ಮಧುಮೇಹಿಗಳು ಬೆಳಗೆದ್ದು ಈ ನೀರು ಕುಡಿದರೆ.. ಬ್ಲಡ್ ಶುಗರ್ ದಿನವಿಡಿ ಕಂಟ್ರೋಲ್ʼನಲ್ಲಿರುತ್ತೆ!
)
Blood Sugar Remedies: ಮಧುಮೇಹ ಇಂದು ಅನೇಕರನ್ನು ಕಾಡುತ್ತಿರುವ ಸಮಸ್ಯೆ. ಆಹಾರ ಮತ್ತು ಔಷಧಿಗಳಿಂದ ನಿಯಂತ್ರಿಸಬಹುದು.
)
ಮಧುಮೇಹಿಗಳು ಬೆಳಗೆದ್ದು ಖಾಲಿ ಹೊಟ್ಟೆಗೆ ಈ ನೀರು ಕುಡಿಯುವುದರಿಂದ ಬ್ಲಡ್ ಶುಗರ್ ದಿನವಿಡಿ ಕಂಟ್ರೋಲ್‌ನಲ್ಲಿರುತ್ತದೆ.
)
ಮಧುಮೇಹವನ್ನು ನಿಯಂತ್ರಿಸಲು ಬಾರ್ಲಿ ನೀರು ಸಹಾಯಕವಾಗಿದೆ. ಬಾರ್ಲಿ ನೀರನ್ನು ಕುಡಿಯುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.
ಬಾರ್ಲಿ ನೀರಿನಲ್ಲಿ ಫೈಬರ್ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಬಾರ್ಲಿ ಸಹಾಯ ಮಾಡುತ್ತದೆ. ಇದರಿಂದಾಗಿ ಬ್ಲಡ್ ಶುಗರ್ ಕಂಟ್ರೋಲ್ ಆಗುತ್ತದೆ.
ಬಾರ್ಲಿ ನೀರಿನಲ್ಲಿ ಗ್ಲೈಸೆಮಿಕ್ ಸೂಚ್ಯಂಕ ತುಂಬಾ ಕಡಿಮೆಯಿದೆ. ಬಾರ್ಲಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಹಚ್ಚುವುದಿಲ್ಲ.
ಬಾರ್ಲಿ ನೀರಿನಲ್ಲಿ ಇರುವ ಕರಗುವ ಫೈಬರ್ ತೂಕವನ್ನು ನಿಯಂತ್ರಣದಲ್ಲಿಡುತ್ತದೆ. ಮಧುಮೇಹಿಗಳು ತೂಕವನ್ನು ನಿಯಂತ್ರಿಸುವುದು ಬಹಳ ಮುಖ್ಯವಾದ ಕಾರಣ ಬಾರ್ಲಿ ನೀರನ್ನು ಖಾಲಿ ಹೊಟ್ಟೆಗೆ ಕುಡಿಯಬೇಕು.
ಬಾರ್ಲಿ ನೀರಿಗೆ ಕೆಟ್ಟ ಕೊಲೆಸ್ಟ್ರಾಲ್ ಕರಗಿಸುವ ಶಕ್ತಿಯಿದೆ. ಕೊಲೆಸ್ಟ್ರಾಲ್ ಕಡಿಮೆಯಾದಾಗ ಹೃದ್ರೋಗದ ಅಪಾಯ ಸಹ ಕಡಿಮೆಯಾಗುತ್ತದೆ.
ಖಾಲಿ ಹೊಟ್ಟೆಗೆ ಬಾರ್ಲಿ ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ಮಧುಮೇಹಿಗಳು ತಿಂದ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.