ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈʼ ದೊಡ್ಡ ಕಂಡಿಷನ್ ಹಾಕಿದ್ರಂತೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾ!‌ ಅಷ್ಟಕ್ಕೂ ಏನದು ಗೊತ್ತಾ?

Sun, 13 Oct 2024-7:57 am,

ರೋಹಿತ್ ಮತ್ತು ಅವರ ಪತ್ನಿ ರಿತಿಕಾ ಸಜ್ದೆ ಅವರ ಮೊದಲ ಭೇಟಿ ವಿಶೇಷವೇನಲ್ಲ. ಸ್ಪೋರ್ಟ್ಸ್ ಮ್ಯಾನೇಜರ್ ಆಗಿದ್ದಲ್ಲದೆ, ರಿತಿಕಾ ಯುವರಾಜ್ ಸಿಂಗ್ ಅವರ ಸಹೋದರಿ ಕೂಡ. ರಿತಿಕಾ ಅವರನ್ನು ಭೇಟಿಯಾಗುವ ಮುನ್ನವೇ ಯುವರಾಜ್ ಸಿಂಗ್ ಅವರು ರೋಹಿತ್‌ಗೆ ಎಚ್ಚರಿಕೆ ನೀಡಿದ್ದರು, ಆಕೆ ತನ್ನ ಸಹೋದರಿ, ಅವಳೊಂದಿಗೆ ಮಾತನಾಡುವ ಮೊದಲು ಇದನ್ನು ನೆನಪಿನಲ್ಲಿಡಿ ಎಂದು..     

ರೋಹಿತ್ ಶರ್ಮಾ ಮೊದಲ ಭೇಟಿಯಲ್ಲಿ ರಿತಿಕಾ ಅಹಂಕಾರಿ ಎಂದು ತಿಳಿದಿದ್ದರು.. ಆದರೆ ಒಂದೆರಡು ಭೇಟಿಗಳ ಬಳಿಕ ಅವರಿಬ್ಬರ ನಡುವಿನ ತಪ್ಪು ತಿಳುವಳಿಕೆಗೆ ತೆರೆ ಬಿದ್ದಿತು..      

ಸಂದರ್ಶನವೊಂದರಲ್ಲಿ, ರೋಹಿತ್ ಮದುವೆಗೆ ಮೊದಲು ರಿತಿಕಾಗೆ ಷರತ್ತು ಹಾಕಿದ್ದ ಘಟನೆಯನ್ನು ಹೇಳಿಕೊಂಡಿದ್ದರು.. "ನಾನು ಶೂಟಿಂಗ್ ಸಮಯದಲ್ಲಿ ಮೊದಲ ಬಾರಿಗೆ ರಿತಿಕಾ ಅವರನ್ನು ಭೇಟಿ ಮಾಡಿದ್ದೇ.. ಅಲ್ಲಿ ಯುವರಾಜ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಕೂಡ ಜೊತೆಯಾಗಿದ್ದರು. ನಾನು ರಿತಿಕಾ ಜೊತೆ ಮಾತನಾಡುವ ಮುಂಚೆಯೇ ಯುವಿ ಅವಳತ್ತ ನೋಡಬೇಡ, ಅವಳು ನನ್ನ ಸಹೋದರಿ ಎಂದು ಹೇಳಿದ...     

ಬಳಿಕ ಕ್ರಮೇಣ ನಾನು ರಿತಿಕಾ ಜೊತೆ ಸ್ನೇಹ ಬೆಳೆಸಿದೆ.. ನಂತರ ಅದು ಪ್ರೀತಿಗೆ ತಿರುಗಿತು. ನಾವಿಬ್ಬರೂ ನಮ್ಮ ಸಂಬಂಧದ ಬಗ್ಗೆ ನಮ್ಮ ಮನೆಯವರಿಗೆ ಹೇಳಬೇಕು ಎಂದು ನಿರ್ಧರಿಸಿದ ಸಮಯ ಬಂದಿತು. ಆಗ ನಾನು ರಿತಿಕಾ ಅವರ ಕುಟುಂಬವನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದೆ. ರಿತಿಕಾ ಅವರ ತಾಯಿ ತುಂಬಾ ಮುದ್ದಾಗಿದ್ದಾರೆ, ನಾನು ಬೇರೆಯವರ ಮನೆಯಲ್ಲಿ ಇದ್ದೇನೆ ಎಂದು ನನಗೆ ಅನಿಸಲಿಲ್ಲ ಅಷ್ಟು ಚೆನ್ನಾಗಿ ಸತ್ಕಾರ ಮಾಡಿದರು..    

