ಕೆಮಿಕಲ್, ಹೇರ್ ಡೈ ಇಲ್ಲದೆಯೇ ನ್ಯಾಚುರಲ್ ಆಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಹೆನ್ನಾ ಪುಡಿಯನ್ನು ಹೀಗೆ ಬಳಸಿ!
)
ನೀವು ಹೇರ್ ಡೈ ಬಳಸದೆಯೂ ನಿಮ್ಮ ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
)
ಮೆಹಂದಿ ಸಹಾಯದಿಂದ ಬಿಳಿ ಕೂದಲನ್ನು ಒಂದೇ ಬಾರಿಗೆ ಬುಡದಿಂದ ಕಪ್ಪಾಗಿಸಬಹುದು. ಆದರೆ, ಇದನ್ನು ಸರಿಯಾಗಿ ಬಳಸಿದರಷ್ಟೇ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.
)
ಮೊದಲಿಗೆ ಒಂದು ಬಾಣಲೆಯನ್ನು ಒಲೆಯ ಮೇಲೆ ಕಾಯಲು ಬಿಟ್ಟು ಬಳಿಕ ಇದರಲ್ಲಿ 2 ಸ್ಪೂನ್ ಮೆಹಂದಿ ಮತ್ತು ಒಂದು ಸ್ಪೂನ್ ಆಮ್ಲಾ ಪುಡಿಯನ್ನು ಹಾಕಿ ಚೆನ್ನಾಗಿ ಈ ಪುಡಿ ಕಪ್ಪಾಗುವವರೆಗೂ ಹುರಿಯಿರಿ. ಪುಡಿ ತಣ್ಣಗಾದ ಬಳಿಕ ಒಂದು ಬಟ್ಟಲಿನಲ್ಲಿ ತೆಗೆದಿಡಿ.
ಕಪ್ಪಾಗುವವರೆಗೂ ಹುರಿದಿರುವ ಮೆಹಂದಿ, ಆಮ್ಲಾ ಪುಡಿಯಲ್ಲಿ 1 ಸ್ಪೂನ್ ಅಲೋವೆರಾ ಜೆಲ್, 2 ಸ್ಪೂನ್ ಎಣ್ಣೆ (ಕೊಬ್ಬರಿ/ಸಾಸಿವೆ)ಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಹೋಂ ಮೇಡ್ ಹೇರ್ ಡೈ ತಯಾರಾಗುತ್ತದೆ.
ಸ್ವಚ್ಛವಾಗಿರುವ (ಎಣ್ಣೆಯುಕ್ತವಲ್ಲದ) ಕೂದಲಿನ ಬುಡಕ್ಕೆ ಈ ಹೋಂ ಮೇಡ್ ಹೇರ್ ಡೈ ಅನ್ನು ಹಾಕಿ ಎರಡೂ ಕೈಗಳಿಂದ ಲಘುವಾಗಿ ಮಸಾಜ್ ಮಾಡಿ. ಮೂರು ಗಂಟೆಗಳ ಬಳಿಕ ಬರೀ ನೀರಿನಿಂದ ಹೇರ್ ವಾಶ್ ಮಾಡಿ. ಬೇಕೆಂದರೆ ಈ ಹೇರ್ ಡೈ ಅನ್ನು ರಾತ್ರಿ ಕೂದಲಿಗೆ ಹಚ್ಚಿ ಬೆಳಿಗ್ಗೆ ಹೇರ್ ವಾಶ್ ಮಾಡಬಹುದು.
ಮೆಹಂದಿ ಪುಡಿಯನ್ನು ಈ ರೀತಿ ಬಳಸುವುದರಿಂದ ಬಿಳಿ ಕೂದಲು ಒಂದೇ ಬಾರಿಗೆ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಜೊತೆಗೆ ಈ ಹೋಂ ಮೇಡ್ ಹೇರ್ ಡೈ ನಿಂದ ತಲೆಹೊಟ್ಟು, ಕೂದಲು ಉದುರುವಿಕೆ ಸಮಸ್ಯೆಯನ್ನು ನಿವಾರಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.