ಹೊನ್ನವಳ್ಳಿ ಕೃಷ್ಣ ಹೆಂಡತಿ ಈ ಫೇಮಸ್ ನಟಿ.. ಮಕ್ಕಳು ಯಾರು ಗೊತ್ತೇ!
ನ್ಯಾಯವೇ ದೇವರು ಸಿನಿಮಾ ಮೂಲಕ ಬಣ್ಣದ ಲೋಕದ ಪಯಣ ಆರಂಭಿಸಿದ ಹೊನ್ನವಳ್ಳಿ ಕೃಷ್ಣ ಇಂದಿಗೂ ಹಲವು ಸಿನಿಮಾಗಳಲ್ಲಿ ಪೋಷಕ ನಟನಾಗಿ ಅಭಿನಯಿಸುತ್ತಾರೆ.
ಡಾ.ರಾಜಕುಮಾರ್ ರವರ ಜೊತೆ 45 ವರ್ಷ ಅವಿನಾಭಾವ ಒಡನಾಟ ಹೊಂದಿದ್ದರು. ಇವರು ಮೂಲತಃ ಅರಕಲಗೂಡು ತಾಲೂಕಿನ ಹೊನ್ನವಳ್ಳಿಯವರು.
ಸುಮಾರು 40 ಚಿತ್ರಗಳಿಗೆ ಸಹನಿರ್ದೇಶಕರಾಗಿರುವ ಹೊನ್ನವಳ್ಳಿ ರಾಜಕುಮಾರ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್ ಹೀಗೆ ಆ ಕಾಲದ ಸ್ಟಾರ್ ಹೀರೋಗಳ ಜೊತೆ ತೆರೆ ಹಂಚಿಕೊಂಡವರು.
ಹೊನ್ನವಳ್ಳಿ ಕೃಷ್ಣ ಪತ್ನಿ ಸಹ ಕಿರುತೆರೆಯಲ್ಲಿ ನಟಿಸಿ ಫೇಮಸ್ ಆದವರು ಎಂಬ ಮಾತು ಗಾಂಧಿನಗರದಲ್ಲಿದೆ.
ಹೊನ್ನವಳ್ಳಿ ಕೃಷ್ಣ ಪತ್ನಿ ಹೆಸರು ಜಲಜಮ್ಮ ಎನ್ನಲಾಗಿದೆ. ಇವರು ಸಹ ಸಿನಿರಂಗದೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ.
ಹೊನ್ನವಳ್ಳಿ ಕೃಷ್ಣ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ ಎನ್ನಲಾಗುತ್ತದೆ. ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ ಎನ್ನಲಾಗಿದೆ.