ಮಲಗಿದಾಗ ಸೊಳ್ಳೆ ಕಚ್ಚುತ್ತಾ? ರಾತ್ರಿ ವೇಳೆ ಬೆಡ್ರೂಮ್ʼನಲ್ಲಿ ನಿಂಬೆ ಸಿಪ್ಪೆಯನ್ನು ಇದರೊಟ್ಟಿಗೆ ಸುಟ್ಟು ಹಾಕಿ ಸಾಕು, ವಾಸನೆಗೇ ಓಡಿಹೋಗುತ್ತವೆ!
ನಿಂಬೆ ಹಣ್ಣಿನ ಸಿಪ್ಪೆ ಹಲವಾರು ಔಷಧೀಯ ಗುಣಗಳಿಂದ ಕೂಡಿದೆ. ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ನಿಂಬೆ ಹಣ್ಣಿನ ಸಿಪ್ಪೆ ಪ್ರಯೋಜನಕಾರಿಯಾಗಿದೆ.
ನಿಂಬೆ ಮತ್ತು ಸಾಸಿವೆ ಎಣ್ಣೆ ಸೊಳ್ಳೆಗಳನ್ನು ತೊಡೆದುಹಾಕಲು ಬಹಳ ಪರಿಣಾಮಕಾರಿ ಪರಿಹಾರವಾಗಿದೆ.
ನಿಂಬೆಯನ್ನು ಅರ್ಧದಷ್ಟು ಕತ್ತರಿಸಿ ಅದರ ತಿರುಳನ್ನು ತೆಗೆದುಹಾಕಿ. ನಿಂಬೆ ಸಿಪ್ಪೆಗೆ ಸಾಸಿವೆ ಎಣ್ಣೆ,ಲವಂಗ ಮತ್ತು ಕರ್ಪೂರವನ್ನು ಸೇರಿಸಿ.
ಇದಿಷ್ಟನ್ನೂ ಮಲಗುವ ಮುನ್ನ ಸುಟ್ಟುಹಾಕಿ. ಈ ಪರಿಹಾರವನ್ನು ಅನುಸರಿಸುವುದರಿಂದ ಸೊಳ್ಳೆಗಳು ನಿಮ್ಮ ಹತ್ತಿರ ಬರುವುದಿಲ್ಲ.
ನಿಂಬೆ ಹಣ್ಣಿನ ಸಿಪ್ಪೆಯನ್ನು ಮಲಗುವ ಕೋಣೆಯಲ್ಲಿ ಕಿಟಕಿ, ಬಾಗಿಲಿನ ಬಳಿ ಇಟ್ಟರೆ ಒಂದೇ ಒಂದು ಸೊಳ್ಳೆ ಒಳಗೆ ಪ್ರವೇಶಿಸುವುದಿಲ್ಲ.
ನಿಂಬೆ ಹಣ್ಣಿನ ಸಿಪ್ಪೆಯಲ್ಲಿರುವ ಸಿಟ್ರಸ್ ಅಂಶದ ವಾಸನೆಗೆ ಸೊಳ್ಳೆಳು ದೂರ ಹೋಗುತ್ತವೆ. ಈ ಕಾರಣದಿಂದ ನಿಂಬೆ ಸಿಪ್ಪೆ ಸೊಳ್ಳೆ ನಿವಾರಕವಾಗಿ ಕೆಲಸ ಮಾಡುತ್ತದೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮನೆಮದ್ದುಗಳನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)