ತಿಂಗಳಾನುಗಟ್ಟಲೆ ಕಾಡುವ ಕೆಮ್ಮಿಗೆ ಈ ಎಲೆಯೇ ಪರಿಹಾರ !ಹೀಗೆ ಒಂದು ಸಲ ಬಳಸಿದರೆ ಸಾಕು ಕೆಮ್ಮು, ಶೀತ ಮಾಯವಾಗುವುದು !
ಕೆಮ್ಮು ಒಮ್ಮೆ ಆರಂಭವಾದರೆ ವಾರಗಟ್ಟಲೆ ಮುಂದುವರೆಯುತ್ತದೆ. ಕೆಮ್ಮಿನ ಸಿರಪ್ ಕುಡಿದರೂ ಪರಿಹಾರ ಸಿಗುವುದಿಲ್ಲ.ಆ ಸಂದರ್ಭದಲ್ಲಿ ಕೆಲವು ಮನೆ ಮದ್ದುಗಳೇ ಉಪಯೋಗಕ್ಕೆ ಬರುವುದು.
ದೊಡ್ಡ ಪತ್ರೆ ಸಾಮಾನ್ಯವಾಗಿ ಬಹುತೇಕ ಮನೆಗಳಲ್ಲಿ ಬೆಳೆಯುತ್ತಾರೆ.ಇದು ಕೆಮ್ಮು, ಶೀತಕ್ಕೆ ರಾಮಬಾಣ ಇದ್ದ ಹಾಗೆ. ಈ ಎಲೆಯ ರಸ ಕುಡಿದರೆ ಸಾಕು ಕೆಮ್ಮು ಮಾಯವಾಗಿ ಬಿಡುತ್ತದೆ.
ದೊಡ್ಡಪತ್ರೆ ಎಲೆ, ತುಳಸಿ ಎಲೆ ಮತ್ತು ವೀಳ್ಯದೆಲೆಯನ್ನು ಅರೆದು ರಸ ತೆಗೆದು ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ನೆಗಡಿ, ಕೆಮ್ಮು ದೂರವಾಗುತ್ತದೆ.ಚಿಕ್ಕ ಮಕ್ಕಳಿಗೆ ಇದನ್ನು ನೀಡಿದರೂ ಯಾವ ಅಡ್ಡ ಪರಿಣಾಮವೂ ಆಗುವುದಿಲ್ಲ.
ಬರೀ ದೊಡ್ಡ ಪತ್ರೆ ಮಾತ್ರ ಬಳಸುವುದಾದರೆ ಇದರ ಎಲೆಯನ್ನು ಒಂದು ತವಾ ಮೇಲೆ ಹಾಕಿ ಬಾಡಿಸಿದರೆ ಅದು ಚೆನ್ನಾಗಿ ರಸ ಬಿಡುತ್ತದೆ. ಹೀಗೆತೆಗೆದ ರಸಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ಕುಡಿದರೆ ಶೀತ ಕೆಮ್ಮಿಗೆ ಉತ್ತಮ ಪರಿಹಾರವಾಗಿ ಬಿಡುತ್ತದೆ.
ಇನ್ನು ಮೂಗು ಕಟ್ಟಿ ತಲೆ ನೋವು ಅತಿಯಾಗಿ ಕಾಡುತ್ತಿದ್ದರೆ, ದೊಡ್ಡ ಪತ್ರೆ ಎಲೆ ಯನ್ನು ತವಾ ಮೇಲೆ ಹಾಕಿ ಬಾಡಿಸಿ ಹಣೆಯ ಭಾಗದಲ್ಲಿ ಇಟ್ಟರೆ ಕಟ್ಟಿದ ಮೂಗಿನಿಂದ ಪರಿಹಾರ ಸಿಗುವುದು. ತಲೆ ನೋವು ಕೂಡಾ ಕಡಿಮೆಯಾಗುವುದು.
ಮಕ್ಕಳಿಗೆ ಕೆಮ್ಮು ಬಾಧಿಸುತ್ತಿದ್ದರೆ ಈ ಎಲೆಯನ್ನು ಸ್ವಲ್ಪ ಬಿಸಿ ಮಾಡಿ ಎದೆಯ ಭಾಗಕ್ಕೆ ಇಟ್ಟರೂ ಕಫ ಕರಗುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.