ಮೊಸರಿಗೆ ಈ ಎಣ್ಣೆ ಬೆರೆಸಿ ಹಚ್ಚಿದರೆ 20 ನಿಮಿಷದಲ್ಲಿ ಕಡುಕಪ್ಪಾಗುತ್ತೆ ಬಿಳಿಕೂದಲು! ಮತ್ತೆ ಯಾವತ್ತೂ ವೈಟ್ ಹೇರ್ ಸಮಸ್ಯೆ ಬರಲ್ಲ
ಇಂದಿನ ಕಾಲದಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅಂತಹ ಸಮಸ್ಯೆಗಳಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಕೂಡ ಒಂದು. ಇನ್ನು ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಪರಿಹಾರವಾಗಿ ಸಿಗುತ್ತವೆ.
ಅಂತಹ ಪರಿಹಾರಗಳು ತಾತ್ಕಾಲಿಕವಷ್ಟೇ. ಆದರೆ ಪರ್ಮನೆಂಟ್ ಆಗಿ ಕೂದಲನ್ನು ಕಪ್ಪಾಗಿಸಲು ಮನೆಮದ್ದುಗಳನ್ನು ಹುಡುಕುತ್ತಿದ್ದರೆ, ತೆಂಗಿನೆಣ್ಣೆ ಮತ್ತು ಮೊಸರಿನ ಹೇರ್ ಪ್ಯಾಕ್ ಬಳಸಬಹುದು.
ಇವೆರಡೂ ಸಹ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹಾಗಾದರೆ ತೆಂಗಿನೆಣ್ಣೆ ಮತ್ತು ಮೊಸರನ್ನು ಹೇಗೆ ಬಳಸಬೇಕೆಂದು ತಿಳಿಯೋಣ.
ಅರ್ಧ ಕಪ್ ಮೊಸರಿನಲ್ಲಿ 2 ಚಮಚ ತೆಂಗಿನೆಣ್ಣೆ ಮತ್ತು 1 ಚಮಚ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ. ಇದನ್ನು ನೆತ್ತಿಯ ಮೇಲೆ ಮತ್ತು ಕೂದಲಿನ ಉದ್ದಕ್ಕೆ ಹಚ್ಚಿ. ಈಗ ಅದನ್ನು 20 ನಿಮಿಷಗಳ ಕಾಲ ಬಿಟ್ಟು ನಂತರ ಶಾಂಪೂ ಬಳಸಿ ತೊಳೆಯಿರಿ.
ವಾರಕ್ಕೆ ಒಂದು ಅಥವಾ ಎರಡು ಬಾರಿ ಈ ಟಿಪ್ಸ್ ಫಾಲೋ ಮಾಡಬಹುದು. ಇದು ಕೂದಲಿಗೆ ತೇವಾಂಶವನ್ನು ನೀಡುವುದಲ್ಲದೆ, ಕೂದಲನ್ನು ಕಪ್ಪಾಗಿಸಲು ಸಹಕಾರಿಯಾಗಿದೆ.
ಮೊಸರಿನಲ್ಲಿ ಕಂಡುಬರುವ ಬ್ಯಾಕ್ಟೀರಿಯಾ ಮತ್ತು ಪೋಷಕಾಂಶಗಳು ನಿಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿ. ಅಂತೆಯೇ ತೆಂಗಿನ ಎಣ್ಣೆಯನ್ನು ಆಯುರ್ವೇದದಲ್ಲಿ ಔಷಧಿ ಎಂದು ಪರಿಗಣಿಸಲಾಗಿದೆ.
ಸೂಚನೆ: ಈ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ. ಯಾವುದೇ ವೈದ್ಯರು ಅಥವಾ ವೈದ್ಯಕೀಯ ವೃತ್ತಿಪರರ ಸಲಹೆಯಂತೆ ಇವುಗಳನ್ನು ತೆಗೆದುಕೊಳ್ಳಬೇಡಿ. ಅನಾರೋಗ್ಯ ಅಥವಾ ಸೋಂಕಿನ ಲಕ್ಷಣಗಳ ಸಂದರ್ಭದಲ್ಲಿ, ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.