ಡಿಯೋಡ್ರೆಂಟ್ ಬೇಕಿಲ್ಲ.. ಕಂಕುಳು ದುರ್ನಾತ ತೊಲಗಿಸಲು ಈ ಸಿಂಪಲ್ ಮನೆಮದ್ದು ಬಳಸಿ ಸಾಕು !
ಕಂಕುಳಲ್ಲಿ ಕೆಟ್ಟ ವಾಸನೆ ಮುಜುಗರ ಉಂಟು ಮಾಡುತ್ತದೆ. ಕಂಕುಳಿನ ವಾಸನೆಯನ್ನು ತೊಡೆದುಹಾಕಲು ಜನರು ಡಿಯೋಡ್ರಂಟ್ ಮೊರೆ ಹೋಗುತ್ತಾರೆ. ಕಂಕುಳಲ್ಲಿ ಬರುವ ದುರ್ವಾಸನೆ ಹೋಗಲಾಡಿಸಲು ಸಹಾಯಕವಾಗುವ ಮನೆಮದ್ದುಗಳನ್ನು ತಿಳಿಯೋಣ...
ಅಂಡರ್ ಆರ್ಮ್ ವಾಸನೆಯನ್ನು ಹೋಗಲಾಡಿಸುವಲ್ಲಿ ಆಲೂಗಡ್ಡೆ ಪರಿಣಾಮಕಾರಿಯಾಗಿದೆ ಆಲೂಗಡ್ಡೆಯ ಸಿಪ್ಪೆ ತೆಗೆದು ತುರಿಯಿರಿ. ಇದ್ನು ಹಿಂಡಿ ರಸ ತೆಗೆಯಿರಿ. ಹತ್ತಿಯನ್ನು ಅದ್ದಿ ಕಂಕುಳಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟ ನಂತರ ತೊಳೆಯಿರಿ. ಇದರಿಂದ ದುರ್ವಾಸನೆ ತೊಲಗಿಸಬಹುದು.
ಅಲೋವೆರಾ ಜೆಲ್ ಅನ್ನು ತೆಗೆದುಕೊಂಡು ಅದನ್ನು ಕಂಕುಳಿಗೆ ಹಚ್ಚಿ 20 ರಿಂದ 25 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ದಿನಕ್ಕೆರಡು ಬಾರಿ ಬಳಸುವುದರಿಂದ ಕೆಟ್ಟ ವಾಸನೆ ದೂರವಾಗುತ್ತದೆ.
ಕಂಕುಳನ್ನು ಸ್ವಚ್ಛಗೊಳಿಸಲು ಮತ್ತು ದುರ್ವಾಸನೆ ಹೋಗಲಾಡಿಸಲು ತೆಂಗಿನ ಎಣ್ಣೆಯನ್ನು ಕಂಕುಳಿಗೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಟ್ಟು ತೊಳೆಯಬಹುದು. ಅಂಡರ್ ಆರ್ಮ್ ನಲ್ಲಿರುವ ಬ್ಯಾಕ್ಟೀರಿಯಾವನ್ನು ತೊಡೆದುಹಾಕಲು ಪರಿಣಾಮಕಾರಿ.
ಅಡುಗೆ ಸೋಡಾ ಅಂಡರ್ ಆರ್ಮ್ ಗೆ ಹಚ್ಚುವುದರಿಂದಲೂ ದುರ್ವಾಸನೆ ತೊಲಗಿಸಬಹುದು. 2 ಚಮಚ ಅಡಿಗೆ ಸೋಡಾ ಒಂದು ಚಮಚ ನಿಂಬೆ ರಸ ಬೆರೆಸಿ ಅದನ್ನು ಅಂಡರ್ ಆರ್ಮ್ಸ್ ಮೇಲೆ ನಿಧಾನ ಹಚ್ಚಿ 10 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ.
ಟೊಮೆಟೊ ರಸವನ್ನು ತೆಗೆದುಕೊಂಡು ಅದರಲ್ಲಿ 2 ರಿಂದ 3 ಹನಿ ನಿಂಬೆ ರಸ ಬೆರೆಸಿ ಹತ್ತಿಯ ಸಹಾಯದಿಂದ ಕಂಕುಳಲ್ಲಿ ಹಚ್ಚಿ 10 ನಿಮಿಷಗಳ ನಂತರ ತೊಳೆಯಿರಿ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.