 ರಿತಿಕಾ ತಂದೆ ಕೂಡ ತುಂಬಾ ಒಳ್ಳೆಯ ಮನಸ್ಸುಳ್ಳವರು. ಅವರ ಮನಸ್ಸಿನಲ್ಲಿರುವುದು ಅವರ ನಾಲಿಗೆಯ ಮೇಲೆ ಎನ್ನುವಂತಿದ್ದರು.. ಆಗ ನಾನು ರಿತಿಕಾ ಜೊತೆ ಜೋಕ್ ಮಾಡಿದೆ. ನಿಜವಾಗಿ ಆಗ ರಿತಿಕಾಗೆ ಅಡುಗೆ ಗೊತ್ತಿರಲಿಲ್ಲ, ಅಡುಗೆ ಗೊತ್ತಿರಬೇಕು ಎಂದು ನಮ್ಮ ಅಮ್ಮ ಹೇಳಿದ್ದಾರೆ ಎಂದು ಹೇಳಿದೆ.. ಹೆಣ್ಣು ಮಗುವಿಗೆ ಈ ಕೌಶಲ್ಯ ಇರಬೇಕು ಎಂಬುದು ನಮ್ಮ ಮನೆಯಲ್ಲಿ ನಿಯಮ.     

ಈ ಷರತ್ತನ್ನು ರಿತಿಕಾ ಮುಂದೆ ಇಟ್ಟಾಗ ನಾನು ಅಡುಗೆ ಕಲಿಯುತ್ತೇನೆ ಎಂದು ಹೇಳಿದಳು... ಆಗ ನಾನು ರಿತಿಕಾಗೆ ಹೇಳಿದ್ದು ತಮಾಷೆಗೆ ಮಾತ್ರ.. ರಿತಿಕಾ ಕೇವಲ ಅಡುಗೆಯನ್ನು ಕಲಿಯುವುದು ಮಾತ್ರವಲ್ಲದೆ ಅದ್ಭುತವಾದ ಬಗೆಬಗೆಯ ಅಡುಗೆಯನ್ನೂ ಮಾಡುವುದನ್ನು ಕಲಿತಿದ್ದಾರೆ ಎಂದು ರೋಹಿತ್‌ ಹೇಳಿಕೊಂಡಿದ್ದರು..     

ಇನ್ನು ರೋಹಿತ್‌ ಶರ್ಮಾ ಹಾಗೂ ರಿತಿಕಾ ದಂಪತಿಗೆ ಈಗ ಒಂದು ಹೆಣ್ಣು ಮಗುವಿದೆ.. ಇತ್ತೀಚೆಗೆ ರಿತಿಕಾ ಮತ್ತೆ ಗರ್ಭಿಣಿಯಾಗಿದ್ದಾರೆ.. ಶೀಘ್ರದಲ್ಲೇ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ ಎನ್ನುವ ಸುದ್ದಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದೆ..   

ಇಷ್ಟೇ ಅಲ್ಲ ಇದಕ್ಕೆ ಪುಷ್ಟಿ ನೀಡುವಂತೆ ಟೆಸ್ಟ್‌ ಪಂದ್ಯಕ್ಕೆ ರೋಹಿತ್‌ ಶರ್ಮಾ ಗೈರಾಗಲಿದ್ದಾರೆ.. ಕಾರಣ ಜೂನಿಯರ್‌ ಹಿಟ್‌ಮ್ಯಾನ್‌ ಎಂಟ್ರಿ ಕೊಡಲಿದ್ದಾರೆ ಎನ್ನುವ ಗುಸು ಕೇಳಿಬರುತ್ತಿದೆ. ಆದರೆ ಇದ್ಯಾವುದಕ್ಕೂ ರೋಹಿತ್‌ ಶರ್ಮಾ ಅವರಿಂದ ಪ್ರತಿಕ್ರಿಯೆ ಬಂದಿಲ್ಲ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link