ಸ್ನಾನಕ್ಕೂ 10 ನಿಮಿಷ ಮೊದಲು ಇದನ್ನು ಹಚ್ಚಿದರೆ ಸಾಕು ಬಿಳಿ ಕೂದಲು ನ್ಯಾಚುರಲ್ ಆಗಿ ಕಪ್ಪಾಗಿ ದಷ್ಟಪುಷ್ಟವಾಗಿ ಉದ್ದವಾಗಿಯೂ ಬೆಳೆಯುತ್ತೆ!
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ನಾನಾ ವಿಧದ ಹೇರ್ ಡೈಗಳು ಲಭ್ಯವಿವೆ. ಆದರೆ, ಇಂತಹ ಹೇರ್ ಡೈಗಳ ಬಳಕೆಯಿಂದ ಅದರಲ್ಲಿರುವ ರಾಸಾಯನಿಕದಿಂದ ಹೇರ್ ಸ್ಕ್ಯಾಲ್ಪ್, ಕೂದಲು ಡ್ಯಾಮೇಜ್ ಆಗುತ್ತದೆ.
ಬಿಳಿ ಕೂದಲನ್ನು ಕಪ್ಪಾಗಿಸಲು ಮಾರುಕಟ್ಟೆಯಲ್ಲಿ ರೆಡಿಮೆಡ್ ಆಗಿ ಸಿಗುವ ಹೇರ್ ಡೈ ಬಳಸುವುದಕ್ಕಿಂತ ಮನೆಯಲ್ಲಿಯೇ ಇರುವ ಪದಾರ್ಥಗಳನ್ನ್ ಬಳಸಿ ನ್ಯಾಚುರಲ್ ಆಗಿ ಕೂದಲನ್ನು ಗಾಢ ಕಪ್ಪಾಗಿಸಬಹುದು.
ಈ ಹೋಂ ಮೆಡ್ ಹೇರ್ ಡೈ ಬಿಳಿ ಕೂದಲನ್ನು ಕಪ್ಪಾಗಿಸುವುದರ ಜೊತೆಗೆ ಕೂದಲು ಉದುರುವಿಕೆಯೂ ಸಹ ನಿಲ್ಲುತ್ತದೆ. ತಲೆಹೊಟ್ಟಿನ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.
* ಒಂದು ಸ್ಪೂನ್ ಮೆಂತ್ಯ: ಕೂದಲು ಉದುರುವಿಕೆ ನಿವಾರಿಸಿ ಕೂದಲು ಕಪ್ಪಾಗಲು ಸಹಾಯಕ. * ಒಂದು ಸ್ಪೂನ್ ಟೀ ಪುಡಿ: ಕಾಂತಿಯುತ ಸುಂದರ ಕೂದಲನ್ನು ಹೊಂದಲು ಮತ್ತು ಬಿಳಿ ಕೂದಲನ್ನು ಕಪ್ಪಾಗಿಸಲು ಪ್ರಯೋಜನಕಾರಿ ಆಗಿದೆ. * ಹೆನ್ನಾ ಪೌಡರ್: ಇದು ಕೂದಲನ್ನು ಬ್ರೌನ್ ಬಣ್ಣಕ್ಕೆ ತಿರುಗಿಸುತ್ತದೆ. * ಇಂಡಿಗೊ ಪೌಡರ್: ಕೂದಲು ಗಾಢ ಕಪ್ಪಾಗಬೇಕು ಎಂದು ಬಯಸುವವರು ಇಂಡಿಗೊ ಪುಡಿಯನ್ನು ಬಳಸಬೇಕು.
ಒಂದು ಪಾತ್ರೆಗೆ ಒಂದು ಗ್ಲಾಸ್ ನೀರು, ಒಂದು ಸ್ಪೂನ್ ಮೆಂತ್ಯವನ್ನು ಹಾಕಿ ಇದನ್ನು ಕಾಯಲು ಬಿಡಿ. ಬಳಿಕ ಇದರಲ್ಲಿ ಒಂದು ಸ್ಪೂನ್ ಟೀ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ ಡಿಕಾಕ್ಷನ್ ತಯಾರಿಸಿ. ಅದು ತಣ್ಣಗಾದ ಬಳಿಕ ಅದನ್ನು ಶೋಧಿಸಿಡಿ.
ನೀವು ನಿಮ್ಮ ಕೂದಲನ್ನು ಬ್ರೌನ್ ಆಗಲು ಬಯಸಿದರೆ ಇದಕ್ಕಾಗಿ ಹೆನ್ನಾ ಪುಡಿಯಲ್ಲಿ ತಯಾರಿಸಿಟ್ಟ ಡಿಕಾಕ್ಷನ್ ಬೆರೆಸಿ ಪೇಸ್ಟ್ ತಯಾರಿಸಿ. ರಾತ್ರಿ ಈ ಹೇರ್ ಪ್ಯಾಕ್ ತಯಾರಿಸಿ ಬೆಳಿಗ್ಗೆ ಇದನ್ನು ಕೂದಲಿನ ಬುಡದಿಂದ ತುದಿಯವರೆಗೂ ಹಚ್ಚಿ. 1 ಗಂಟೆ ಬಳಿಕ ಹೇರ್ ವಾಶ್ ಮಾಡಿ.
ಇಂಡಿಗೊ ಪುಡಿಯನ್ನು ಬಳಸುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ. ಇದಕ್ಕಾಗಿ ಇಂಡಿಗೊ ಪುಡಿಯಲ್ಲಿ ತಯಾರಿಸಿಟ್ಟ ಡಿಕಾಕ್ಷನ್ ಬೆರೆಸಿ ಕೂಡಲೇ ಅದನ್ನು ಕೂದಲಿಗೆ ಹಚ್ಚಿ. ಅರ್ಧಗಂಟೆ ಬಳಿಕ ಬರೀ ನೀರಿನಿಂದ ಹೇರ್ ವಾಶ್ ಮಾಡಿ.
ಈ ರೀತಿ ನೈಸರ್ಗಿಕವಾಗಿ ಬಿಳಿ ಕೂದಲಿನಿಂದ ಪರಿಹಾರ ಪಡೆಯಬಹುದು. ಇದರಿಂದ ಕೂದಲುದುರುವಿಕೆ, ತಲೆಹೊಟ್ಟಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.