ಇಂಗಿನ ನೀರಿಗೆ ಕಾಲು ಚಮಚ ಈ ಪುಡಿ ಹಾಕಿ ಕುಡಿಯಿರಿ !ಯೂರಿಕ್ ಆಸಿಡ್ ಕರಗಿ ನೀರಾಗುವುದು, ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗುವುದು !
ಪ್ರೋಟೀನ್ ಹೇರಳವಾಗಿರುವ ಯಾವುದೇ ಆಹಾರ ಸೇವಿಸಿದರೂ ಅದರ ತ್ಯಾಜ್ಯ ಪ್ಯೂರಿನ್ ಹೊರಬರುತ್ತದೆ.ಈ ಪ್ಯೂರಿನ್ ಅನ್ನು ಮಲ ಮತ್ತು ಮೂತ್ರದ ಮೂಲಕ ದೇಹದಿಂದ ಹೊರಹಾಕುವುದು ಬಹಳ ಮುಖ್ಯ.
ಪ್ಯೂರಿನ್ ದೇಹದಿಂದ ಹೊರ ಹೋಗದೆ ಸಂಗ್ರಹವಾಗಲು ಪ್ರಾರಂಭಿಸಿದಾಗ ಮತ್ತು ಮೂಳೆಗಳನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುತ್ತದೆ.ಆಗ ಪ್ಯೂರಿನ್ ಚಯಾಪಚಯವನ್ನು ವೇಗಗೊಳಿಸುವ ಆಹಾರವನ್ನು ಸೇವಿಸಬೇಕು.
ಇಂಗು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುವ ಮೂಲಕ ಪ್ರೋಟೀನ್ ಚಯಾಪಚಯವನ್ನು ವೇಗಗೊಳಿಸುತ್ತದೆ.ಈ ಮೂಲಕ ಫ್ಯುರಿನ್ ಅನ್ನು ದೇಹದಿಂದ ಹೊರಹಾಕುತ್ತದೆ.
ಇಂಗು ಶಾಖವನ್ನು ಉತ್ಪಾದಿಸುವ ಗುಣವನ್ನು ಹೊಂದಿರುವುದರಿಂದ ಪ್ಯೂರಿನ್ ಕಲ್ಲುಗಳನ್ನು ಕರಗಿಸಲು ಸಹಾಯ ಮಾಡುತ್ತದೆ.ಪ್ಯೂರಿನ್ ಕಲ್ಲುಗಳನ್ನು ಒಡೆದು ಮೂತ್ರದೊಂದಿಗೆ ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.
ಇಂಗು ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿದೆ.ಹಾಗಾಗಿ ಯೂರಿಕ್ ಆಸಿಡ್ ನಿಂದ ಉಂಟಾಗುವ ನೋವನ್ನು ಕಡಿಮೆ ಮಾಡುತ್ತದೆ.ಇದು ಮೂಳೆಗಳ ನಡುವಿನ ಒತ್ತಡವನ್ನು ಕಡಿಮೆ ಮಾಡಿ, ಯೂರಿಕ್ ಆಸಿಡ್ ಸಮಸ್ಯೆಯಿಂದ ಪರಿಹಾರ ನೀಡುತ್ತದೆ.
ಇದಕ್ಕಾಗಿ ಇಂಗನ್ನು ಬಾಣಲೆಯಲ್ಲಿ ಬಿಸಿ ಮಾಡಿ ಪುಡಿ ಮಾಡಿಕೊಳ್ಳಿ. ನಂತರ, ಅದಕ್ಕೆ ಬ್ಲಾಕ್ ಸಾಲ್ಟ್ ಸೇರಿಸಿ ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ, ಬಿಸಿ ಇರುವಾಗಲೇ ಕುಡಿಯಬೇಕು. 10 ನಿಮಿಷಗಳ ನಂತರ 1 ಲೋಟ ತಣ್ಣೀರು ಕುಡಿಯಿರಿ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹೀಗೆ ಮಾಡಬೇಕು. ಯೂರಿಕ್ ಆಸಿಡ್ ಮತ್ತು ಸ್ಟೋನ್ ಸಮಸ್ಯೆಯಿಂದ ಪರಿಹಾರ ಖಂಡಿತಾ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.