Monsoon Foot Care Tips: ಮಳೆಗಾಲದಲ್ಲಿ ನಿಮ್ಮ ಎಲ್ಲಾ ಸಮಸ್ಯೆ ನಿವಾರಿಸುವ ಮನೆಮದ್ದುಗಳು..
ಮಳೆಗಾಲ ಮುಗಿದ ಬಳಿಕ ನಿಮ್ಮ ಕಾಲುಗಳು ತುರಿಕೆ ಅಥವಾ ಬಿರುಕು ಸಮಸ್ಯೆಗೆ ತುತ್ತಾಗಬಹುದು. ಆಗ ಈರುಳ್ಳಿ ರಸದಿಂದ ನಿಮ್ಮ ಪಾದಗಳಿಗೆ ಮಸಾಜ್ ಮಾಡಿದರೆ ಈ ಸಮಸ್ಯೆಗೆ ಮುಕ್ತಿ ಹಾಡಬಹುದು. ಪಾದಗಳ ಆರೋಗ್ಯಕ್ಕೆ ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ. ಇಲ್ಲಿದ್ದಲ್ಲಿ ಸೋಂಕಿನಿಂದ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ.
ಶಿಲೀಂದ್ರ ಸೋಂಕು ಅಥವಾ ಬ್ಯಾಕ್ಟೀರಿಯಾ ಸಮಸ್ಯೆಯಿಂದ ನಿಮ್ಮ ಪಾದಗಳಿಗೆ ರಕ್ಷಣೆ ನೀಡಲು ಟೀ ಟ್ರೀ ಎಣ್ಣೆಯನ್ನು ಬಳಸಬೇಕು. ಇದರ ಬಳಕೆಯಿಂದ ನೀವು ಕೇವಲ ಸೋಂಕಿನಿಂದ ಮಾತ್ರವಲ್ಲ ಚರ್ಮದ ಕಾಂತಿಯನ್ನು ಪಡೆಯಬಹುದಾಗಿದೆ.
ನೀವು ಪಾದಗಳ ಬೆವರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದರೆ, ಅವುಗಳನ್ನು ಬಿಸಿನೀರು ಮತ್ತು ನಿಂಬೆ ಹನಿಗಳ ಮಿಶ್ರಣದಲ್ಲಿ ನೆನೆಸಿ. ಬೆವರುವಿಕೆ ನಿಯಂತ್ರಿಸಲು ವಾರಕ್ಕೆ 2 ಬಾರಿ ಈ ರೀತಿ ಮಾಡಬೇಕು. ನೀವು ಹೊರಗಡೆ ಹೋಗುವಾಗ ಫ್ಲಿಪ್-ಫ್ಲಾಪ್ಸ್ ಅಥವಾ ಸ್ಯಾಂಡಲ್ ನಂತಹ ಪಾದರಕ್ಷೆಗಳನ್ನು ಧರಿಸಿ.
ಈ ವಿಧಾನವು ನಮ್ಮ ಪೂರ್ವಜರು ಹಿಂದಿನ ಕಾಲದಿಂದಲೂ ಮಾಡಿಕೊಂಡು ಬಂದಿರುವ ಅಭ್ಯಾಸವಾಗಿದೆ. ಉಪ್ಪು ಅಥವಾ ಸೌಮ್ಯವಾದ ಶಾಂಪೂವನ್ನು ಬಿಸಿನೀರಿನಲ್ಲಿ ಬೆರೆಸಿ ಅದರಲ್ಲಿ ನಿಮ್ಮ ಪಾದಗಳನ್ನು 15 ನಿಮಿಷಗಳ ಕಾಲ ನೆನೆಸಬೇಕು.ಉಪ್ಪು ಬ್ಯಾಕ್ಟೀರಿಯಾವನ್ನು ಕೊಂದು ದುರ್ವಾಸನೆಯನ್ನು ಹೋಗಲಾಡಿಸಲು ನೆರವಾಗುತ್ತದೆ. ಕೊನೆಯಲ್ಲಿ ನೆನೆದಿರುವ ಕಾಲುಗಳನ್ನು ಸ್ವಚ್ಛವಾಗಿ ಒರೆಸಿಕೊಳ್ಳಬೇಕು.
ಪಾದಗಳ ದುರ್ವಾಸನೆ ಬೀರಲಾರಂಭಿಸಿದರೆ ನಮ್ಮ ಪಕ್ಕ ಕುಳಿತಿರುವವರು ಎದ್ದು ಓಡಿಹೋಗುತ್ತಾರೆ. ಪಾದಗಳಲ್ಲಿ ಕೆಟ್ಟ ವಾಸನೆ ಬರುವ ಸಮಸ್ಯೆಯನ್ನು ಪ್ರತಿಯೊಬ್ಬರು ಎದುರಿಸುತ್ತಾರೆ. ಪಾದಗಳ ದುರ್ವಾಸನೆ ತಡೆಗಟ್ಟಲು ಕರ್ಪೂರವನ್ನು ಪುಡಿ ಮಾಡಿ ಅದನ್ನು ಟಾಲ್ಕಮ್ ಪೌಡರ್ ಗೆ ಸೇರಿಸಿ. ಸಾಕ್ಸ್ ಧರಿಸುವ ಮುನ್ನ ಈ ಮಿಶ್ರಣವನ್ನು ನಿಮ್ಮ ಕಾಲುಗಳಿಗೆ ಹಾಕಿಕೊಳ್ಳಬೇಕು.