Holi 2024: ವಿಶ್ವದ ಈ ದೇಶಗಳಲ್ಲಿಯೂ ಕೂಡ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ
ನೇಪಾಳ : ನೇಪಾಳದ ಜನರು ಹೋಳಿ ಹಬ್ಬವನ್ನು ಜನರು ಫಾಗು ಪೊರ್ಣಿಮಾ ಎಂದು ಕರೆಯುತ್ತಾರೆ. , ಈ ಸಂದರ್ಭದಲ್ಲಿ ಅಲ್ಲಿ ಬಲೂನ್‌ಗಳಲ್ಲಿ ಬಣ್ಣಗಳನ್ನು ತುಂಬಿ ಎಸೆಯುವ ಸಂಪ್ರದಾಯವಿದೆ.
ಫಿಜಿ: ಫಿಜಿಯಲ್ಲಿ ಹೋಳಿ ಹಬ್ಬವನ್ನು ವಿನೋದಕ್ಕಾಗಿ ಆಚರಿಸಲಾಗುತ್ತದೆ. ಜನರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಪರಸ್ಪರಿಗೆ ಬಣ್ಣಗಳಿಂದ ತುಂಬಿದ ಬಲೂನುಗಳನ್ನು ಎಸೆಯುತ್ತಾರೆ.
ಇಂಡೋನೇಷ್ಯಾ: ಇಂಡೋನೇಷಿಯನ್ನರು ಹೋಳಿ ಹಬ್ಬವನ್ನು "ಪ್ರೋಹಿಯಾನ್" ಎಂದು ಕರೆಯುತ್ತಾರೆ. ಈ ದಿನ ಜನರು ಪರಸ್ಪರ ಮನೆಗಳಿಗೆ ಹೋಗಿ ಪಾರ್ಟಿ ಮಾಡುತ್ತಾರೆ ಮತ್ತು ಬಣ್ಣದ ಹಬ್ಬವನ್ನು ಆಚರಿಸುತ್ತಾರೆ.
ಅಮೇರಿಕಾ: ಅಮೆರಿಕದ ಜನರು ಈ ದಿನದಂದು ದೊಡ್ಡ ಪಾರ್ಟಿಗಳನ್ನು ಆಯೋಜಿಸುತ್ತಾರೆ. ಇದರೊಂದಿಗೆ ಅವರು ಸಾಂಪ್ರದಾಯಿಕ ಭಾರತೀಯ ಬಟ್ಟೆಗಳನ್ನು ಧರಿಸಿ ಬಣ್ಣಗಳೊಂದಿಗೆ ಆಡುತ್ತಾರೆ
ಯುರೋಪ್: ಕೆಲವು ಯುರೋಪಿಯನ್ ದೇಶಗಳಲ್ಲಿ, ಈ ಹಬ್ಬವನ್ನು ಭಾರತದಂತೆಯೇ ವೈಭವ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಅಲ್ಲಿ ಹೋಲಿಕಾ ದಹನ ಸಂಪ್ರದಾಯ ನಡೆಸಲಾಗುವುದಿಲ್ಲ.
ಮಾರಿಷಸ್: ಮಾರಿಷಸ್‌ನ ಜನರು ಹೋಳಿ ಹಬ್ಬವನ್ನು ಭಾರತದಂತೆಯೇ ಆಚರಿಸುತ್ತಾರೆ. ಈ ದಿನದಂದು ಹೋಲಿಕಾ ದಹನ್ ಕೂಡ ನೆಡೆಸಲಾಗುತ್ತದೆ. ಅಲ್ಲಿನ ಜನರು ಹೋಳಿಯನ್ನು ಕೃಷಿಗೆ ಸಂಬಂಧಿಸಿದ ಹಬ್ಬ ಎನ್ನುತ್ತಾರೆ.
ಶ್ರೀಲಂಕಾ: ಶ್ರೀಲಂಕಾದ ಜನರು ಈ ಹಬ್ಬವನ್ನು ಭಾರತದಂತೆಯೇ ಆಚರಿಸುತ್ತಾರೆ. ಈ ದಿನದಂದು ಕೊಲಂಬೊದ ಪ್ರಸಿದ್ಧ ಶ್ರೀ ಶಿವ ಸುಬ್ರಮಣ್ಯಂ ಸ್ವಾಮಿ ದೇವಾಲಯದ ಆವರಣದಲ್ಲಿ ಹೋಳಿ ಆಯೋಜಿಸಲಾಗುತ್ತದೆ.
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)