ತೆಂಗಿನೆಣ್ಣೆಗೆ ಈ ಪುಡಿ ಬಳಸಿದರೆ ಸಿದ್ದವಾಗುತ್ತದೆ ನ್ಯಾಚ್ಯುರಲ್ ಡೈ !ಹಚ್ಚಿದ ಮೇಲೆ ಕಾಯುವ ಅಗತ್ಯವೂ ಇಲ್ಲ, ಬಿಳಿ ಕೂದಲು ನಿಮಿಷದಲ್ಲಿಯೇ ಕಪ್ಪಾಗುವುದು
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ಅನೇಕ ಪ್ರಾಡಕ್ಟ್ ಗಳು ಲಭ್ಯವಿದೆ. ಆದರೆ ಅವುಗಳೆಲ್ಲವೂ ಕೆಮಿಕಲ್ ನಿಂದಲೇ ಕೂಡಿರುತ್ತವೆ. ಇವುಗಳು ಕೂದಲನ್ನು ನಿರ್ಜಿವ ಗೊಳಿಸುತ್ತವೆ.
ಅದರ ಬದಲು ಮನೆಯಲ್ಲಿಯೇ ನ್ಯಾಚ್ಯುರಲ್ ಡೈ ತಯಾರಿಸಿ ಹಚ್ಚಿದರೆ ಕೂದಲು ಕಪ್ಪಾಗಿಯೂ ಆಗುತ್ತದೆ. ಯಾವ ರೀತಿಯ ಅಡ್ಡ ಪರಿಣಾಮವೂ ಇರುವುದಿಲ್ಲ.
ತೆಂಗಿನೆಣ್ಣೆ, ಕಾಫಿ ಪುಡಿ, ಮೆಂತ್ಯೆ ಬೀಜ ಮತ್ತು ಕರಿಬೇವಿನ ಸೊಪ್ಪು ಇದ್ದರೆ ಮನೆಯಲ್ಲಿಯೇ ತಲೆಗೆ ಹಾಕುವ ಕಪ್ಪು ಅಥವಾ ಡೈ ತಯಾರಿಸಿಕೊಳ್ಳಬಹುದು.
ಕರಿಬೇವಿನ ಸೊಪ್ಪು ಮತ್ತು ಮೆಂತ್ಯೆ ಬೀಜವನ್ನು ಕಪ್ಪು ಬಣ್ಣಕ್ಕೆ ತಿರುಗುವವರೆಗೆ ಹುರಿದು ಕೊಳ್ಳಬೇಕು.ನಂತರ ಈ ಎರಡೂ ಪದಾರ್ಥಗಳನ್ನು ನುಣ್ಣಗೆ ಪುಸಿ ಮಾಡಿಕೊಳ್ಳಿ.
ಹೀಗೆ ಮಾಡಿಟ್ಟುಕೊಂಡ ಪುಡಿಗೆ ಕಾಫಿ ಪುಡಿ ಬೆರೆಸಿ. ನಂತರ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕರಿಬೇವು, ಮೆಂತ್ಯೆ, ಕಾಫಿಯ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ.
ಈ ನ್ಯಾಚ್ಯುರಲ್ ಡೈ ಯನ್ನು ಬಿಳಿ ಕೂದಲಿಗೆ ಹಚ್ಚಿದ ಕೂಡಲೇ ಬಿಳಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುವುದು. ಈ ಮಿಶ್ರಣವನ್ನು ಕಿರಿಯರಿಂದ ಹಿರಿಯವರೆಗೆ ಯಾರು ಬೇಕಾದರೂ ಎಷ್ಟು ಬಾರಿ ಬೇಕಾದರೂ ಕೂದಲಿಗೆ ಹಚ್ಚ ಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