ವರ್ಷಾರಂಭದಲ್ಲಿಯೇ ಮಂಗಳನ ಉದಯ, ಈ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!
Horoscope 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಾಹಸ ಹಾಗೂ ಶೌರ್ಯದ ಪ್ರತೀಕ ಎಂದೇ ಭಾವಿಸಲಾಗುವ ಗ್ರಹಗಳ ಸೇನಾಪತಿ ಮಂಗಳ ಮುಂದಿನ ವರ್ಷದ ಆರಂಭದಲ್ಲಿಯೇ ಉದಯಿಸಲಿದ್ದಾನೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ.
ಮೇಷ ರಾಶಿ: ಮಂಗಳ ನಿಮ್ಮ ರಾಶಿಗೆ ಅಧಿಪತಿಯಾಗಿರುವ ಜೊತೆಗೆ ಆತ ಇಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ವೃತ್ತಿ ಜೀವನದಲ್ಲಿನ ಸೌಕರ್ಯಗಳಲ್ಲಿ ವೃದ್ಧಿಯನ್ನು ಕಾಣುವಿರಿ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಸಿಗಲಿದೆ. ಆಟೋಟ, ಪೊಲೀಸ್, ಗುಪ್ತಚರ ಸಂಸ್ಥೆ, ಸೇನೆ ಹಾಗೂ ವೈದ್ಯಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ವರ್ಷ 2024 ಅತ್ಯುತ್ತಮ ಸಾಬೀತಾಗಲಿದೆ. ಇದರ ಜೊತೆಗೆ ಈ ಅವಧಿಯಲ್ಲಿ ನಿಮಗೆ ನಿಮ್ಮ ಪಿತ್ರಾರ್ಜಿತ ಆಸ್ತಿಯ ಲಾಭ ಸಿಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಮಂಗಳನ ಉದಯ ನಿಮಗೆ ಅತ್ಯಂತ ಶುಭ ಸಾಬೀತಾಗಲ್ಲಿದ್ದು, ಸಾಕಷ್ಟು ಲಾಭವನ್ನು ತಂದು ಕೊಡಲಿದೆ.
ಧನು ರಾಶಿ: ಮಂಗಳನ ಉದಯ ನಿಮ್ಮ ಪಾಲಿಗೆ ಶುಭವಾಗಿರಲಿದೆ. ಮಂಗಳ ನಿಮ್ಮ ಗೋಚರ ಜಾತಕದ ಧನ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಮತ್ತು ಪರಾಕ್ರಮ ಹೆಚ್ಚಾಗಲಿದೆ. ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದೆ. ನಿಂತುಹೋದ ಹಣ ನಿಮ್ಮ ಬಳಿ ಮರಳಲಿದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇನ್ನೊಂದೆಡೆ ಮಂಗಳ ನಿಮ್ಮ ಜಾತಕದ ಪಂಚಮ ಹಾಗೂ ದ್ವಾದಶ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿ ಯಶಸ್ಸನ್ನು ಕಾಣುವಿರಿ, ಮಕ್ಕಳ ಕಡೆಯಿಂದ ಉತ್ತಮ ಸುದ್ದಿ ಸಿಗುವ ಸಾಧ್ಯತೆ ಇದೆ,
ಮಕರ ರಾಶಿ: ಮಂಗಳ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ಅಪಾರ ಆತ್ಮವಿಶ್ವಾಸದಿಂದ ತುಂಬಿರುವಿರಿ, ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯವನ್ನು ನೀವು ಕಾಣುವಿರಿ, ಈ ಅವಧಿಯಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮದಿಂದ ಕೆಲ್ಲ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುವಿರಿ, ವೃತ್ತಿ ಜೀವನದಲ್ಲಿ ನಿಮಗೆ ಹೊಸ ಅವಕಾಶಗಳು ಒದಗಿಬರಲಿವೆ. ಇನ್ನೊಂದೆಡೆ ಮಂಗಳ ನಿಮ್ಮ ಗೋಚರ ಜಾತಕದ ಚತುರ್ಥ ಹಾಗೂ ಆದಾಯ ಭಾವದ ಅಧಿಪತಿಯಾದ ಕಾರಣ ಈ ಅವಧಿಯಲ್ಲಿ ನೀವು ನಿಮ್ಮ ಆಧಾಯದಲ್ಲಿ ಅಪಾರ ವೃದ್ಧಿಯನ್ನು ಕಾಣಬಹುದು. ಆಸ್ತಿಪಾಸ್ತಿ, ವಾಹನ ಸುಖ ಪ್ರಾಪ್ತಿಯಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ನಿವೇಶನ ಆಸ್ತಿಪಾಸ್ತಿ ಖರೀದಿ-ಬಿಕರಿಯಿಂದ ನಿಮಗೆ ಲಾಭ ಉಂಟಾಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)