Home Appliances Price Hike: ಜನವರಿ 2021ರಿಂದ TV, Fridge, Washing Machine ದುಬಾರಿ

Sun, 27 Dec 2020-4:51 pm,

ಇದಲ್ಲದೆ ಟಿವಿ ಪ್ಯಾನೆಲ್ ಗಳ ಸಪ್ಲೈ ಕೂಡ ಕಡಿಮೆಯಾಗಿದ್ದು, ಇವುಗಳ ಬೆಲೆಯಲ್ಲಿ ದುಪ್ಪಟ್ಟು ಏರಿಕೆಯಾಗಿದೆ. ಕಚ್ಚಾ ತೈಲ ಬೆಲೆ ಏರಿಕೆಯ ಕಾರಣ ಪ್ಲಾಸ್ಟಿಕ್ ಬೆಲೆ ಕೂಡ ಏರಿಕೆಯಾಗಿದೆ ಎಂದು ಉತ್ಪಾದಕರು ಹೇಳಿದ್ದಾರೆ. ಹೀಗಾಗಿ ಜನವರಿಯಿಂದ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು LG, Panasonic ಹಾಗೂ Thomsonಗಳಂತಹ ದೊಡ್ಡ ಕಂಪನಿಗಳು ಹೇಳಿಕೊಂಡಿವೆ. ಇನ್ನೊಂದೆಡೆ Sony ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದು, ಬೆಲೆ ಏರಿಕೆ ಕುರಿತು ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದಿದೆ.

ದರ ಏರಿಕೆ ಕುರಿತು ಹೇಳಿಕೆ ನೀಡಿರುವ Panasonic India ಅಧ್ಯಕ್ಷ ಮತ್ತು ಸಿಇಒ ಮನೀಶ್ ಶರ್ಮಾ, "ಸರಕುಗಳ ಬೆಲೆ ಏರಿಕೆಯು ಮುಂಬರುವ ಸಮಯದಲ್ಲಿ ನಮ್ಮ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತದೆ, ಬೆಲೆಗಳು 6-7% ರಷ್ಟು ಏರಿಕೆಯಾಗಬಹುದು ಎಂದು ನಾನು ಅಂದಾಜಿಸುತ್ತೇನೆ. ಆದರೆ ನಂತರ, ಮೊದಲ ತ್ರೈಮಾಸಿಕದಲ್ಲಿ ಬೆಲೆ 10-11% ಹೆಚ್ಚಾಗುವ ನಿರೀಕ್ಷೆಯಿದೆ" ಎಂದಿದ್ದಾರೆ .

ಸರಕುಗಳ ಬೆಲೆ ಏರಿಕೆ ಕುರಿತು ಹೇಳಿಕೆ ನೀಡಿರುವ LG Electronics India ಉಪಾಧ್ಯಕ್ಷ (ಹೋಮ್ ಅಪ್ಲೈಯನ್ಸಸ್) ಕೆ. ವಿಜಯ್ ಬಾಬು, ಮುಂಬರುವ ಜನವರಿಯಿಂದ ನಾವು ಸರಕುಗಳ ಬೆಲೆಯನ್ನು ಶೇ.6 ರಿಂದ ಶೇ.7 ರಷ್ಟು ಏರಿಕೆ  ಮಾಡುವ ನಿರ್ಣಯ ಕೈಗೊಂಡಿದ್ದು, ಇವುಗಳಲ್ಲಿ ಟಿವಿ, ವಾಶಿಂಗ್ ಮಶೀನ್ ಹಾಗೂ ರೆಫ್ರಿಜರೇಟರ್ ಇತ್ಯಾದಿಗಳು ಶಾಮೀಲಾಗಿವೆ. ಏಕೆಂದರೆ ಅಲ್ಯುಮಿನಿಯಂ, ಕಾಪರ್ ಸೇರಿದಂತ ಪ್ಲಾಸ್ಟಿಕ್ ಬೆಲೆ ಕೂಡ ಏರಿಕೆಯಾಗಿವೆ" ಎಂದಿದ್ದಾರೆ.

