ಹುಳುಕು ಹಲ್ಲು ಮತ್ತು ತಡೆಯಲಾರದ ನೋವಿಗೆ ಉಪ್ಪು ಅಲ್ಲ ಈ ವಸ್ತು ಬಳಸಿ! ಚಿಟಿಕೆಯಲ್ಲಿ ನೋವು ಕಡಿಮೆಯಾಗಿ ಪರಿಹಾರ ಸಿಗುವುದು... 60 ವರ್ಷವಾದ್ರೂ ಹಲ್ಲುನೋವಿನ ಸಮಸ್ಯೆಯೇ ಬರಲ್ಲ
ಹಲ್ಲುಗಳ ಬಗ್ಗೆ ಸರಿಯಾದ ಕಾಳಜಿ ತೆಗೆದುಕೊಳ್ಳದಿದ್ದರೆ, ಹುಳುಕು ಹಲ್ಲಿನ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಹಲ್ಲಿನ ಕೊಳೆತ ಅಥವಾ ಒಸಡುಗಳಲ್ಲಿ ಕೆಲವು ರೀತಿಯ ಊತದಿಂದಾಗಿ ಇದು ಸಂಭವಿಸುತ್ತದೆ. ಕೆಲವೊಮ್ಮೆ ಈ ನೋವು ಅಸಹನೀಯವಾಗುತ್ತದೆ. ಇದರಿಂದಾಗಿ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಹೆಲ್ತ್‌ಲೈನ್ ಪ್ರಕಾರ, ಕೆಲವೊಮ್ಮೆ ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಕೆಲವೊಮ್ಮೆ ಇದು ಕೆಲವು ರೀತಿಯ ವೈದ್ಯಕೀಯ ಸ್ಥಿತಿಯ ಕಾರಣದಿಂದಾಗಿರಬಹುದು. ಅಥವಾ ಸರಿಯಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸದಿರುವುದು, ಆಮ್ಲೀಯತೆ, ರಾತ್ರಿಯಲ್ಲಿ ತಿನ್ನುವುದು ಇತ್ಯಾದಿ ಕೂಡ ಹುಳುಕು ಹಲ್ಲು ಸಮಸ್ಯೆಗೆ ಕಾರಣವಾಗಬಹುದು.
ಹೀಗಿರುವಾಗ ಈ ನೋವಿನಿಂದ ಪರಿಹಾರ ಪಡೆಯಲು ಕೆಲ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಅವುಗಳ ಸಹಾಯದಿಂದ ಚಿಟಿಕೆಯಲ್ಲಿ ಶಾಶ್ವತ ಪರಿಹಾರ ಪಡೆಯುವುದಲ್ಲದೆ, ಹಲ್ಲಿನ ಆರೋಗ್ಯ ಕಾಪಾಡಿಕೊಳ್ಳಬಹುದು
ಹಲ್ಲುನೋವು ಇದ್ದರೆ ಸ್ವಲ್ಪ ನೀರನ್ನು ಉಗುರುಬೆಚ್ಚಗಾಗಿಸಿ ಅದಕ್ಕೆ ಉಪ್ಪು ಸೇರಿಸಿ. ಈ ನೀರಿನಿಂದ ಚೆನ್ನಾಗಿ ಬಾಯಿ ಸ್ವಚ್ಛ ಮಾಡಿ. ಈ ರೀತಿ ಮಾಡುವುದರಿಂದ ವಸಡುಗಳಲ್ಲಿ ಯಾವುದೇ ರೀತಿಯ ಊತವಿದ್ದಲ್ಲಿ ಅದು ಪರಿಹಾರ ನೀಡುತ್ತದೆ.
ನೀವು ದಿನಕ್ಕೆ 3 ರಿಂದ 4 ಬಾರಿ ಹೈಡ್ರೋಜನ್ ಪೆರಾಕ್ಸೈಡ್ನೊಂದಿಗೆ ಬಾಯಿ ಸ್ವಚ್ಛ ಮಾಡಿದರೆ, ಒಸಡುಗಳಲ್ಲಿನ ಊತದಿಂದ ಪರಿಹಾರವನ್ನು ನೀಡುತ್ತದೆ.
ಪ್ರತಿದಿನ ಬೆಳಗ್ಗೆ ಹಲ್ಲುಜ್ಜಿದ ನಂತರ ಹರಳೆಣ್ಣೆ ನೀರಿನಿಂದ ಬಾಯಿ ತೊಳೆದರೆ ಹಲ್ಲು ಹುಳುಕು ನೋವಿನಿಂದ ಮುಕ್ತಿ ಪಡೆಯಬಹುದು.
ಪುದೀನಾ ಟೀ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಹಾಕಿ, ಆ ನೀರಿನಿಂದ ಹಲ್ಲುಗಳನ್ನು ಸ್ವಚ್ಛ ಮಾಡಿ. ಹೀಗೆ ಮಾಡಿದರೆ ಚಿಟಿಕೆಯಲ್ಲಿ ಪರಿಹಾರ ಪಡೆಯಬಹುದು
ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳಿವೆ. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುವುದು ಮಾತ್ರವಲ್ಲದೆ ನೋವಿನಿಂದ ಪರಿಹಾರವನ್ನು ನೀಡುತ್ತದೆ. ಅದರ ಪೇಸ್ಟ್ ಅನ್ನು ನೋವು ಇರುವ ಜಾಗಕ್ಕೆ ಹಚ್ಚಿ.