Best Fruits For Uric Acid: ನಿಮಗೂ ಯೂರಿಕ್ ಆಸಿಡ್ ಸಮಸ್ಯೆ ಇದೆಯೇ? ಈ ಹಣ್ಣುಗಳನ್ನು ತಪ್ಪದೇ ಸೇವಿಸಿ
ಕಿತ್ತಳೆ ಹಣ್ಣು: ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ಕಿತ್ತಳೆ ಹಣ್ಣು ತುಂಬಾ ಪ್ರಯೋಜನಕಾರಿ ಆಗಿದೆ. ಕಿತ್ತಳೆ ಹಣ್ಣಿನ ಸೇವನೆಯಿಂದ ದೇಹದಿಂದ ವಿಷಕಾರಿ ಅಂಶಗಳು ಹೊರಬರುತ್ತವೆ. ಇದಲ್ಲದೆ, ಕಿತ್ತಳೆಯಲ್ಲಿ ಪೊಟ್ಯಾಸಿಯಮ್, ಫೋಲೇಟ್, ವಿಟಮಿನ್ ಸಿ ಮತ್ತು ವಿಟಮಿನ್ ಇ ಸಮೃದ್ಧವಾಗಿದ್ದು, ಇದು ಯೂರಿಕ್ ಆಸಿಡ್ ಕಡಿಮೆ ಮಾಡುವಲ್ಲಿ ಸಹಕಾರಿ ಆಗಿದೆ.
ಕಿವಿ: ನೀವೂ ಕೂಡ ಯೂರಿಕ್ ಆಸಿಡ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ ನಿಮ್ಮ ಡಯಟ್ನಲ್ಲಿ ಕಿವಿ ಹಣ್ಣನ್ನು ತಪ್ಪದೇ ಸೇರಿಸಿ. ಕಿವಿ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದರ ಜೊತೆಗೆ ಪ್ಲೇಟ್‌ಲೆಟ್‌ಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಇದರಲ್ಲಿ ಪೊಟ್ಯಾಸಿಯಮ್, ಫೋಲೇಟ್, ವಿಟಮಿನ್ ಸಿ ಮತ್ತು ವಿಟಮಿನ್ ಇ ಹೆಚ್ಚಾಗಿದ್ದು, ಯೂರಿಕ್ ಆಸಿಡ್ ನಿಯಂತ್ರಿಸಲು ಸಹಾಯಕವಾಗಿವೆ.
ಚೆರ್ರಿ: ಚೆರ್ರಿ ಫೈಬರ್ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ನೈಸರ್ಗಿಕ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಚೆರ್ರಿ ಹಣ್ಣಿನ ಸೇವನೆಯಿಂದ ಯೂರಿಕ್ ಆಸಿಡ್ ನಿಯಂತ್ರಿಸಬಹುದು.
ಬಾಳೆ ಹಣ್ಣು: ಬಹಳ ಸುಲಭವಾಗಿ ಲಭ್ಯವಿರುವ ಬಾಳೆಹಣ್ಣಿನಲ್ಲಿ ರಿನ್ ಪ್ರಮಾಣವು ತುಂಬಾ ಕಡಿಮೆಯಾಗಿದೆ. ಇದು ಗೌಟ್ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
ಸೇಬು: ಪ್ರತಿದಿನ ಒಂದು ಸೇಬು ಸೇವಿಸುವುದರಿಂದ ವೈದ್ಯರಿಂದ ದೂರ ಉಳಿಯಬಹುದು ಎಂಬ ಮಾತಿದೆ. ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೂ ಕೂಡ ಸೇಬು ತುಂಬಾ ಪ್ರಯೋಜನಕಾರಿ ಆಗಿದೆ. ಸೇಬಿನಲ್ಲಿ ನಾರಿನಾಂಶ ಅಧಿಕವಾಗಿದ್ದು ಇದು ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಿ, ಯೂರಿಕ್ ಆಸಿಡ್ ಸಮಸ್ಯೆ ಇರುವವರಿಗೆ ನಿತ್ಯ ಸೇಬನ್ನು ಸೇವಿಸಲು ಸಲಹೆ ನೀಡಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.