ದರ ಏರಿಕೆಯ ಕುರಿತು Sony India MD ಸುನಿಲ್ ನಾರಾಯಣ್ ಅವರನ್ನು ಪ್ರಶ್ನಿಸಲಾಗಿ, ನಾವು ಪ್ರಸ್ತುತ ''wait and watch' ಅಂದರೆ ಕಾದುನೋಡುವ ತಂತ್ರ ಅನುಸರಿಸಿದ್ದೇವೆ ಎಂದಿದ್ದಾರೆ. ಪರಿಸ್ಥಿತಿಯ ಅವಲೋಕನದ ಬಳಿಕವಷ್ಟೇ ನಾವು ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ನಾವು ಸಪ್ಲೈ ಸೈಡ್ ನ ಅವಲೋಕನ ನಡೆಸುತ್ತಿದ್ದು ಇದು ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಪರಿಸ್ಥಿತಿ ಸ್ಪಷ್ಟವಾಗಿಲ್ಲದಿರುವ ಕಾರಣ ನಿರ್ಣಯ ಕೈಗೊಳ್ಳಲು ಆಗುತ್ತಿಲ್ಲ. ಪ್ಯಾನೆಲ್ ಬೆಲೆ ಏರಿಕೆಯಾಗಿರುವುದರ ಜೊತೆಗೆ ಇತರೆ ಕಚ್ಚಾ ಸಾಮಗ್ರಿಗಳು ದುಬಾರಿಯಾಗಿವೆ. ಅದರಲ್ಲೂ ವಿಶೇಷವಾಗಿ ಟಿವಿಯ ಚಿಕ್ಕ ಸೈಜ್ ಸ್ಕ್ರೀನ್ ಗಳ ವಿಷಯದಲ್ಲಿ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ. ಏಕೆಂದರೆ ಇವುಗಳ ಬೆಲೆ ವೇಗವಾಗಿ ಹೆಚ್ಚಾಗುತ್ತವೆ. ದೊಡ್ಡ ಸ್ಕ್ರೀನ್ ಗಳ ವಿಷಯದಲ್ಲಿಯೂ ಕೂಡ ಇದೆ ಪರಿಸ್ಥಿತಿ ಇದೆ. ಆದರೆ, ಇದಕ್ಕಾಗಿ ಚಿಂತಿಸುವ ಅವಶ್ಯಕತೆ ಇಲ್ಲ, ಏಕೆಂದರೆ ಇಂದಿಗೂ ಕೂಡ ಭಾರತ 32 ಇಂಚಿನ ಟಿವಿಗಳಿಗಾಗಿ ಅತಿ ದೊಡ್ಡ ಮಾರುಕಟ್ಟೆಯಾಗಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ Super Plastronics CEO ಅವನೀತ್ ಸಿಂಗ್ ಮಾರ್ವಾಹ್, TV Opencell ಬೆಲೆಯಲ್ಲಿ ಶೇ.200 ಕ್ಕೂ ಅಧಿಕ ಏರಿಕೆಯಾಗಿದೆ. Super Plastronics ಭಾರತದಲ್ಲಿ Thomson ಹಾಗೂ Kodak ನಂತಹ ಬ್ರಾಂಡ್ ಗಳನ್ನು ಪ್ರತಿನಿಧಿಸುತ್ತದೆ. ಪ್ರಸ್ತುತ ನಾವು ಪ್ಯಾನಲ್ ಗಳಿಗಾಗಿ ಚೀನಾ ದೇಶವನ್ನು ಅವಲಂಭಿಸಿದ್ದೇವೆ. ಏಕೆಂದರೆ ವಿಶ್ವದಲ್ಲಿ ಎರಡನೇ ಪ್ಯಾನೆಲ್ ಮ್ಯಾನುಫ್ಯಾಕ್ಚರಿಂಗ್ ದೇಶ ಇಲ್ಲ. ಹೀಗಾಗಿ ಜನವರಿಯಿಂದ Thomson ಹಾಗೂ Kodak Android TVಗಳ ಬೆಲೆ ಶೇ.20ರಷ್ಟು ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ Godrej Appliances ಎಕ್ಸಿಕ್ಯೂಟಿವ್  ವೈಸ್ ಪ್ರೆಸಿಡೆಂಟ್ ಹಾಗೂ ಬಿಸಿನೆಸ್ ಹೆಡ್ ಕಮಲ್ ನಂದಿ, ಕಮೊಡಿಟಿಗಳ ಬೆಲೆಯಲ್ಲಿ ಶೇ.20-25ರಷ್ಟು ಏರಿಕೆ, ದುಬಾರಿ ವಾಯುಯಾನ ಶುಲ್ಕ, ಕೊರೊನಾ ಕಾಲದಲ್ಲಿ ನಿಂತುಹೋಗಿರುವ ಮೈನಿಂಗ್ ಉದ್ಯಮದಿಂದ ಅಪ್ಲೈನ್ಸಿಸ್ ಗಳ ಹೂಡಿಕೆಯ ಮೇಲೆ ಭಾರಿ ಒತ್ತಡ ಬಿದ್ದಿದೆ. ಹೀಗಾಗಿ ಕಂಪನಿಗಳು ಮುಮ್ಬರುವದಿನಗಳಲ್ಲಿ ಸರಕುಗಳ ಬೆಲೆಯಲ್ಲಿ ಶೇ.8 ರಿಂದ ಶೇ.10 ರಷ್ಟು ಏರಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ಹೊಸವರ್ಷದ ಮೊದಲ ತ್ರೈಮಾಸಿಕದಲ್ಲಿ ಡಿಮಾಂಡ್ ಮತ್ತು ಸಪ್ಲೈಗಳ ಮೇಲೆಯೂ ಪ್ರಭಾವ ಉಂಟಾಗಲಿದೆ ಎಂದು ಅವರು ಹೇಳಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link