ಕ್ಯಾನ್ಸರ್‌ ಕೂಡ ಕಡಿಮೆ ಮಾಡುವ ಅತ್ಯಂತ ಶಕ್ತಿಶಾಲಿ ಎಲೆ... ಒಮ್ಮೆ ತಿಂದರೆ ಮುಂದಿನ 45 ದಿನ ಬ್ಲಡ್‌ ಶುಗರ್‌ ಕಂಟ್ರೋಲ್‌ ತಪ್ಪೋದೇ ಇಲ್ಲ! ಬೊಜ್ಜು ಇಳಿಕೆಗೂ ಇದು ರಾಮಬಾಣ

Thu, 24 Oct 2024-4:59 pm,

ಜಗತ್ತಿನೆಲ್ಲೆಡೆ ಮಧುಮೇಹ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.. ಅದಕ್ಕೇ ಆರೋಗ್ಯ ಕಾಪಾಡಲು ಕ್ರಮಕೈಗೊಳ್ಳುವುದು ಉತ್ತಮ. ಇತ್ತೀಚಿನ ದಿನಗಳಲ್ಲಿ ಅನಾರೋಗ್ಯಕರ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿಯಿಂದ ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

 

ಮಧುಮೇಹ ಕಾಯಿಲೆಗೆ ಮರೆಡು ಎಲೆ ಅಥವಾ ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆ ಎಲೆಯನ್ನು ದಿವ್ಯ ಔಷಧ ಎಂದು ಪರಿಗಣಿಸಲಾಗುತ್ತದೆ. ಆಯುರ್ವೇದ ಔಷಧಗಳಲ್ಲಿ ವ್ಯಾಪಕವಾಗಿ ಬಳಸುವ ಈ ಎಲೆ, ಮಧುಮೇಹ, ಕ್ಯಾನ್ಸರ್‌, ಕೊಲೆಸ್ಟ್ರಾಲ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಬಿಲ್ವಪತ್ರೆಯನ್ನು ಪ್ರತಿನಿತ್ಯ ಸೇವಿಸುವುದರಿಂದ ಅನೇಕ ರೋಗಗಳು ನಿವಾರಣೆಯಾಗುತ್ತವೆ. ಅಂದಹಾಗೆ ಬಿಲ್ವಪತ್ರೆ ಸೇವನೆಯಿಂದ ದೇಹಕ್ಕೆ ಸಿಗುವ ಪ್ರಯೋಜನ ಎಂತಹದ್ದು ಎಂಬುದನ್ನು ತಿಳಿಯೋಣ.

 

ಬಿಲ್ವಪತ್ರೆ ಸಂಧಿವಾತ ಮತ್ತು ಅತಿಸಾರವನ್ನು ಕಡಿಮೆ ಮಾಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಷ್ಟೇ ಅಲ್ಲದೆ, ದೇಹದ ಬೆವರಿನ ವಾಸನೆ ಮತ್ತು ಮಧುಮೇಹವನ್ನು ಕಡಿಮೆ ಮಾಡುತ್ತದೆ.

 

ಪೂಜೆಯಲ್ಲಿ ಬಳಸುವ ಬಿಲ್ವಪತ್ರೆಯನ್ನು ಸೇವಿಸುವುದರಿಂದ ಮಧುಮೇಹ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

 

ಸಕ್ಕರೆ ಕಾಯಿಲೆಗೆ ಬಿಲ್ವಪತ್ರೆ ತುಂಬಾ ಪ್ರಯೋಜನಕಾರಿ. ಈ ಎಲೆಯ ಕಷಾಯ ಕುಡಿಯುವ ಮೂಲಕ ಅಥವಾ ಜಗಿಯುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲಾಗುತ್ತದೆ. ಅಲ್ಲದೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

 

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹವರಿಗೆ ಬಿಲ್ವಪತ್ರೆ ತುಂಬಾ ಒಳ್ಳೆಯದು. ಈ ಎಲೆ ಸೇವನೆಯಿಂದ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು.

 

ಬಿಲ್ವಪತ್ರೆ ತ್ವಚೆಗೆ ತುಂಬಾ ಒಳ್ಳೆಯದು. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ತ್ವಚೆಯ ಸಮಸ್ಯೆಗಳನ್ನು ದೂರವಿರಿಸಿ ಆರೋಗ್ಯಕರವಾಗಿರಿಸುತ್ತದೆ.

 

ಸೂಚನೆ: ವಿಷಯಗಳು ಮಾಹಿತಿಗಾಗಿ ಮಾತ್ರ. ಇದನ್ನು ತಜ್ಞರ ಸಲಹೆ ಮತ್ತು ಮಾಹಿತಿ ಪ್ರಕಾರ ಒದಗಿಸಲಾಗಿದೆ. ಯಾವುದೇ ಸಂದೇಹಗಳಿದ್ದಲ್ಲಿ, ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link