Home loan rates: ನಿಮ್ಮ EMI ಎಷ್ಟಿರಲಿದೆ ? ಯಾವ ಬ್ಯಾಂಕ್ ನೀಡುತ್ತದೆ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ? ಇಲ್ಲಿದೆ ಮಾಹಿತಿ
ಈ ಹಬ್ಬದ ಸಮಯದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಗೃಹ ಸಾಲದ ಮೇಲಿನ ಬಡ್ಡಿದರವನ್ನು 15 ಬಿಪಿಎಸ್ (ಬೇಸ್ ಪಾಯಿಂಟ್) ಕಡಿತ ಮಾಡಿದೆ. ಈಗ ಗೃಹ ಸಾಲದ ಹೊಸ ಬಡ್ಡಿದರವು ವರ್ಷಕ್ಕೆ 6.50% ಆಗಿರುತ್ತದೆ.
ಐಡಿಎಫ್‌ಸಿ ಬ್ಯಾಂಕ್ ಹಬ್ಬದ ದಿನಗಳಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರವನ್ನು 6.50% ಕ್ಕೆ ಇಳಿಸಿದೆ.
ಈ ಹಬ್ಬದ ಸಮಯದಲ್ಲಿ, ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಗೃಹ ಸಾಲಗಳ ಮೇಲೆ ಶೇಕಡಾ 6.70 ರಿಂದ ಆರಂಭವಾಗುವ ಆಕರ್ಷಕ ಬಡ್ಡಿದರಗಳನ್ನು ಮತ್ತು ಇತರ ಬ್ಯಾಂಕುಗಳಿಂದ ಗೃಹ ಸಾಲಗಳ ಬ್ಯಾಲೆನ್ಸ್ ವರ್ಗಾವಣೆಯನ್ನು ನೀಡುತ್ತದೆ.
ಬ್ಯಾಂಕ್ ಆಫ್ ಬರೋಡಾ ಹಬ್ಬದ ಋತುವಿನಲ್ಲಿ ಗೃಹ ಸಾಲದ ಬಡ್ಡಿದರವನ್ನು 6.50% ಕ್ಕೆ ಇಳಿಸಿದೆ. ಈ ಕೊಡುಗೆಯ ಲಾಭವು ಡಿಸೆಂಬರ್ 31 ರವರೆಗೆ ಲಭ್ಯವಿರುತ್ತದೆ.
ಹಬ್ಬದ ,ಋತುವಿನಲ್ಲಿ, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ ಕೂಡ ಗೃಹ ಸಾಲದ ಬಡ್ಡಿ ದರವನ್ನು 6.75%ಕ್ಕೆ ಇಳಿಸಿದೆ.