ಊಟ ಮಾಡಿ ಮಲಗುವ ಮುನ್ನ ಇವುಗಳನ್ನು ತಿನ್ನಿ: ಗೊರಕೆ ತಾಪತ್ರಯವೇ ಇರಲ್ಲ!
ರಾತ್ರಿ ಮಲಗುವಾಗ ಅನೇಕರಿಗೆ ಗೊರಕೆ ಹೊಡೆಯುವ ಅಭ್ಯಾಸವಿರುತ್ತದೆ. ಆ ಅಭ್ಯಾಸ ಅವರಿಗಷ್ಟೇ ಅಲ್ಲ ಇತರರಿಗೂ ತಲೆನೋವಾಗಿ ಪರಿಣಮಿಸುತ್ತದೆ. ಹೀಗಾಗಿ ಈ ಸಮಸ್ಯೆಯಿಂದ ಮುಕ್ತಿ ಕಾಣಲು ಅನೇಕ ಮನೆಮದ್ದುಗಳನ್ನು ಪ್ರಯತ್ನಿಸಬಹುದು.
ಗೊರಕೆ ಹೊಡೆಯುವ ಅಭ್ಯಾಸವಿರುವವರು ನಿಯಮಿತವಾಗಿ ಜೇನುತುಪ್ಪವನ್ನು ಸೇವಿಸಬೇಕು. ಹೀಗೆ ಮಾಡಿದರೆ ಮೂಗಿನಲ್ಲಿರುವ ಶ್ವಾಸನಾಳಗಳು ಸರಾಗವಾಗಿ ತೆರೆದುಕೊಳ್ಳುತ್ತದೆ. ಜೊತೆಗೆ ಗೊರಕೆಯೂ ಕಡಿಮೆಯಾಗುತ್ತದೆ
ಮಲಗುವ ಮುನ್ನ ಪುದೀನಾ ಚಹಾವನ್ನು ಕುಡಿಯುವುದರಿಂದ ಗೊರಕೆಯನ್ನು ನಿವಾರಿಸಬಹುದು. ಇದು ಮೂಗಿನ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಗೊರಕೆಯನ್ನು ನಿಲ್ಲಿಸಲು ಸಹ ಸಹಾಯ ಮಾಡುತ್ತದೆ
ಪ್ರತಿದಿನ ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಹೊಟ್ಟೆ ನೋವು ಮತ್ತು ವಾಕರಿಕೆ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ, ಅನೇಕ ಜನರು ಮಲಗುವ ಮುನ್ನ ಹಸಿ ಬೆಳ್ಳುಳ್ಳಿಯನ್ನು ತಿನ್ನುತ್ತಾರೆ. ಇದರಿಂದ ಗೊರಕೆಯ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಮೀನುಗಳಿಂದ ತಯಾರಿಸಿದ ಖಾದ್ಯ ತಿಂದರೆ ಗೊರಕೆ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಅಂದರೆ ಮೀನಿನಲ್ಲಿರುವ ಕೊಬ್ಬಿನಾಮ್ಲಗಳು ಈ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೂಗು ಮತ್ತು ಗಂಟಲಿನ ವಾಯುಮಾರ್ಗಗಳನ್ನು ತೆರವುಗೊಳಿಸಲು ಈರುಳ್ಳಿ ತಿನ್ನುವುದು ಉತ್ತಮ. ನಿಯಮಿತವಾಗಿ ತಿನ್ನುತ್ತಾ ಬಂದರೆ, ಗೊರಕೆ ಸಮಸ್ಯೆ ಶಾಶ್ವತವಾಗಿ ಕಡಿಮೆಯಾಗುತ್ತದೆ.
ಪ್ರತಿದಿನ ಬೆಳಿಗ್ಗೆ ಅಥವಾ ಸಂಜೆ ಒಂದು ಚಮಚ ಅರಿಶಿನವನ್ನು ಹಾಲು ಅಥವಾ ಚಹಾದಲ್ಲಿ ಸೇರಿಸಿ ಕುಡಿಯುವುದರಿಂದ ಗೊರಕೆ ಸಮಸ್ಯೆ ಕಡಿಮೆಯಾಗುತ್ತದೆ.
ಸೋಯಾ ಹಾಲನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಗಿನ ದಟ್ಟಣೆಯ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಮನೆಯಲ್ಲಿ ತಯಾರಿಸಿದ ಸೋಯಾ ಮಿಲ್ಕ್ ಕುಡಿಯುವುದರಿಂದ ಗೊರಕೆ ಸಮಸ್ಯೆ ಕಡಿಮೆಯಾಗುತ್ತದೆ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)