ಮುಖದ ಮೇಲಿನ ಟ್ಯಾನಿಂಗ್ ಹೋಗಲಾಡಿಸಲು ಕಡಲೆ ಹಿಟ್ಟನ್ನು ಹೀಗೆ ಬಳಸಿ! ತಕ್ಷಣ ನಿಮ್ಮದಾಗುವುದು ಹೊಳೆಯುವ ತ್ವಚೆ
ಟ್ಯಾನಿಂಗ್ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಅನೇಕರು ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಾರೆ.ಸೌಂದರ್ಯ ಚಿಕಿತ್ಸೆಗಳ ಮೊರೆ ಹೋಗುತ್ತಾರೆ.ಆದರೆ ಇದಕ್ಕಾಗಿ ಬಹಳ ಹಣ ಖರ್ಚು ಮಾಡಬೇಕಾಗುತ್ತದೆ. ಅಲ್ಲದೆ, ಇದರಲ್ಲಿ ಅಡ್ಡಪರಿಣಾಮದ ಭಯ ಕೂಡಾ ಕಾಡುತ್ತದೆ.
ಆದರೆ ಕೆಲವು ಮನೆಮದ್ದುಗಳ ಸಹಾಯದಿಂದ ಸುಲಭವಾಗಿ ಟ್ಯಾನಿಂಗ್ ಅನ್ನು ತೆಗೆದುಹಾಕಬಹುದು.ಇಂದು ನಾವು ಅಡುಗೆಮನೆಯಲ್ಲಿ ಇರಿಸಲಾಗಿರುವ ಕೆಲವು ವಸ್ತುಗಳ ಬಗ್ಗೆ ಇಲ್ಲಿ ಹೇಳಲಿದ್ದೇವೆ.
ಟ್ಯಾನಿಂಗ್ ಅನ್ನು ತೆಗೆದುಹಾಕುವಲ್ಲಿ ಆಲೂಗಡ್ಡೆ ಬಹಳ ಪರಿಣಾಮಕಾರಿ. ಇದು ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಟ್ಯಾನಿಂಗ್ ಸಮಸ್ಯೆ ನಿವಾರಿಸಲು ಆಲೂಗೆಡ್ಡೆ ರಸವನ್ನು ಹತ್ತಿಯ ಸಹಾಯದಿಂದ ಮುಖಕ್ಕೆ ಹಚ್ಚಬೇಕು. ಸುಮಾರು 15 ನಿಮಿಷಗಳ ನಂತರ ನೀರಿನಿಂದ ಮುಖವನ್ನು ತೊಳೆಯಿರಿ.ಇದು ಚರ್ಮವನ್ನು ಸ್ವಚ್ಛವಾಗಿಸಿ ಹೊಳೆಯುವಂತೆ ಮಾಡುತ್ತದೆ.
ಕಡಲೆ ಹಿಟ್ಟು ಟ್ಯಾನಿಂಗ್ ಅನ್ನು ತೆಗೆದುಹಾಕುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.ಇದು ಡೆಡ್ ಸೆಲ್ ಗಳನ್ನು ತೆಗೆದುಹಾಕುವ ಮೂಲಕ ಟ್ಯಾನಿಂಗ್ ಅನ್ನು ನಿವಾರಿಸುತ್ತದೆ.ಹಾಲು,ಮೊಸರು ಮತ್ತು ರೋಸ್ ವಾಟರ್ ಜೊತೆ ಬೆರೆಸಿ ಕಡಲೆ ಹಿಟ್ಟನ್ನು ಮುಖಕ್ಕೆ ಹಚ್ಚಬಹುದು.
ಟೊಮೆಟೊದಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಕಲೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಇದಲ್ಲದೆ, ಇದು ಚರ್ಮದ ಟೋನ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಟೊಮೆಟೊ ತಿರುಳನ್ನು ಸ್ಕ್ರಬ್ ಆಗಿ ಬಳಸುವ ಮೂಲಕ ಟ್ಯಾನಿಂಗ್ ನಿವಾರಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.