ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆಗೆ ಬಲವಂತವಾಗಿ ಕಿಸ್‌ ಮಾಡಿದ ಖ್ಯಾತ ನಿರ್ದೇಶಕ! ಸೆನ್ಸೇಷನಲ್‌ ವಿಡಿಯೋ ವೈರಲ್

Thu, 18 Jul 2024-9:16 pm,

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್‌ ಸಿಂಗ್‌ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ದೀಪಿಕಾಗೆ ಸಂಬಂಧಿಸಿದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಸೆನ್ಸೇಷನ್‌ ಕ್ರಿಯೇಟ್‌ ಮಾಡಿದೆ.   

ಅಂದಹಾಗೆ, ಈ ವಿಡಿಯೋದಲ್ಲಿ ಕಾಣುತ್ತಿರುವಂತೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ಖ್ಯಾತ ನಿರ್ದೇಶಕ ಹೋಮಿ ಅದಾಜಾನಿಯಾ ಬಲವಂತವಾಗಿ ಚುಂಬಿಸುತ್ತಿದ್ದಾರೆ.  

ಇದು ಹಳೆಯ ವೀಡಿಯೊ ಆಗಿದ್ದು, ಪ್ರಸ್ತುತ ಮುನ್ನೆಲೆಗೆ ಬಂದಿದೆ. ಫೈಂಡಿಂಗ್ ಫ್ಯಾನಿ ಮತ್ತು ಕಾಕ್‌ʼಟೈಲ್ ಚಿತ್ರದ ನಿರ್ದೇಶಕನಾದ ಹೋಮಿ, ಆ ಸಂದರ್ಭದಲ್ಲಿ ತೋರಿದ ತನ್ನ ವರ್ತನೆಯಿಂದ ಭಾರೀ ಅವಮಾನ ಎದುರಿಸಿದ್ದರು.    

ವರದಿಗಳ ಪ್ರಕಾರ, ಚಿತ್ರ ನಿರ್ದೇಶಕ ಹೋಮಿ ಅದಾಜಾನಿಯಾ ಕುಡಿದು ದೀಪಿಕಾ ಪಡುಕೋಣೆ ಕೆನ್ನೆಗೆ ಬಲವಂತವಾಗಿ ಮುತ್ತಿಟ್ಟಿದ್ದಾರೆ. ಈ ಘಟನೆಯು ಮಾಧ್ಯಮಗಳ ಮುಂದೆಯೇ ನಡೆದಿದ್ದು, ಎಲ್ಲರನ್ನು ದಿಗ್ಭ್ರಮೆಗೊಳಿಸಿತ್ತು.  

ಅನಿರೀಕ್ಷಿತ ಮತ್ತು ಅಹಿತಕರ ಪರಿಸ್ಥಿತಿಯ ಹೊರತಾಗಿಯೂ, ದೀಪಿಕಾ ಪಡುಕೋಣೆ ಆ ಸಂದರ್ಭವನ್ನು ಶಾಂತವಾಗಿಯೇ ನಿಭಾಯಿಸಿದ್ದರು.   

ಈ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿತ್ತು. ನೆಟಿಜನ್‌ಗಳು ಅದಾಜಾನಿಯಾ  ನಡವಳಿಕೆಯನ್ನು ಟೀಕಿಸಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link