ಹಲ್ಲಿನ ಹುಳುಕು ಹೋಗಲಾಡಿಸಿ ನೋವಿನಿಂದ ಪರಿಹಾರ ನೀಡುತ್ತದೆ ಈ ವಸ್ತು! ಬಾಯಿ ದುರ್ವಾಸನೆಯಿಂದಲೂ ಸಿಗುವುದು ಮುಕ್ತಿ
ಹಲ್ಲು ಹುಳುಕಾದಾಗ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಹಲ್ಲು ನೋವು ಸಾಮಾನ್ಯವಾಗಿ ರಾತ್ರಿ ಹೊತ್ತು ಬಾಧಿಸುವುದೇ ಹೆಚ್ಚು. ಇದನ್ನು ಪರಿಹರಿಸಲು ಕೆಲವೊಂದು ಮನೆ ಮದ್ದು ಬಳಸಿದರೆ ಸಾಕಾಗುತ್ತದೆ.
ಹಲ್ಲಿನ ಹುಳುಕು, ಹಳದಿ ಕಲೆ ಮತ್ತು ನೋವನ್ನು ಹೋಗಲಾಡಿಸಲು ಅಡುಗೆ ಸೋಡಾವನ್ನು ಬಳಸಬಹುದು. ಅಡುಗೆ ಸೋಡಾದ ಪೇಸ್ಟ್ ಮಾಡಿ ಹಲ್ಲಿಗೆ ಹಚ್ಚುವುದರಿಂದ ಹಲ್ಲಿನ ಹುಳುಕಿನಿಂದ ಮುಕ್ತಿ ಸಿಗುವುದು.
ಪರಿಣಾಮಕಾರಿಯಾಗಿದೆ. ಬೆರಳನ್ನು ತೆಂಗಿನೆಣ್ಣೆಯಲ್ಲಿ ಅದ್ದಿ ನೋವಿರುವ ಹಲ್ಲಿನ ಮೇಲೆ ಮಸಾಜ್ ಮಾಡುವುದರಿಂದ ನೋವು ಕ್ಷಣ ಮಾತ್ರದಲ್ಲಿ ಕಡಿಮೆಯಾಗುತ್ತದೆ.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಆ ಪುಡಿಯನ್ನು ಬಳಸಿ ಹಲ್ಲಿನ ಮೇಲೆ ಮಸಾಜ್ ಮಾಡಿದರೆ ಹಲ್ಲಿನ ಹುಳುಕು ಮಾಯವಾಗುತ್ತದೆ.ನೋವು ಕೂಡಾ ಕಡಿಮೆಯಾಗುತ್ತದೆ.
ಹಲ್ಲುಗಳ ಆರೋಗ್ಯ ಕಾಪಾಡಬೇಕಾದರೆ ದೇಹದಲ್ಲಿ ವಿಟಮಿನ್ ಡಿ ಕೊರತೆಯಾಗದಂತೆ ನೋಡಿಕೊಳ್ಳಿ. ಇದಕ್ಕಾಗಿ ವಿಟಮಿನ್ ಡಿ ಯುಕ್ತ ಆಹಾರ ಸೇವಿಸಿ.
ಇನ್ನು ಹಲ್ಲಿನ ಹಳದಿ ಕಲೆ, ಬಾಯಿಯ ದುರ್ವಾಸನೆ ಹೋಗಲಾಡಿಸಲು ಬಾಳೆ ಹಣ್ಣಿನ ಸಿಪ್ಪೆಯ ಬಿಳಿ ಭಾಗವನ್ನು ಹಲ್ಲಿನ ಮೇಲಿರಿಸಿ ಚೆನ್ನಾಗಿ ತಿಕ್ಕಿ. ಇದು ಹಲ್ಲು ಹುಳುಕಾಗದಂತೆಯೂ ಕಾಪಾಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.