ತೆಂಗಿನೆಣ್ಣೆಯಲ್ಲಿ ಈ 3 ಪದಾರ್ಥ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗಿ ಮೊಣಕಾಲುದ್ದ ಬೆಳೆಯುತ್ತೆ!
ಬದಲಾದ ಒತ್ತಡ ಭರಿತ ಜೀವನಶೈಲಿಯಿಂದಾಗಿ ಕೂದಲುದುರುವಿಕೆ, ಅಕಾಲಿಕ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ.
ತೆಂಗಿನೆಣ್ಣೆಯಲ್ಲಿ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬೆರೆಸಿ ಕೂದಲಿನ ಬುಡದಿಂದ ಹಚ್ಚುವುದರಿಂದ ಕೂದಲುದುರುವಿಕೆ, ತಲೆಹೊಟ್ಟಿನ ಸಮಸ್ಯೆ, ಬಿಳಿ ಕೂದಲಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಕೂದಲಿಗಾಗಿ ಮನೆಮದ್ದು ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ... * ಮೆಂತ್ಯ ಕಾಳುಗಳು * ಈರುಳ್ಳಿ ಸಿಪ್ಪೆ * ಕರಿಬೇವಿನ ಸೊಪ್ಪು * ತೆಂಗಿನೆಣ್ಣೆ
ಮೊದಲಿಗೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ಒಂದು ಸ್ಪೂನ್ ಮೆಂತ್ಯ ಕಾಳುಗಳು, ಈರುಳ್ಳಿ ಸಿಪ್ಪೆ, ಕರಿಬೇವಿನ ಸೊಪ್ಪನ್ನು ಹಾಕಿ ಪುಡಿ ಮಾಡಿಕೊಳ್ಳಿ. ಬಳಿಕ ಇದನ್ನು ಒಂದು ತವದ ಮೇಲಿಟ್ಟು ಸಣ್ಣ ಉರಿಯಲ್ಲಿ ಕಪ್ಪಾಗುವವರೆಗೂ ಹುರಿಯಿರಿ. ನಂತರ ಇದನ್ನು ಜರಡಿಯಾಡಿ ಒಂದೆರಡು ಸ್ಪೂನ್ ತೆಂಗಿನೆಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ.
ಕೂದಲಿಗಾಗಿ ತಯಾರಿಸಿಟ್ಟ ಹೇರ್ ಪ್ಯಾಕ್ ಅನ್ನು ಬುಡದಿಂದ ತುದಿಯವರೆಗೂ ಹಚ್ಚಿ ಒಂದೆರಡು ಗಂಟೆಗಳ ಕಾಲ ಹಾಗೆ ಬಿಡಿ.
ಹೇರ್ ಪ್ಯಾಕ್ ಹಚ್ಚಿ ಎರಡು ಗಂಟೆಗಳ ಬಳಿಕ ಸೌಮ್ಯವಾದ ಶಾಂಪೂವಿನಲ್ಲಿ ಸ್ವಲ್ಪ ನೀರು ಬೆರೆಸಿ ಇದರಿಂದ ತಲೆಗೆ ಸ್ನಾನ ಮಾಡಿ.
ಈರುಳ್ಳಿ ಸಿಪ್ಪೆ, ಕರಿಬೇವಿನ ಸೊಪ್ಪು, ಮೆಂತ್ಯಕಾಳುಗಳನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ತಯಾರಿಸಿದ ಹೇರ್ ಪ್ಯಾಕ್ ಅನ್ನು ಈ ರೀತಿ ವಾರಕ್ಕೊಮ್ಮೆ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುವುದರ ಜೊತೆಗೆ ತಲೆಹೊಟ್ಟು ನಿವಾರಣೆಯಾಗಿ, ಕೂದಲು ಮೊಣಕಾಲುದ್ದ ಬೆಳೆಯುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.