ಬೆವರಿನ ದುರ್ವಾಸನೆಯಿಂದ ಮುಕ್ತಿಗಾಗಿ ಸರಳ ಮನೆಮದ್ದುಗಳು
ಬೇಸಿಗೆ ಕಾಲದಲ್ಲಿ ಬೆವರಿನ ದುರ್ವಾಸನೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಆದರೆ ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳ ಸಹಾಯದಿಂದ ಈ ಸಮಸ್ಯೆಗೆ ಸರಳ ಪರಿಹಾರವನ್ನು ಪಡೆಯಬಹುದು. ಅವುಗಳೆಂದರೆ...
ಹತ್ತಿಯಲ್ಲಿ ರೋಸ್ ವಾಟರ್ ಹಾಕಿ ಇದರಿಂದ ಅಂಡರ್ ಆರ್ಮ್ ಅನ್ನು ಒರೆಸಿ. ವಾರದಲ್ಲಿ ಒಂದೆರಡು ಬಾರಿ ಈ ರೀತಿ ಮಾಡುವುದರಿಂದ ಬೆವರಿನ ವಾಸನೆಯಿಂದ ಪರಿಹಾರ ಪಡೆಯಬಹುದು.
ಆಪಲ್ ಸೈಡರ್ ವಿನೆಗರ್ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರ ಬಳಕೆಯಿಂದ ಅಂಡರ್ ಆರ್ಮ್ಸ್ ಮತ್ತು ಕೂದಲಿನ ನೆತ್ತಿಯಿಂದ ಬರುವ ವಾಸನೆಯನ್ನು ತೊಡೆದುಹಾಕಬಹುದು.
ಬೇಸಿಗೆ ಕಾಲದಲ್ಲಿ ಸಡಿಲವಾದ ಕಾಟನ್ ಬಟ್ಟೆಯನ್ನು ಧರಿಸಿ. ಇದು ಚರ್ಮವನ್ನು ಉಸಿರಾಡಲು ಅನುವು ಮಾಡಿಕೊಡುವುದರಿಂದ ಹೆಚ್ಚು ಬೆವರುವುದನ್ನು ತಡೆಯಬಹುದು. ಜೊತೆಗೆ ಬೆವರಿನ ವಾಸನೆಯಿಂದಲೂ ಪರಿಹಾರವನ್ನು ನೀಡುತ್ತದೆ.
ಗ್ರೀನ್ ಟೀ ಬ್ಯಾಗ್ ಅನ್ನು ಬೆಚ್ಚಗಿನ ನೀರಿನಲ್ಲಿ ಹಾಕಿ ನಂತರ ಕೆಲ ನಿಮಿಷಗಳವರೆಗೆ ಇದನ್ನು ಕಂಕುಳಲ್ಲಿ ಇರಿಸಿ. ಇದು ಬೆವರುವಿಕೆಯನ್ನು ಕಡಿಮೆ ಮಾಡುತ್ತದೆ.
ನಿಂಬೆ ರಸ ಮತ್ತು ನೀರನ್ನು ಮಿಕ್ಸ್ ಮಾಡಿ ಈ ಮಿಶ್ತ್ರನವನ್ನು ನಿಮ್ಮ ತೋಳುಗಳ ಕೆಳಗೆ ಸಿಂಪಡಿಸಿ. ಈ ರೀತಿ ಮಾಡುವುದರಿಂದ ಬೆವರಿನ ವಾಸನೆಯಿಂದ ಪರಿಹಾರ ಪಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.