮತ್ತು ಎತ್ತರದ ಕಾಂಕ್ರೀಟ್ ಕಂಬಗಳು, ವಿಸ್ತಾರವಾದ ಅಷ್ಟಭುಜಾಕೃತಿಯ ಪ್ರಾರ್ಥನಾ ಮಂದಿರ, ವಿಶಿಷ್ಟ ವೇದಿಕೆ ದೇವಾಲಯಕ್ಕೆ ಮತ್ತಷ್ಟು ಮೆರಗು ನೀಡಿದೆ. 

ದೇವಾಲಯದ ಬಾಗಿಲುಗಳನ್ನು ಅಡಿಕೆ ಮರದಿಂದ ನಿರ್ಮಿಸಲಾಗಿದೆ. ಅಮೃತಶಿಲೆಯಲ್ಲಿ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. 

ದೇಗುಲದಲ್ಲಿ ಒಂದು ಜ್ಞಾನ ಕೊಠಡಿ, 1 ಸಮುದಾಯ ಕೇಂದ್ರವಿದೆ. ಮದುವೆಗಳು, ಹೋಮ, ಹವನಗಳು ಸೇರಿದಂತೆ ಇತರ ಖಾಸಗಿ ಕಾರ್ಯಕ್ರಮಗಳನ್ನು ಮಾಡಲು ಇಲ್ಲಿ ಅವಕಾಶ ನೀಡಲಾಗುವುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link