ಮಲಗಿದ್ದಾಗ ಸೊಳ್ಳೆ ಕಚ್ಚುತ್ತಾ? ಚಿಂತೆ ಬೇಡ... ರಾತ್ರಿ ವೇಳೆ ಬೆಡ್ರೂಮ್ʼನಲ್ಲಿ ಈ ಹಣ್ಣಿನ ಸಿಪ್ಪೆ ಇಟ್ಟರೆ ಸಾಕು, ಅದರ ವಾಸನೆಗೇ ಓಡಿಹೋಗುತ್ತವೆ!
ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಅದೆಷ್ಟೋ ಸ್ಪ್ರೇ, ಸೊಳ್ಳೆ ಬತ್ತಿ, ಪರದೆಗಳನ್ನು ಬಳಸಲಾಗುತ್ತದೆ. ಆದರೂ ಸೊಳ್ಳೆ ಕಾಟಕ್ಕೆ ಮುಕ್ತಿಯೇ ಸಿಗಲ್ಲ. ಹೀಗಿದ್ದಾಗ ನಾವಿಂದು ಸುಲಭ ಟಿಪ್ಸ್ ಅನ್ನು ನಿಮಗೆ ಹೇಳಲಿದ್ದೇವೆ. ಇದರಿಂದ ಶಾಶ್ವತ ಪರಿಹಾರ ಪಡೆಯಬಹುದು.
ಸೊಳ್ಳೆಯಿಂದ ಡೆಂಗ್ಯೂ ಮತ್ತು ಮಲೇರಿಯಾದಂತಹ ಮಾರಣಾಂತಿಕ ಕಾಯಿಲೆಗಳು ಬರುತ್ತವೆ. ಕೆಲ ಮನೆಗಳಲ್ಲಿ ಸ್ವಚ್ಛತೆ ಇಲ್ಲದಿರುವುದು ಕೂಡ ಸೊಳ್ಳೆ ಉತ್ಪತ್ತಿಗೆ ಕಾರಣವಾಗುತ್ತವೆ. ಸೊಳ್ಳೆಗಳನ್ನು ಓಡಿಸಲು ಮಾರುಕಟ್ಟೆಯಲ್ಲಿ ಹಲವು ಪರಿಹಾರಗಳಿವೆ. ಆದರೆ ನಾವಿಂದು ಬಹಳಷ್ಟು ಸುಲಭದ ಪರಿಹಾರವನ್ನು ನಿಮಗೆ ತಿಳಿಸಲಿದ್ದೇವೆ.
ನಿಂಬೆ ಹಣ್ಣನ್ನು ಸೊಳ್ಳೆ ಓಡಿಸಲು ಸಹ ಬಳಸಬಹುದು. ಹೇಗೆಂದು ಮುಂದೆ ತಿಳಿದುಕೊಳ್ಳೋಣ.
ನಿಂಬೆ ಹಣ್ಣಿನ ಸಿಪ್ಪೆಯನ್ನು ಮತ್ತು ನೀಲಗಿರಿ ಎಣ್ಣೆಯನ್ನು ನೀರಿನಲ್ಲಿ ಬೆರೆಸಿ ಸ್ಪ್ರೇ ಮಾಡಬೇಕು. ಇದು ಬಹಳಷ್ಟು ಪ್ರಯೋಜನಕಾರಿ ಟಿಪ್ಸ್ ಆಗಿದೆ.
ಇನ್ನೊಂದು ವಿಧಾನದಲ್ಲಿ ಹೇಳುವುದಾದರೆ, ನಿಂಬೆ ಹಣ್ಣಿನ ಸಿಪ್ಪೆಯನ್ನು ಮನೆಯ ಕೋಣೆಗಳಲ್ಲಿ ಅಥವಾ ಕಿಟಕಿ, ಬಾಗಿಲಿನ ಬಳಿ ಇಟ್ಟರೆ ಒಂದೇ ಒಂದು ಸೊಳ್ಳೆ ಕೂಡ ಮನೆಯೊಳಗೆ ಪ್ರವೇಶಿಸಲ್ಲ. ಏಕೆಂದರೆ ಇದರಲ್ಲಿರುವ ಸಿಟ್ರಸ್ ಅಂಶದ ವಾಸನೆಯನ್ನು ಸೊಳ್ಳೆಗಳಿಂದ ಸಹಿಸಿಕೊಳ್ಳಲು ಆಗುವುದಿಲ್ಲ. ಈ ಕಾರಣದಿಂದ ನಿಂಬೆ ಸಿಪ್ಪೆ ಸೊಳ್ಳೆ ನಿವಾರಕವಾಗಿ ಕೆಲಸ ಮಾಡುತ್ತದೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮನೆಮದ್ದುಗಳನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)