ಶನಿ-ಗುರು ಸೇರಿ ಮುಂದಿನ ವರ್ಷ ಈ ರಾಶಿಗಳ ಜನರ ಭಾಗ್ಯವನ್ನೇ ಬದಲಿಸಲಿದ್ದಾರೆ, ಕರುಣಿಸಲಿದ್ದಾರೆ ಅಪಾರ ಧನ-ಸಂಪತ್ತು-ಪ್ರತಿಷ್ಠೆ!
Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ, ಗುರು ಸೇರಿದಂತೆ ರಾಹು-ಕೇತುಗಳ ಸ್ಥಿತಿ ಲೆಕ್ಕಾಚಾರದಲ್ಲಿ ಹೊಸ ವರ್ಷ 2024 ಕೆಲ ರಾಶಿಗಳ ಜನರ ಭಾಗ್ಯವನ್ನೇ ಬದಲಾಯಿಸಲಿದ್ದು, ಅವರ ಜೀವನದಲ್ಲಿ ಧನಧಾನ್ಯ ಹೆಚ್ಚಳದ ಜೊತೆಗೆ ಸ್ಥಾನಮಾನ ಪ್ರತಿಷ್ಠೆಯನ್ನು ಕೂಡ ಹೆಚ್ಚಿಸಲಿದೆ. (Spiritual News In Kannada)
ಮೇಷ ರಾಶಿ: ವರ್ಷ 2024 ಮೇಷ ರಾಶಿಯ ಜನರ ಪಾಲಿಗೆ ಅದ್ಭುತವಾಗಿರಲಿದೆ. ಮೇ ತಿಂಗಳಿನವರೆಗೆ ಗುರು ನಿಮ್ಮ ಜಾತಕದ ಪ್ರಥಮ ಭಾವದಲ್ಲಿರಲಿದ್ದಾನೆ. ಹೀಗಿರುವಾಗ ಗುರುವಿನ ಕೃಪೆಯಿಂದ ನಿಮಗೆ ಸಮಾಜದಲ್ಲಿ ಘನತೆ-ಗೌರವ ಪ್ರಾಪ್ತಿಯಾಗಲಿದೆ. ಆಕಸ್ಮಿಕ ಧನಲಾಭ ಯೋಗ ಕೂಡ ಉಂಟಾಗಲಿದ್ದು, ಇದು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಅಪಾರ ಮಟ್ಟದಲ್ಲಿ ಹೆಚ್ಚಿಸಲಿದೆ. ನಿಮ್ಮ ಮಾತಿನ ಪ್ರಭಾವದಿಂದ ನೀವು ಸಮಾಜದಲ್ಲಿ ಘನತೆ-ಗೌರವವನ್ನು ಪಡೆದುಕೊಳ್ಳುವಿರಿ. ಇನ್ನೊಂದೆಡೆ ಶನಿ ಏಕಾದಶ ಭಾವದಲ್ಲಿ ಇರುವ ಕಾರಣ ವೃತ್ತಿ ಜೀವನದಲ್ಲಿ ಅಪಾರ ಲಾಭ ನಿಮ್ಮದಾಗಲಿದೆ. ಈ ಅವಧಿಯಲ್ಲಿ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ನಿಮಗೆ ಗುರುದೇವನ ಜೊತೆಗೆ ಶನಿದೇವನ ಅಪಾರ ಕೃಪೆ ಪ್ರಾಪ್ತಿಯಾಗಲಿದೆ.
ಮಿಥುನ ರಾಶಿ: ವರ್ಷ 2024 ಮಿಥುನ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಉತ್ತಮ ಸಾಬೀತಾಗಲಿದೆ. ಗುರು ಪ್ರಥಮ ಭಾವದಲ್ಲಿ ವಿರಾಜಮಾನನಾಗಿರಲಿದ್ದು ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿರಲಿದೆ. ವೈವಾಹಿಕ ಜೀವನದಲ್ಲಿ ಬರುತ್ತಿರುವ ಸಮಸ್ಯೆಗಳು ಕೊನೆಗೊಳ್ಳಲಿವೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ಸಿಗುವ ಕಾರಣ ನಿಂತುಹೋದ ಕೆಲಸ ಕಾರ್ಯಗಳು ಪುನಾರಂಭಗೊಳ್ಳಲಿವೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ. ಹಾಗಾದರೆ ಚತುರ್ಥ ಭಾವದಲ್ಲಿ ಕೇತು ಇರುವ ಕಾರಣ ಕೆಲ ಕೌಟುಂಬಿಕ ಸಮಸ್ಯೆಗಳು ಉದ್ಭವಿಸುವ ಸಾಧ್ಯತೆ ಇದ್ದು, ಗುರು ಬೃಹಸ್ಪತಿ ನಿಮ್ಮನ್ನು ಪ್ರತಿಯೊಂದು ಸಮಸ್ಯೆಯಿಂದ ಕಾಪಾಡಲಿದ್ದಾನೆ. ವಿದೇಶ ಯಾತ್ರೆಯ ಅವಕಾಶ ಸಿಗುವ ಸಾಧ್ಯತೆ ಇದೆ.
ಕರ್ಕ ರಾಶಿ: ವರ್ಷ 2024 ಕರ್ಕ ರಾಶಿಯ ಜಾತಕದವರಿಗೆ ಅತ್ಯಂತ ಉತ್ತಮವಾಗಿರಲಿದೆ. ವರ್ಷದ ಆರಂಭದಲ್ಲಿ ಗುರು ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ವಿರಾಜಮಾನನಾಗಿರಲಿದ್ದಾನೆ. ಹೀಗಿರುವಾಗ ಕೌಟುಂಬಿಕ ಜೀವನ ಮತ್ತು ವೃತ್ತಿ ಜೀವನದಲ್ಲಿ ಸಮತೋಲನ ಇರಲಿದೆ. ಮೇ ತಿಂಗಳಿನಲ್ಲಿ ಗುರು ವೃಷಭ ರಾಶಿಗೆ ಪ್ರವೇಶಿಸುವ ಕಾರಣ ಈ ರಾಶಿಯ ಜನರಿಗೆ ಭಾಗ್ಯದ ಸಾಥ್ ಸಿಗಲಿದೆ. ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಇದಲ್ಲದೆ ಆಧ್ಯಾತ್ಮದತ್ತ ಈ ರಾಶಿಯ ಜನರು ಸಾಗುವರು. ರಾಹು ನವಮ ಭಾವದಲ್ಲಿ ಇರುವ ಕಾರಣ ತೀರ್ಥ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಶನಿಯ ಕಾರಣ ಹೆಚ್ಚು ಪರಿಶ್ರಮ ಪಾಡಬೇಕಾಗಲಿದೆ. ಆದರೆ, ಯಶಸ್ಸು ಖಂಡಿತ ಪ್ರಾಪ್ತಿಯಾಗಲಿದೆ. ಹೊಸ ವರ್ಷ ವಿದ್ಯಾರ್ಥಿಗಳ ಪಾಲಿಗೆ ಉತ್ತಮವಾಗಿರಲಿದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಆದರೆ ಆರೋಗ್ಯದ ಪ್ರತಿ ಸ್ವಲ್ಪ ಜಾಗರೂಕರಾಗಿರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)