ಬಿಳಿ ಕೂದಲಿಗೆ ಮನೆಯಲ್ಲೇ ತಯಾರಿಸಿ ಹೇರ್ ಡೈ, ಕೇವಲ ಅರ್ಧಗಂಟೆಯಲ್ಲಿ ಗಾಢ ಕಪ್ಪಾದ ಕೂದಲು ನಿಮ್ಮದಾಗಿಸಿ..!
ಒತ್ತಡಭರಿತ ಜೀವನಶೈಲಿ ಧೂಳು, ಮಾಲಿನ್ಯದಿಂದ ಮಾತ್ರವಲ್ಲದೆ, ದೇಹದಲ್ಲಿ ಕೆಲವು ಪೋಷಕಾಂಶಗಳ ಕೊರತೆಯಿಂದಲೂ ಕೂದಲು ಬೂದು ಬಣ್ಣಕ್ಕೆ ತಿರುಗಬಹುದು.
ಹೋಂ ಮೇಡ್ ಹೇರ್ ಡೈ ಸಹಾಯದಿಂದ ಬೂದುಬಣ್ಣಕ್ಕೆ ತಿರುಗಿರುವ ಕೂದಲನ್ನು ಸುಲಭವಾಗಿ ಹಾಗೂ ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಹೋಂ ಮೇಡ್ ಹೇರ್ ಡೈ ತಯಾರಿಸಲು ಬೇಕಾಗುವ ಪದಾರ್ಥಗಳೆಂದರೆ... * ಟೀ ಪುಡಿ- 1 ಸ್ಪೂನ್ * ಕಲೋಂಜಿ (ಕಪ್ಪು ಜೀರಿಗೆ) 2 ಸ್ಪೂನ್ * ಕರಿಬೇವಿನ ಸೊಪ್ಪು ಒಂದು ಹಿಡಿ * ಬೃಂಗರಾಜ್ ಪುಡಿ 1 ಸ್ಪೂನ್ * ಆಮ್ಲಾ ಪುಡಿ 2 ಸ್ಪೂನ್
ಮೊದಲಿಗೆ ಒಂದು ಕಬ್ಬಿಣದ ಬಾಣಲೆಯಲ್ಲಿ ಒಲೆಯ ಮೇಲಿಟ್ಟು ಕಾಯಿಸಿ ಇದರಲ್ಲಿ ಮೇಲೆ ತಿಳಿಸಿದ ಪ್ರಮಾಣದಲ್ಲಿ ಟೀ ಪುಡಿ, ಕಲೋಂಜಿ, ಕರಿಬೇವಿನ ಸೊಪ್ಪನ್ನು ಹಾಕಿ ಸಣ್ಣ ಉರಿಯಲ್ಲಿ ಅದು ಸಂಪೂರ್ಣ ಕಪ್ಪಗಾಗುವವರೆಗೂ ಬಾಡಿಸಿ. ನಂತರ ಈ ಮಿಶ್ರಣವನ್ನು ಒಂದು ಬದಿಗಿಟ್ಟು ಅದೇ ಬಾಣಲೆಯಲ್ಲಿ ಬೃಂಗರಾಜ್ ಪುಡಿ ಮತ್ತು ಆಮ್ಲಾ ಪುಡಿಯನ್ನು ಹಾಕಿ ಕಪ್ಪಗಾಗುವವರೆಗೂ ಹುರಿಯಿರಿ.
ಬೃಂಗರಾಜ್, ಆಮ್ಲಾ ಪುಡಿ ಕಪ್ಪಾದ ಬಳಿಕ ಇದಕ್ಕೆ 1 ಲೋಟದಷ್ಟು ನೀರು ಸೇರಿಸಿ. ಬಳಿಕ ಮೊದಲು ಹುರಿದು ಪಕ್ಕಕ್ಕಿಟ್ಟ ಟೀ, ಕಲೋಂಜಿ, ಕರಿಬೇವನ್ನು ನುಣ್ಣಗೆ ಪುಡಿ ಮಾಡಿ. ಇದರಲ್ಲಿ ಬೆರೆಸಿ. ಎಲ್ಲವನ್ನೂ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಯಲು ಬಿಡಿ. ನಂತರ 2 ಗಂಟೆಗಳ ಕಾಲ ಅದನ್ನು ತಣ್ಣಗಾಗಲು ಬಿಡಿ.
ಮನೆಯಲ್ಲಿಯೇ ತಯಾರಿಸಿದ ಈ ಹೇರ್ ಡೈಯನ್ನು ಕೂದಲಿನ ಬುಡದಿಂದ ತುದಿಯವರೆಗೂ ಅನ್ವಯಿಸಿ. ಅರ್ಧಗಂಟೆ ಬಳಿಕ ಬರೀ ನೀರಿನಿಂದ ಹೇರ್ ವಾಶ್ ಮಾಡಿ. ಮರುದಿನ ಶಾಂಪೂ ಮಾಡಿ. ಇದರಿಂದ ನೈಸರ್ಗಿಕವಾಗಿ ಬಿಳಿ ಕೂದಲು ಕಪ್ಪಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.