ಮನೆ ತುಂಬಾ ಇರುವೆಗಳಿವಾ..? ಜಸ್ಟ್‌ ಹೀಗೆ ಮಾಡಿ ಒಂದು ಇರುವೆನೂ ಇರಲ್ಲ..

Wed, 25 Sep 2024-11:30 pm,

ಹೌದು.. ಮನೆಯಂದರೆ ಸೊಳ್ಳೆಗಳು, ಜಿರಳೆಗಳು, ಹಲ್ಲಿಗಳು, ಇರುವೆಗಳ ಕಾಟ ತಪ್ಪಿದ್ದಲ್ಲ. ಇವುಗಳನ್ನು ಮನೆಯಿಂದ ಓಡಿಸಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಬಗೆಯ ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡುತ್ತೇವೆ.. ಆದರೂ ಸಹ ಯಾವುದೇ ಪರಿಹಾರ ದೊರೆಯುವುದಿಲ್ಲ..  

ಅಲ್ಲದೆ, ರಾಸಾಯನಿಕ ವಸ್ತುಗಳನ್ನು ಬಳಸುವುದು ಸರಿಯಲ್ಲ.. ಏಕೆಂದರೆ ಮಕ್ಕಳು ಅವುಗಳ ಹಾನಿಯನ್ನ ಅರಿಯದೆ ಬಾಯಿಗೆ ಹಾಕಿಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೆ, ನೋಣಗಳು, ಜಿರಳೆಗಳು ಆಹಾರಗಳ ಮೇಲೆ ಕುಳಿತುಕೊಂಡು ಹಲವಾರು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತವೆ..  

ಈ ಪೈಕಿ ಇರುವೆಗಳು ಯಾವುದೇ ರೋಗಗಳನ್ನು ಹರಡುವುದಿಲ್ಲವಾರದೂ ಹಾಸಿಗೆ, ಬಟ್ಟೆಯೊಳಗೆ ಸೇರಿಕೊಂಡು ಕಚ್ಚುತ್ತದೆ. ಇವುಗಳ ಕಾಟದಿಂದ ತಪ್ಪಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ವಿಷಕಾರಿ ಪುಡಿ ಮತ್ತು ಧ್ರವ ರೂಪದ ರಾಸಾಯನಿಕಗಳನ್ನು ಬಳುತ್ತೇವೆ.. ಆದರೂ ಅವುಗಳು ಮನೆ ಬಿಟ್ಟು ಹೋಗುವುದಿಲ್ಲ.. ಆದರೆ ಈ ಕೆಳಗೆ ನೀಡಿರುವ ಟಿಪ್ಸ್‌ ಶಾಶ್ವತವಾಗಿ ಇರುವೆಗಳನ್ನು ಮನೆಯಿಂದ ಓಡಿಸುತ್ತವೆ..  

ಬೇಕಿಂಗ್ ಸೋಡಾವನ್ನು ಇರುವೆ ನಿವಾರಕಗಳಾಗಿ ಬಳಸಬಹುದು. ಇದನ್ನು ಇರುವೆಗಳು ಹೆಚ್ಚಾಗಿ ಬರುವ ಕಡೆಗೆ ಉದುರಿಸಿ. ಮನೆಯಲ್ಲಿ ಕಸವನ್ನು ಎಸೆಯುವ ಡಸ್ಟ್ ಬಿನ್ ಸುತ್ತ ಅಡುಗೆ ಸೋಡಾ ಸಿಂಪಡಿಸಿದರೆ ಸಾಕು ಇರುವೆ ಅತ್ತ ಸುಳಿಯುವುದಿಲ್ಲ.   

ಕಾಳುಮೆಣಸನ್ನು ಸಹ ಇರುವೆ ನಾಶಕವನ್ನಾಗಿ ಉಪಯೋಗಿಸಬಹುದು. ಇರುವೆಗಳು ಸೇರುವ ಸ್ಥಳಗಳಲ್ಲಿ ಮೆಣಸು ಸಿಂಪಡಿಸಿ, ಇದರಿಂದ ಇರುವೆಗಳು ಅಲ್ಲಿಂದ ಓಡಿಹೋಗುತ್ತವೆ. ಕರಿಮೆಣಸಿನ ಪುಡಿಯನ್ನು ನೀರಿನಲ್ಲಿ ಬೆರೆಸಿ ಸಿಂಪಡಿ, ಚಿಟಿಕೆ ಹೊಡೆಯುವಷ್ಟರಲ್ಲಿ ಇರುವೆಗಳು ಮಾಯವಾಗುತ್ತವೆ.  

ಅಡುಗೆ ಪರಿಮಳ ಹೆಚ್ಚಿಸಲು ಬಳಸುವ ದಾಲ್ಚಿನ್ನಿ ವಾಸನೆ ಕಂಡ್ರೆ ಇರುವೆಗಳಿಗೆ ಕಷ್ಟ.. ಹಾಗಾಗಿ ಇರುವೆ ಗೂಡುಗಳ ಬಳಿ ದಾಲ್ಚಿನ್ನಿ ಪುಡಿಯನ್ನು ಹಾಕಿ.. ದಾಲ್ಚಿನ್ನಿ ಎಣ್ಣೆಯ ಬಾಟಲಿಯನ್ನು ಖರೀದಿಸಿ ಅದನ್ನು ನೀರಿನಲ್ಲಿ ಬೆರೆಸಿ ಇರುವೆಗಳು ಬರುವ ಜಾಗದಲ್ಲಿ ಚಿಮುಕಿಸಿ. ಇರುವೆಯಷ್ಟೇ ಅಲ್ಲ ಮತ್ತಿತರ ಕೀಟಗಳು ಅತ್ತ ಬರುವುದಿಲ್ಲ.  

ನಿಂಬೆ ರಸ ಇರುವೆಗಳನ್ನು ಹಿಮ್ಮೆಟ್ಟಿಸುವಲ್ಲಿ ಪರಿಣಾಮಕಾರಿಯಾದ ಕೆಲಸ ಮಾಡುತ್ತದೆ.. ನಿಂಬೆಯ ವಾಸನೆ ಇರುವೆಗಳನ್ನು ಹಿಮ್ಮೆಟ್ಟಿಸುತ್ತದೆ. ಮನೆಯನ್ನು ಸ್ವಚ್ಛಗೊಳಿಸುವಾಗ ನೀರಿಗೆ ಕೆಲವು ಹನಿ ನಿಂಬೆ ರಸವನ್ನು ಬೆರೆಸಿ ಸಿಂಪಡಿಸುವುದು ಉತ್ತಮ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link