ದಾಸವಾಳದ ಹೂ, ಎಲೆಗಳಿಂದ ತಯಾರಿಸಿದ ಎಣ್ಣೆ ಹಚ್ಚಿ ಕೂದಲುದುರುವಿಕೆಗೆ ಬ್ರೇಕ್ ಹಾಕಿ, ಬಿಳಿ ಕೂದಲು ಬುಡದಿಂದಲೂ ಕಪ್ಪಾಗುತ್ತೆ
ದಾಸವಾಳದ ಹೂವು, ಎಲೆಗಳಿಂದ ತಯಾರಿಸಿದ ಎಣ್ಣೆಯನ್ನು ತಿಂಗಳುಗಳವರೆಗೆ ಸಂಗ್ರಹಿಸಬಹುದಾಗಿದೆ. ಈ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗಿ ಬಿಳಿ ಕೂದಲು ಕೂಡ ಬುಡದಿಂದಲೂ ಕಡು ಕಪ್ಪಾಗುತ್ತದೆ.
ನೈಸರ್ಗಿಕ ಕೂದಲಿನ ಉತ್ಪನ್ನಗಳಿಗೆ ದಾಸವಾಳವನ್ನು ಬಳಸಲಾಗುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಗುಣಗಳು, ಅಮೈನೋ ಆಮ್ಲಗಳು ಮತ್ತು ಫ್ಲೇವನಾಯ್ಡ್ಗಳು, ಕ್ಯಾಲ್ಸಿಯಂ, ಕಬ್ಬಿಣ, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ಪೋಷಕಾಂಶಗಳು ಕೂದಲಿಗೆ ಹಲವು ರೀತಿಯಲ್ಲಿ ಸಹಕಾರಿ ಆಗಿವೆ.
ಮನೆಯಲ್ಲಿ ದಾಸವಾಳದ ಎಣ್ಣೆ ತಯಾರಿಸಲು ಮೊದಲು 10-15 ಕೆಂಪು ದಾಸವಾಳವನ್ನು ತೆಗೆದುಕೊಂಡು ಇದರೊಂದಿಗೆ ಒಂದು ಹಿಡಿ ದಾಸವಾಳದ ಎಲೆಗಳನ್ನು ತೆಗೆದುಕೊಳ್ಳಿ. ಎರಡನ್ನೂ ಚೆನ್ನಾಗಿ ತೊಳೆದು ಅದು ಫುಲ್ ಒಣಗಳು ಬಿಡಿ.
ಒಂದು ಬಾಣಲೆಯಲ್ಲಿ ತೆಂಗಿನೆಣ್ಣೆಯನ್ನು ಹಾಕಿ ಇದರಲ್ಲಿ ಚೆನ್ನಾಗಿ ತೊಳೆದು ಒಣಗಿಸಿ ಇಟ್ಟುಕೊಂಡಿರುವ ದಾಸವಾಳದ ಎಲೆ ಹೂಗಳನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಬಣ್ಣ ಬದಲಾಗುವವರೆಗೂ ಎಣ್ಣೆಯನ್ನು ಕಾಯಿಸಿ. 5-6 ಗಂಟೆಗಳ ನಂತರ ಒಂದು ಗಾಜಿನ ಬಾಟಲಿನಲ್ಲಿ ಎಣ್ಣೆಯನ್ನು ಸಂಗ್ರಹಿಸಿ.
ಈ ರೀತಿ ತಯಾರಿಸಿಟ್ಟ ದಾಸವಾಳದ ಎಣ್ಣೆಯನ್ನು ವಾರದಲ್ಲಿ ಎರಡು ಬಾರಿ ಕೂದಲಿಗೆ ಹಚ್ಚಿ ಲಘುವಾಗಿ ಮಸಾಜ್ ಮಾಡಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.